ಶಿರಾ ನಗರದ ಸುಖೀನಗರ ಬಡಾವಣೆಯಲ್ಲಿ ದಿನಂಪ್ರತಿ ಪ್ರತಿಷ್ಠಿತರು ಓಡಾಡುವ ರಸ್ತೆ ಹಾಗೂ ಮಾಜಿ ಸಚಿವ ಟಿಬಿ ಜಯಚಂದ್ರ ಅವರ ನಿವಾಸದ ಬಳಿ ಪೋಲಾಗುತ್ತಿರುವ ನೀರು.
ಹಾಗೂ ರಾಜ್ಯ ಜೆಡಿಎಸ್ ಕೋರ್ ಕಮಿಟಿ ಸದಸ್ಯರಾದ ಆರ್ ಉಗ್ರೇಶ್ ಅವರು ದಿನನಿತ್ಯ ವಾಯು ವಾಯುವಿಹಾರ ಮಾಡುವ ಸ್ಥಳ ಜೋತೆಗೆ ತಮ್ಮ ಪುತ್ರಿಯ ಸದಸ್ಯತ್ವದ ವಾರ್ಡ್‌ನಲ್ಲಿಯೆ ಈ ರೀತಿ ಆಗಿರುವಾಗ ಸಾಮಾನ್ಯ ಬಡಾವಣೆಯ ಪರಿಸ್ಥಿತಿ..... ?
ನಗರದ ಸುಖೀ ನಗರ ಬಡಾವಣೆ ನೀರು ಕುಡಿಯುವ ನೀರು ಸರಬರಾಜು ಆಗುವ ನೀರಿನ ಪೈಪ್ ಹಲವಾರು ದಿನಗಳಿಂದ ಇದೆ ಪರಿಸ್ಥಿತಿ ಕಣ್ಣು ಮುಚ್ಚಿ ಕುಳಿತ ಸದಸ್ಯರು ಮತ್ತು ನಗರಸಭೆ...
ಬೇಸಿಗೆ ಆರಂಭ
ನೀರಿನ ಅಭಾವವಿದ್ದು, ನಾಗರಿಕರು ಕಡಿಮೆ ನೀರು ಖರ್ಚು ಮಾಡಬೇಕು ಸಂದರ್ಭದಲ್ಲಿ ಭಾರಿ ಪ್ರಮಾಣದ ನೀರು ಪೋಲಾಗಿ ಹೋಗಿದೆ.
ರಸ್ತೆಯಲ್ಲಿ ಮುಂಜಾನೆ ನಗರಸಭೆಯ ಕುಡಿಯುವ ನೀರಿನ ಭೂಗತ ಪೈಪ್ಲೈನ್ ಒಡೆದು ಹೋಗಿದ್ದು, ಇದರಿಂದ ರಸ್ತೆ ಬದಿಯಲ್ಲಿ ಭಾರಿ ನೀರು
ಜೋತೆಗೆ ಚರಂಡಿ ಕಸದರಾಶಿ ಸ್ವಚ್ಚತೆ ಇಲ್ಲದ ಚರಂಡಿ
ಕುಡಿಯುವ ನೀರಿನ ಪೈಪ್ ಮಾರ್ಗ ಮಧ್ಯೆ ಒಡೆದು ಹೋಗಿದ್ದು, ಪ್ರತಿದಿನ ನೀರು ರಸ್ತೆ ಪಕ್ಕದಲ್ಲಿ ಹರಿದು ಪೋಲಾಗುತ್ತಿದೆ.
ರಸ್ತೆಯಲ್ಲಿ ಸಂಚರಿಸುವ ಕೆಲವರು ಈ ನೀರನ್ನು ವಾಹನಗಳನ್ನು ತೊಳೆಯಲು ಬಳಸುತ್ತಿದ್ದಾರೆ. ಆದರೂ ಸ್ಥಳೀಯ ಜನ ಪ್ರತಿನಿಧಿಗಳಾಗಲಿ, ನಗರಸಭೆ ಅಧಿಕಾರಿಗಳಾಲಿ ಇತ್ತ ಗಮನ ನೀಡಿಲ್ಲ ಎಂದು ಆರೋಪಿಸಿರುವ
ಬಡಾವಣೆಯ ನಿವಾಸಿಗಳು
ಹಾಗೂ ಒಡೆದಿರುವ ಪೈಪ್ ಅನ್ನು ದುರಸ್ತಿಗೊಳಿಸಿ ನೀರು ಪೋಲಾಗುವುದನ್ನು
ತಪ್ಪಿಸಬೇಕೆಂದು ಒತ್ತಾಯಿಸಿದ್ದಾರೆ.
ವರದಿ:- ಶ್ರೀಮಂತ್ ಶಿರಾ.