ಶಿರಾ : ಚರಂಡಿ ಕಾಮಗಾರಿ ವಿಳಂಬ ಹಾಗೂ ಕಾಮಗಾರಿ ಸ್ಥಗಿತಗೊಳಿಸುತ್ತಿದ್ದ ಗುತ್ತಿಗೆದಾರ ಹಾಗೂ ಅಡಳಿತದ ವಿರುದ್ಧ ನಿವಾಸಿಗಳು ಆಕ್ರೋಶ.
ಅರೆ ಬರೆ ಚರಂಡಿ ಕಾಮಗಾರಿಯಿಂದಾಗಿ ಚರಂಡಿಯಲ್ಲಿ ನೀರು ಹರಿಯದಂತಾಗಿದೆ. ಇದರಿಂದ ಸೊಳ್ಳೆ ನೋಣ, ಕ್ರಿಮಿ ಕೀಟಗಳ ಬಾದೆ, ದುರ್ನಾತ ಇದರ ಮದ್ಯ ಕುಡಿಯುವ ನೀರಿನ ಘಟಕ ಚರಂಡಿ ಮದ್ಯದಲ್ಲಿ ಹಾದುಹೋಗುವ ನೀರಿನ ಘಟಕದ ಪೈಪ್...
ಶಿರಾ ತಾಲ್ಲೂಕಿನ ಕೊಟ್ಟ ಗ್ರಾಮ ಪಂಚಾಯತಿ ವ್ಯಾಪ್ತಿಯ ರಂಗಪುರ ಗೊಲ್ಲರಹಟ್ಟಿಯಲ್ಲಿ ಚರಂಡ ದುರಸ್ತಿ ಮಾಡುವ ನೆಪದಲ್ಲಿ ಚರಂಡಿ ಅಗಲವಿದ್ದು ದಾಟಲು ಹೋಗಿ ಮಕ್ಕಳು, ವೃದ್ದರು ಬಿದ್ದು ಗಾಯಗೊಂಡಿದ್ದಾರೆ. ರಸ್ತೆಯ ಅರ್ಧಭಾಗವು ಸಿಸಿ ರಸ್ತೆ ಅಭಿವೃದ್ಧಿಗೊಳಿಸುವುದು ಬಾಕಿ ಉಳಿದಿದೆ.
ಈ ಮದ್ಯ ಕಾಮಗಾರಿ ನೆಡೆಯುವ ಸಂದರ್ಭದಲ್ಲಿ
ಡೆಕ್ ಸ್ಲ್ಯಾಬ್ ನಿರ್ಮಾಣಕ್ಕೆ ಕಾಂಕ್ರಿಟೀಕರಣ ಹಾನಿ..
ಕಳೆದ ಐದು ತಿಂಗಳಿನಿಂದಲೂ ಕಾಮಗಾರಿ ಸ್ಥಗಿತಗೊಂಡಿದ್ದು, ಕೂಡಲೇ ಕಾಮಗಾರಿ ಪೂರ್ಣಗೊಳಿಸುವಂತೆ ತಾಲೂಕು ಮತ್ತು ಗ್ರಾಮಾಡಳಿತಕ್ಕೂ ಮನವಿ ಸಲ್ಲಿಸಿದ್ದರೂ ಸೂಕ್ತ ಸ್ಪಂದನೆ ದೊರೆತಿಲ್ಲ.
ಸಂಬಂಧಿಸಿದ ಅಧಿಕಾರಿಗಳು ಈ ಕುರಿತು ಜಾಗೃತಿವಹಿಸಬೇಕು. ಕೂಡಲೇ ಕಾಮಗಾರಿ ಆರಂಭಿಸದಿದ್ದಲ್ಲಿ ಹೋರಾಟ ಹಮ್ಮಿಕೊಳ್ಳುತ್ತೇವೆ ಎಂದು ಅಲ್ಲಿನ ನಿವಾಸಿಗಳ ಅಗ್ರಹ....
ವರದಿ ಶಿರಾ ಶ್ರೀಮಂತ್.