ಗುಬ್ಬಿ ತಾಲೂಕಿನ ಕಸಬಾ ಹೋಬಳಿ ಸುರಿಗೇನಹಳ್ಳಿ ಗ್ರಾಮದ ರಂಗನಾಥ ಸ್ವಾಮಿ ಸಮುದಾಯ ಭವನದಲ್ಲಿ ಉಪವಿಭಾಗಾಧಿಕಾರಿ ಹೋಟೆಲ್ ಶಿವಪ್ಪ ಅವರು ಕಂದಾಯ ದಿನಾಚರಣೆಯನ್ನು ಉದ್ಘಾಟಿಸಿದರು.
ಉಪವಿಭಾಗಾಧಿಕಾರಿ ಹೋಟೆಲ್ ಶಿವಪ್ಪ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ ಕಂದಾಯ ಇಲಾಖೆ ನಿರಂತರವಾಗಿ ರೈತರ ಹಾಗೂ ಸಾರ್ವಜನಿಕರ ಸಂಪರ್ಕ ಸೇತುವೆಯಾಗಿ ಕಾರ್ಯನಿರ್ವಹಿಸುತ್ತಾ ಬರುತ್ತಿದೆ. ಹೀಗಾಗಿ ಸಾರ್ವಜನಿಕರ ಸಮಸ್ಯೆಗಳನ್ನು ತ್ವರಿತಗತಿಯಲ್ಲಿ ಇತ್ಯರ್ಥಗೊಳಿಸುವ ಮೂಲಕ ಅನುಮೋದನೆಗೊಂಡ ಎಲ್ಲ ಬಗೆಯ ದಾಖಲಾತಿಗಳನ್ನು ನೀಡಿ ಸಾಮಾಜಿಕ ಸೇವೆಗೆ ಮುಂದಾಗಬೇಕಿದೆ. ಜನ ಸಾಮಾನ್ಯರೊಂದಿಗೆ ನಿಕಟ ಸಂಪರ್ಕ ಹೊಂದುವ, ಅವರ ಕಷ್ಟ ಸುಖಗಳಿಗೆ ಹೆಚ್ಚು ಸ್ಪಂದಿಸುವ ಅವಕಾಶ ಕಂದಾಯ ಇಲಾಖೆಯ ನೌಕರರಿಗೆ ಸಿಗಲಿದೆ. ಆ ನಿಟ್ಟಿನಲ್ಲಿ ಇಲಾಖೆ ಇನ್ನಷ್ಟು ಜನಸ್ನೇಹಿಯಾಗಬೇಕು. ನೂರು ವರ್ಷ ತುಂಬಿದ ಬ್ರಿಟಿಷರ ಕಾಲದಲ್ಲಿ ನಿರ್ಮಿಸಿದ ಈ ಪಾರಂಪರಿಕ ಕಟ್ಟಡವನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಕಂದಾಯ ಭವನವನ್ನಾಗಿ ಮಾರ್ಪಡಿಸಿ, ತಾಲೂಕಿನ ಎಲ್ಲ ಕಂದಾಯ ವೃತ್ತದ ಅಧಿಕಾರಿಗಳು ಒಂದೇ ಸೂರಿನಡಿ ಕಾರ್ಯನಿರ್ವಹಿಸುವ ಅವಕಾಶ ಒದಗಿಬಂದಿದೆ ಎಂದು ತಿಳಿಸಿದರು.ತಹಶೀಲ್ದಾರ್ ಬಿ. ಆರತಿ ಮಾತನಾಡಿ ಕಂದಾಯ ಇಲಾಖೆಯು ಒಬ್ಬ ವ್ಯಕ್ತಿಯ ಜನನದಿಂದ ಆರಂಭವಾಗಿ ಮರಣದ ವರೆಗೆ ಎಲ್ಲಾ ಸೇವೆಗೆ ಅವಕಾಶವಿದ್ದು, ಇದು ನಮ್ಮ ಪುಣ್ಯ ಜನರಿಗೆ ಸ್ಪಂದಿಸಿ ಸೇವೆ ಮಾಡುವುದು ನಮ್ಮ ಜವಬ್ದಾರಿ. ಕಂದಾಯ ದಿನಾಚರಣೆ ದಿನದಿಂದ ಇಲಾಖೆಗೆ ಹೊಸ ವರ್ಷ ಆರಂಭ , ಕರ್ತವ್ಯದ ಜೊತೆಗೆ ಸೇವಾ ಮನೋಭಾವನೆಯನ್ನು ಅಳವಡಿಸಿಕೊಂಡು ಬಡವರನ್ನು ಅಲೆದಾಡಿಸದೇ ಶೀಘ್ರ ಸೇವೆ ಮಾಡಿ ಜನಪರವಾಗಿ ನಾವು ಜನಸೇವೆ ಮಾಡಬೇಕು ಎಂದು ತಹಶೀಲ್ದಾರ್ ಅಧಿಕಾರಿಗಳಿಗೆ ಕರೆ ನೀಡಿದರು.
ವೇದಿಕೆ ಕಾರ್ಯಕ್ರಮ ಬಳಿಕ ಕೇಕ್ ಕಟ್ಟು ಮಾಡಿ ಸಭ್ರಮಿಸಿ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಕಂದಾಯ ನಿರೀಕ್ಷಕರು, ಗ್ರಾಮ ಆಡಳಿತಾಧಿಕಾರಿಗಳು ಭಾಗಿ ಹಾಡುಗಳನ್ನು ಹಾಡುವ ಮುಖೇನ ಮನೋರಂಜಿಸಿದರು.
ಮ್ಯೂಸಿಕಲ್ ಚೇರ್, ಮೂಕ ನಟನೆ ಮೂಲಕ ಆಟಗಳನ್ನು ಆಡಿ ಮನೋ ಉಲ್ಲಾಸ ಉತ್ಸಾಹ ತುಂಬುವ ಕೆಲಸ ಮೂಡಿಬಂತು.
ಈ ಕಾರ್ಯಕ್ರಮದಲ್ಲಿ ಶಿರಸ್ತೇದಾರ್ ಗಳಾದ ಶ್ರೀರಂಗ, ಖಾನ್, ಕಂದಾಯ ನಿರೀಕ್ಷಕರಾದ ರಮೇಶ್, ನಾಗಭೂಷಣ್, ಶ್ರೀನಿವಾಸ್, ಮೋಹನ್, ಹಾಗೂ ಅಧಿಕಾರಿ ವೃಂದ ಉಪಸ್ಥಿತರಿದ್ದರು.
ಸಂಜಯ್ ಕೊಪ್ಪ ಗುಬ್ಬಿ