ಮಾ19 ರಂದು ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಉದ್ಯೋಗ ಮೇಳ.

 ಮಧುಗಿರಿ : ಮಾ19 ರಂದು ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಉದ್ಯೋಗ ಮೇಳ ಹಮ್ಮಿಕೊಳ್ಳಲಾಗಿದೆ ಎಂದು ಜನಮುಖಿ ಸಂಸ್ಥೆ ಅಧ್ಯಕ್ಷ ಎಲ್.ಸಿ.ನಾಗರಾಜು ತಿಳಿಸಿದರು.


ಪಟ್ಟಣದ ನಿರೀಕ್ಷಣಾ ಮಂದಿರದಲ್ಲಿ ಭಾನುವಾರ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ತಾಲ್ಲೂಕು ಕೃಷಿ ಆಧಾರಿತ ಪ್ರದೇಶವಾಗಿದೆ. ಸದಾ ಬರಪೀಡಿತವಾಗಿದ್ದು ಇಲ್ಲಿ ಉದ್ಯೋಗಕ್ಕೆ ಯಾವುದೇ ಅವಕಾಶಗಳು ಇಲ್ಲದಿರುವುದರಿಂದ ಬಡತನದಿಂದಾಗಿ ಸಾವಿರಾರು ಯುವಕರು ಉಧ್ಯೋಗ ಅರಸಿ ಗುಳೆ ಹೋಗುತ್ತಿದ್ದಾರೆ. ಸ್ಥಳೀಯ ಯುವಕರಿಗೆ ಉಧ್ಯೋಗ ಅವಕಾಶ ಕಲ್ಪಿಸಲು ಈ ಉದ್ಯೋಗ ಮೇಳವನ್ನು ಆಯೋಜಿಸಲಾಗುತ್ತಿದ್ದು ಹೆಸರಾಂತ ಕಂಪನಿಗಳು, ಏಜನ್ಸಿಗಳು ಭಾಗವಹಿಸುತ್ತಿದೆ. 18 ರಿಂದ 35 ವರ್ಷದವರೆಗಿನ ಯುವಕ, ಯುವತಿಯರು ಹಾಗೂ ವಿಕಲಚೇತನ ಅಭ್ಯರ್ಥಿಗಳು ಅಗತ್ಯ ದಾಖಲೆಗಳೊಂದಿಗೆ ಮೇಳದಲ್ಲಿ ಭಾಗವಹಿಸಬಹುದು ಎಂದರು.



 *ಈ ತಾಲ್ಲೂಕಿನ ಸ್ಥಳಿಯ ವ್ಯಕ್ತಿಯೊಬ್ಬರು ಶಾಸಕರಾಗಬೇಕು ಎನ್ನುವ ಕನಸು ನನ್ನದಾಗಿದ್ದು* ಸ್ಥಳೀಯರಿಗೆ ಒಂದು ಬಾರಿ ಅವಕಾಶ ನೀಡಬೇಕು ಎಂದು ಬಿಜೆಪಿ ಪಕ್ಷ ಸೇರುವ ಬಗ್ಗೆ ಚಿಂತನೆ ನಡೆಸಿದ್ದು ಪಕ್ಷ ಟಿಕೆಟ್ ನೀಡುವ ಒಪ್ಪಿಗೆ ಕೊಟ್ಟಿದ್ದು ಮಧುಗಿರಿಯಿಂದ ಸ್ಪರ್ದಿಸುವ ಇಚ್ಚೆಪಟ್ಟಿದ್ದೇನೆ. ಕ್ಷೇತ್ರದ ಹಲವಾರು ಜ್ವಲಂತ ಸಮಸ್ಯೆಗಳನ್ನು ಪರಿಹರಿಸಬೇಕಾಗಿದೆ ಎಂದ ಅವರು,ಕಳೆದ ಹಲವಾರು ವರ್ಷಗಳಿಂದ ತಾಲ್ಲೂಕಿನ ಎಲ್ಲಾ ವರ್ಗದ ಜನರೊಂದಿಗೆ ಸಂಪರ್ಕವಿರುವುದರಿಂದ ಜನತೆ ನನಗೆ ಅಶಿರ್ವಾದ ಮಾಡಲಿದ್ದಾರೆ ಎಂದು ತಿಳಿಸಿದರು. 


ಮುಖಂಡರಾದ ಟಿ.ಗೋವಿಂದರಾಜು, ಉಪ್ಪಾರಹಳ್ಳಿ ಶಿವಕುಮಾರ್, ಸುಧಾಕರ್, ಚಿತ್ತಪ್ಪ, ಸಿದ್ದೇಶ್, ಹನುಮಂತರಾಯಪ್ಪ, ಬೆಲ್ಲದಮಡಗು ಭರತ್, ಕೃಷ್ಣಪ್ಪ, ಟಿ.ಗಿರೀಶ್, ರಂಗರಾಜು, ಬೊಮ್ಮಣ್ಣ, ಅಶ್ವಥಪ್ಪ, ಕನಕದಾಸು ಮುಂತಾದವರು ಇದ್ದರು.


ವರದಿ ಮಧುಗಿರಿ ಬಾಲು ಪಣಿಂದ್ರ.

ಕಾಮೆಂಟ್‌‌ ಪೋಸ್ಟ್‌ ಮಾಡಿ

Please Select Embedded Mode To Show The Comment System.*

ನವೀನ ಹಳೆಯದು