ಅವಧಿ ಮುಗಿದ ಫ್ಲೆಕ್ಸ್ ಬ್ಯಾನರ್ ತೆರವಿಗೆ ತಾಲೂಕು ಆಡಳಿತ ಸೂಚನೆ.

 ಚಿಕ್ಕನಾಯಕನಹಳ್ಳಿ : ವಿಧಾನಸಭೆ ಸಾರ್ವತ್ರಿಕ ಚುನಾವಣೆ 2023ರ ಸಂಬಂಧ ನಗರ ಹಾಗೂ ಗ್ರಾಮೀಣ ಪ್ರದೇಶಗಳ ವ್ಯಾಪ್ತಿಯಲ್ಲಿನ ಅನಧಿಕೃತ ಫ್ಲೆಕ್ಸ್ , ಬ್ಯಾನರ್ , ಬಟಿಂಗ್ಸ್ ಹಾಗೂ ಪ್ಲಾಗ್ ಗಳನ್ನು ತೆರವುಗೊಳಿಸುವಂತೆ ತಹಶೀಲ್ದಾರ್ ರವರು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ, ಪುರಸಭೆ ಮುಖ್ಯಾಧಿಕಾರಿಗಳಿಗೆ ಸೂಚಿಸಿದ್ದಾರೆ.


 ಚುನಾವಣೆ ಸಂಬಂಧ ನಗರ ಹಾಗೂ ಗ್ರಾಮೀಣ ಪ್ರದೇಶಗಳ ವ್ಯಾಪ್ತಿಯಲ್ಲಿ ಅನಿಧಿಕೃತವಾಗಿ ಅಳವಡಿಸಿರುವ ಹಾಗೂ ಅನುಮತಿ ಪಡೆದಿರುವ ಅವಧಿ ಮುಕ್ತಾಯಗೊಂಡು ತೆರವುಗೊಳಿಸದಿರುವ ಫ್ಲೆಕ್ಸ್, ಬ್ಯಾನರ್, ಬಂಟಿಂಗ್ಸ್, ಹಾಗೂ ಪ್ಲಾಗ್ ಗಳನ್ನು ಅತೀ ಜರೂರಾಗಿ ತೆರವುಗೊಳಿಸಲು ಅಗತ್ಯ ಕ್ರಮ ವಹಿಸುವುದು ಹಾಗೂ ಮುಂದೆ ತಮ್ಮ ವ್ಯಾಪ್ತಿಯಲ್ಲಿನ ಫ್ಲೆಕ್ಸ್, ಬ್ಯಾನರ್, ಬಂಟಿಂಗ್ಸ್ ಹಾಗೂ ಪ್ಲಾಗ್ ಗಳನ್ನು ಅಳವಡಿಸಲು ಅನುಮತಿ ನೀಡುವಾಗ ಅವಧಿ ಮುಗಿದ ನಂತರ ತೆರವುಗೊಳಿಸಲು ಸಂಬಂಧಿಸಿದವರಿಗೆ ಕಟ್ಟುನಿಟ್ಟಿನ ಸೂಚನೆ ನೀಡುವುದು, ಅನಧಿಕೃತ ಅನುಮತಿ ಪಡೆಯದೇ ಫ್ಲೆಕ್ಸ್ , ಬ್ಯಾನರ್, ಬಂಟಿಂಗ್ಸ್ ಹಾಗೂ ಪ್ಲಾಗ್ ಗಳನ್ನು ಅಳವಡಿಸುವ ವ್ಯಕ್ತಿಗಳ ವಿರುದ್ದ ಕಾನೂನು ಕ್ರಮ ಜರುಗಿಸುವಂತೆ ತಿಳಿಸಿದ್ದಾರೆ.


ಪುರಸಭಾ ಮುಖ್ಯ ಅಧಿಕಾರಿ ಶ್ರೀನಿವಾಸ್ ಪ್ರತಿಕ್ರಿಯಿಸಿ ನಮ್ಮ ಪುರಸಭೆ ವ್ಯಾಪ್ತಿಯಲ್ಲಿ ರಾಜಕೀಯ ಪಕ್ಷಗಳ ಮುಖಂಡರುಗಳ ಫೋಟೋ ಅಳವಡಿಸುವ ಸ್ಥಳೀಯ ಜಾಹೀರಾತು ಫಲಕಕ್ಕೆ ಪುರಸಭೆ ಆಡಳಿತದ ತೀರ್ಮಾನದಂತೆ

 (1)ಬಟ್ಟೆ ಬ್ಯಾನರ್ ಮತ್ತು ಫ್ಲೆಕ್ಸ್ ಗಳಿಗೆ ಒಂದು ಚದರ ಅಡಿಗೆ ಪ್ರತಿದಿನ ಕೆ 3 ರೂಗಳು,(2) ಬಾವುಟ ಗಳಿಗೆ ಪ್ರತಿ ದಿನಕ್ಕೆ ಒಂದು ಕ್ಕೆ 3 ರೂ, (3) ತೋರಣಗಳಿಗೆ ಬಂಟಿಂಗ್ಸ್ ಒಂದು ಚದರ ಅಡಿಗೆ ಪ್ರತಿದಿನಕ್ಕೆ 3 ರೂಗಳಂತೆ ಶುಲ್ಕ ಪಾವತಿ ನಿಯಮನುಸಾರ ಮುಂಚಿತ ದಿನವೇ ಅನುಮತಿ ಪಡೆದು ಕಾರ್ಯಕ್ರಮ ಮುಗಿದ ಮೇಲೆ ತೆರವುಗೊಳಿಸಬೇಕು, ಇಲ್ಲದಿದ್ದರೆ ಕೋರ್ಟ್ ಆದೇಶದ ಪ್ರಕಾರ ಸಂಬಂಧಪಟ್ಟವರ ಮೇಲೆ ಕಾನೂನು ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದರು.


ವರದಿ ಚಿಕ್ಕನಾಯಕನಹಳ್ಳಿ ಚಂದ್ರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

Please Select Embedded Mode To Show The Comment System.*

ನವೀನ ಹಳೆಯದು