ಶಿರಾ:-ಖಾಸಗಿ ಶಾಲೆಗಳಲ್ಲಿ ಹೆಚ್ಚುವರಿ ಶುಲ್ಕ ವನ್ನು ಪಡೆಯುತ್ತಿದ್ದಾರೆ ಎಂಬ ಆರೋಪ ಮತ್ತು ಹಾಗೂ ಆರ್‌ಟಿಇ ಯೋಜನೆಯಡಿ ದಾಖಲಾದ ಮಕ್ಕಳ ದಾಖಲೆ ಜತೆಗೆ ಶೈಕ್ಷಣಿಕ ಪ್ರಗತಿ ಬಗ್ಗ ಪರಿಶೀಲನೆ ನಡೆಸಿದ ಶಿರಾ ಪ್ರಭಾರ ತಹಶೀಲ್ದಾರ್ ಶ್ರೀಮತಿ ನಾಗವೇಣಿ.
ನಗರದ ಖಾಸಗಿ ಶಾಲೆಗಳಲ್ಲಿ ಭೇಟಿ ನೀಡಿ, ಶಾಲಾ ಸಿಬ್ಬಂದಿ ಹಾಗೂ ಶಿಕ್ಷಕರಿಂದ ಮಾಹಿತಿ ಸಂಗ್ರಹಿಸಿದರು. ಜತೆಗೆ ಶಾಲೆಯಲ್ಲಿನ ಮೂಲ ಸೌಲಭ್ಯ ಗಳು ಹಾಗೂ ಆರ್‌ಟಿಇ ಯೋಜನೆಯಡಿ ದಾಖಲಾದ ಮಕ್ಕಳ ದಾಖಲೆ ಜತೆಗೆ ಶೈಕ್ಷಣಿಕ ಪ್ರಗತಿ ಬಗ್ಗ ಪರಿಶೀಲನೆ ನಡೆಸಿದರು.ಆರ್.ಟಿ.ಇ ಅಡಿ ಖಾಸಗಿ ಶಾಲೆಗಳಿಗೆ ಪ್ರವೇಶ ಪಡೆಯುವ ವಿದ್ಯಾರ್ಥಿಗಳ ಶೈಕ್ಷಣಿಕ ವೆಚ್ಚವನ್ನು ಸರ್ಕಾರ ಭರಿಸುತ್ತಿತ್ತು. ಆರ್.ಟಿ.ಇ ಬೇಡಿಕೆ ವರ್ಷದಿಂದ ವರ್ಷಕ್ಕೆಕಡಿಮೆ ಯಾಗುತ್ತಿದೆ,
ಸರ್ಕಾರಿ ಶಾಲೆಗಳು ಇಲ್ಲದ ದೂರ ಇರುವ ಖಾಸಗಿ ಶಾಲೆಗಳಲ್ಲಿ ಆರ್.ಟಿ.ಇ ಅಡಿಯಲ್ಲಿ ದಾಖಲಾತಿಗೆ ಅವಕಾಶ ನೀಡದೇ, ನಿರ್ಬಂಧ ಹೇರಲಾಗಿದೆ. ಹೀಗಾಗಿ ಸಹಜವಾಗಿಯೇ ಆರ್.ಟಿ.ಇ ಸೀಟುಗಳಿಗೆ ಬೇಡಿಕೆ ಇದ್ದರೂ ಲಭ್ಯವಿಲ್ಲ.ಇದರ ಬಗ್ಗೆ ಮಾಹಿತಿ ಪಡೆದರು ಮತ್ತು ಮುಂದಿನ ದಿನಗಳಲ್ಲಿ ಆರ್.ಟಿ.ಇ ಸೀಟುಗಳು ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಕಾರ್ಯದಲ್ಲಿ ತೊಡಗುವುದಾಗಿ ತಿಳಿಸಿದ್ದಾರೆ.ಈ ಬಗ್ಗೆ ಕ್ರಮ ಕೈಗೊಳ್ಳಲು
ಶಿಕ್ಷಣ ಇಲಾಖೆಯ ಅಧಿಕಾರಿಗಳ ಜತೆ ಚರ್ಚಿಸಿ ಸಮಸ್ಯೆಗಳಿಗೆ ಪರಿಹಾರವನ್ನು ದೊರಕಿಸಿ ಕೊಡಲು ಕ್ರಮವನ್ನು ಕೈಗೊಳ್ಳುವುದಾಗಿ ತಿಳಿಸಿದ್ದಾರೆ.
ವರದಿ ಶಿರಾ ಶ್ರೀಮಂತ್.