ಚಿಕ್ಕನಾಯಕನಹಳ್ಳಿ : ತಾಲ್ಲೂಕಿನ ವಿವಿಧ ಕಾಮಗಾರಿಗಳಿಗೆ ಸೇರಿದಂತೆ ಶುದ್ದ ಕುಡಿಯುವ ನೀರಿನ ಘಟಕ, ರಸ್ತೆ ಕಾಮಗಾರಿಗಳಿಗೆ ಒಟ್ಟು 8 ಕೋಟಿ 40 ಲಕ್ಷ ರೂಪಾಯಿಗಳ ಅಭಿವೃದ್ದಿ ಕಾರ್ಯಗಳಿಗೆ ಶಂಕು ಸ್ಥಾಪನೆಯನ್ನು ಸಚಿವ ಜೆ.ಸಿ.ಮಾಧುಸ್ವಾಮಿ ಚಾಲನೆ ನೀಡಿದರು.
ತಾಲ್ಲೂಕಿನ ಗೌಡನಹಳ್ಳಿ ತೋಟೇಗೌಡನ ಪಾಳ್ಯದ ರಸ್ತೆ ಅಭಿವೃದ್ದಿಗೆ 55 ಲಕ್ಷ, ನವಿಲೆ ಕಾರೇಹಳ್ಳಿ ರಸ್ತೆ ಅಭಿವೃದ್ದಿಗೆ 39.90 ಲಕ್ಷ, ಮೇಲನಹಳ್ಳಿ ರಾಯಪ್ಪನ ಪಾಳ್ಯ ರಸ್ತೆಗೆ 25 ಲಕ್ಷ, ಕುಪ್ಪೂರು ಮುಖ್ಯ ರಸ್ತೆಯಿಂದ ಮೊರಾರ್ಜಿ ವಸತಿ ಶಾಲೆ, ರಾಣಿ ಚೆನ್ನಮ್ಮ ವಸತಿ ಶಾಲೆವರೆಗೆ ರಸ್ತೆ ಅಭಿವೃದ್ದಿಗೆ 46ಲಕ್ಷ, ತಾಲ್ಲೂಕಿನ ಯಳ್ಳೇನಹಳ್ಳಿಯಿಂದ ಓವರ್ ಹೆಡ್ ಟ್ಯಾಂಕ್ ನಿರ್ಮಾಣಕ್ಕೆ 71.70 ಲಕ್ಷ ತಾಲ್ಲೂಕಿನ ಮತಿಘಟ್ಟ ಮುಖ್ಯ ರಸ್ತೆಯಿಂದ ಫಯಾಜ್ ಸಾಬ್ ಪಾಳ್ಯ ರಸ್ತೆ ಅಭಿವೃದ್ದಿಗೆ 40 ಲಕ್ಷ , ದವನದ ಹೊಸಹಳ್ಳಿಯಿಂದ ಬಂದ್ರೆಹಳ್ಳಿ ತಾಂಡ್ಯದ ವರೆಗೆ ರಸ್ತೆ ಅಭಿವೃದ್ದಿಗೆ 130 ಲಕ್ಷ ರೂಪಾಯಿ, ಹಂದನಕೆರೆ ಚೌಳಕಟ್ಟೆ ರಸ್ತೆಯಿಂದ ರಾಮಲಿಂಗನ ಪಾಳ್ಯ ರಸ್ತೆ ಅಭಿವೃದ್ದಿಗೆ 125 ಲಕ್ಷ ರೂ, ತಾಲ್ಲೂಕಿನ ನಿರುವಗಲ್ ಗೊಲ್ಲರಹಟ್ಟಿ ರಸ್ತೆ ಅಭಿವೃದ್ದಿಗೆ 60 ಲಕ್ಷ, ತಿಪಟೂರು ಮುಖ್ಯ ರಸ್ತೆಯಿಂದ ಲಕ್ಷ್ಮೀಪುರ ಬಸವೇಶ್ವರ ನಗರ ರಸ್ತೆಯವರೆಗೆ 31 ಲಕ್ಷ ರೂಪಾಯಿ, ರಾಷ್ಟ್ರೀಯ ಹೆದ್ದಾರಿ 234 ರಿಂದ ಕುರಿಹಟ್ಟಿ ಮುಖಾಂತರ ಕಂಪನಹಳ್ಳಿ ತೋಟದ ಮನೆಯವರೆಗೆ ರಸ್ತೆ ಅಭಿವೃದ್ದಿಗೆ 125 ಲಕ್ಷ, ಬರಕನಹಾಳ್ ನಿಂದ ಸಂಗೇನಹಳ್ಳಿ ರಸ್ತೆ ಅಭಿವೃದ್ದಿಗೆ 75 ಲಕ್ಷ , 150 ಎ ರಸ್ತೆಯಿಂದ ಕಲ್ಲಹಳ್ಳಿ ರಸ್ತೆಯವರೆಗೆ 50 ಲಕ್ಷ ರೂಪಾಯಿ, ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಯಳ್ಳೇನಹಳ್ಳಿಯ ಶುದ್ದ ಕುಡಿಯುವ ನೀರಿನ ಟ್ಯಾಂಕ್ ಕಾಮಗಾರಿ 71.70 ಲಕ್ಷ ರೂಪಾಯಿ ಮೊತ್ತದಲ್ಲಿ ಸಚಿವ ಜೆ.ಸಿ.ಮಾಧುಸ್ವಾಮಿ ಗುದ್ದಲಿ ಪೂಜೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಪ್ರಧಾನ ಕಾರ್ಯದರ್ಶಿ ನಿರಂಜನ್ ಮೂರ್ತಿ ಸೇರಿದಂತೆ ಗ್ರಾಮಸ್ಥರು ಹಾಜರಿದ್ದರು.
ವರದಿ ಚಿಕ್ಕನಾಯಕನಹಳ್ಳಿ ಚಂದ್ರು.