ಕೆ.ಎಸ್.ಕಿರಣ್ ಕುಮಾರ್ ಗೆ ಯಾವುದಾದರೂ ನಿಗಮ ಮಂಡಳಿಯಲ್ಲಿ ಅಧ್ಯಕ್ಷ ಸ್ಥಾನ ನೀಡಲು ದಸಂಸ ಮುಖಂಡರ ಒತ್ತಾಯ.

 ಚಿಕ್ಕನಾಯಕನಹಳ್ಳಿ:ಕೆ.ಎಸ್.ಕಿರಣ್ ಕುಮಾರ್ ಗೆ ಯಾವುದಾದರೂ ನಿಗಮ ಮಂಡಳಿಯಲ್ಲಿ ಅಧ್ಯಕ್ಷ ಸ್ಥಾನ ನೀಡಲು ದಸಂಸ ಮುಖಂಡರ ಒತ್ತಾಯ.


ಪಟ್ಟಣದ ಅಂಬೇಡ್ಕರ್ ಭವನದಲ್ಲಿ ದಲಿತ ಮುಖಂಡರುಗಳಿಂದ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ

ಚಿಕ್ಕನಾಯಕನಹಳ್ಳಿ ವಿಧಾನಸಭಾ ಚುನಾವಣೆಯ ಪರಾಜಿತ ಕಾಂಗ್ರೆಸ್ ಅಭ್ಯರ್ಥಿ ಕೆ.ಎಸ್.ಕಿರಣ್ ಕುಮಾರ್ ಅವರಿಗೆ ಯಾವುದಾದರೂ ನಿಗಮ/ಮಂಡಳಿಯಲ್ಲಿ ಅಧ್ಯಕ್ಷ ಸ್ಥಾನ ಕಲ್ಪಿಸಬೇಕು ಎಂದು ಕಾಂಗ್ರೆಸ್ ಎಸ್ಸಿ ಘಟಕ,ಮಾದಿಗ ದಂಡೋರ ಸಮಿತಿ ಹಾಗೂ ದಸಂಸ ಸ್ಥಳೀಯ ಮುಖಂಡರು ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.


3೦ ವರ್ಷಗಳಿಂದ ಕ್ಷೇತ್ರದಲ್ಲಿ ಸತತ ಸೋಲಿನಿಂದ ಬಲಹೀನವಾಗಿದ್ದ ಕಾಂಗ್ರೆಸ್ ಪಕ್ಷ, 2018 ರಲ್ಲಿ ಜಯಚಂದ್ರ ಮಗ ಸಂತೋಷ್ ಜಯಚಂದ್ರ, 45 ಸಾವಿರ ಮತ, 2023 ರ ಕೆ.ಎಸ್. ಕಿರಣ್ ಕುಮಾರ್ 50 ಸಾವಿರ ಮತ ಗಳಿಕೆಯಲ್ಲಿ ಅವರ ಸೇರ್ಪಡೆಯಿಂದ ಕಾಂಗ್ರೆಸ್ ಬೇರು ಗಟ್ಟಿ ಗೊಳ್ಳುತ್ತಿದ್ದೂ ಪಕ್ಷ ಚೇತರಿಕೆ ಕಂಡಿದೆ.


ಮುಂಬರುವ ಲೋಕಸಭಾ ಸಂಸತ್ ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ಪಕ್ಷವನ್ನು ಇನ್ನಷ್ಟು ಬಲವರ್ಧನೆ ಮಾಡಲು ಪಕ್ಷವೂ ಕೆ. ಎಸ್.ಕಿರಣ್ ಕುಮಾರ್ ಅವರಿಗೆ ಬಲನೀಡಲು ಅವರಿಗೆ ಸರ್ಕಾರದಲ್ಲಿ ಸೂಕ್ತ ಸ್ಥಾನಮಾನ ಕಲ್ಪಿಸಬೇಕಾಗಿದೆ ಎಂದು ರಾಜ್ಯ ಮಾದಿಗ ದಂಡೋರ ಜಂಟಿ ಕಾರ್ಯದರ್ಶಿ ಬೇವಿನಹಳ್ಳಿ ಚನ್ನಬಸವಯ್ಯ, 

 ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.


ತಾಲ್ಲೂಕಿನ ಎತ್ತಿನಹೊಳೆ, ಹೇಮಾವತಿ, ಭದ್ರಾ ಮೇಲ್ದಂಡೆ ನೀರಾವರಿ ಯೋಜನೆಗಳ ಮೂಲಕ ತಾಲೂಕಿನ ಕೆರೆಗಳನ್ನು ತುಂಬಿಸುವ ಹಾಗೂ ಅಭಿವೃದ್ಧಿ ಕಾಮಗಾರಿಗಳು ನೆನೆಗುದಿಗೆ ಬಿದ್ದಿದು ರಾಜ್ಯ ಸರ್ಕಾರ ಅಗತ್ಯದಷ್ಟು ಅನುದಾನ ಬಿಡುಗಡೆ ಮಾಡಿ ಕಾಮಗಾರಿಗಳನ್ನು ಪೂರ್ಣಗೊಳಿಸಿ ರೈತರ ಬದುಕನ್ನು ಹಸನು ಮಾಡಬೇಕು. ಯಾವ ಕಾಮಗಾರಿಗಳನ್ನು ಮೊಟಕುಗೊಳಿಸಬಾರದು ಎಂದು ಮನವಿ ಮಾಡಿದರು.


ಈ ವೇಳೆ ದಸಂಸ ಅಧ್ಯಕ್ಷ ಲಿಂಗರಾಜು ಮಾತನಾಡಿ ರಾಜ್ಯದಲ್ಲಿ ಹೆಚ್ಚು ಕಾಂಗ್ರೇಸ್ ಪರ ದಸಂಸ, ಮಾದಿಗ ದಂಡೋರ ಸೇರಿ ಎಲ್ಲ ದಲಿತಪರ ಸಂಘಟನೆಗಳು ಈ ಬಾರಿ ಬೆಂಬಲ ನೀಡಿದ್ದರಿಂದ ಕಾಂಗ್ರೆಸ್ ಅಧಿಕಾರ ಹಿಡಿಯಲು ಸಾಧ್ಯವಾಗಿದೆ. ಸಾಮಾಜಿಕ ನ್ಯಾಯದಡಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಕ್ಕೆ ಸೇರಿದ 9 ಮಂದಿಗೆ ಸಚಿವ ಸ್ಥಾನ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಅಭಿನಂದಿಸುವುದಾಗಿ ತಿಳಿಸಿದರು.


ಚಿಕ್ಕನಾಯಕನಹಳ್ಳಿಯಲ್ಲಿ ಬಾಬು ಜಗಜೀವನರಾಂ ಭವನ 3.5 ಕೋಟಿ, ವಾಲ್ಮೀಕಿ ಭವನ ನಿರ್ಮಾಣಕ್ಕೆ 3 ಕೋಟಿ ಅನುದಾನ ನೀಡಿದ್ದ ಹಿಂದಿನ ಬಿಜೆಪಿ ಸರ್ಕಾರದ ಸಚಿವರು ಆಯಾ ಕಟ್ಟಿನ ನಿವೇಶನ ಲಭ್ಯವಿಲ್ಲವೆಂಬ ಕಾರಣ ನೀಡಿ ಕಟ್ಟಡ ನಿರ್ಮಾಣಕ್ಕೆ ಒತ್ತು ಕೊಡದೆ ನನೆಗುದಿಗೆ ಬಿದ್ದಿವೆ.


ಕ್ಷೇತ್ರದ ನೂತನ ಶಾಸಕರು ಸರ್ಕಾರದಿಂದ ಅಗತ್ಯ ನೆರವು ಪಡೆದು ಸೂಕ್ತ ಜಾಗದಲ್ಲಿ ಭವನ ನಿರ್ಮಾಣ ಕಾಮಗಾರಿ ಆರಂಭಿಸಬೇಕು ಎಂದು ಮನವಿ ಮಾಡಿದರು. 

ಈ ವೇಳೆ ಕಾಂಗ್ರೆಸ್ ಎಸ್ಸಿ ಘಟಕದ ತಾಲೂಕು ಅಧ್ಯಕ್ಷ ಅಗಸರಹಳ್ಳಿ ನರಸಿಂಹಮೂರ್ತಿ, ಉಪಾಧ್ಯಕ್ಷ ಬಾಚಿಹಳ್ಳಿ ಬಸವರಾಜ್, ರಂಗಸ್ವಾಮಿ, ರಂಗನಾಥ್, ಕೃಷ್ಣಮೂರ್ತಿ, ಗೋಷ್ಠಿಯಲ್ಲಿದ್ದರು.


ವರದಿ ಚಿಕ್ಕನಾಯಕನಹಳ್ಳಿ ಚಂದ್ರು

ಕಾಮೆಂಟ್‌‌ ಪೋಸ್ಟ್‌ ಮಾಡಿ

Please Select Embedded Mode To Show The Comment System.*

ನವೀನ ಹಳೆಯದು