ಕರ್ನಾಟಕ ಕುರುಕ್ಷೇತ್ರಕ್ಕೆ ಕೇಂದ್ರ ಚುನಾವಣಾ ಆಯೋಗದಿಂದ ದಿನಾಂಕ ಫಿಕ್ಸ್.

 ಕೇಂದ್ರ ಚುನಾವಣಾ ಆಯೋಗದಿಂದ ಚುನಾವಣೆ ದಿನಾಂಕ ಫಿಕ್ಸ್ ಮಾಡಿ ಆದೇಶ ಹೊರಡಿಸಿದ ಕೇಂದ್ರ ಚುನಾವಣಾ ಆಯೋಗ.


ಇಂದಿನಿಂದಲೇ ರಾಜ್ಯಾದ್ಯಂತ ನೀತಿ ಸಂಹಿತೆ ಜಾರಿ ಚುನಾವಣೆ ಅದಿಸೂಚನೆ ಏಪ್ರಿಲ್ 13ಕ್ಕೆ  ಮೇ 10ಕ್ಕೆ ಚುನಾವಣೆ ಮೇ 13ಕ್ಕೆ ಫಲಿತಾಂಶ ರಾಜ್ಯಾದ್ಯಂತ ಒಂದೇ ಹಂತದಲ್ಲಿ ಚುನಾವಣೆ.

ರಾಜ್ಯದಲ್ಲಿ ಒಟ್ಟು 5 ಕೋಟಿ 21 ಲಕ್ಷ ಮತದಾರರು ಇದ್ದು  ಹೊಸ ಮತದಾರರು 9,17,241 ಮತದಾರರು ಮತದಾನ ಮಾಡಲಿದ್ದಾರೆ.

ರಾಜ್ಯದಲ್ಲಿ ಒಟ್ಟು 52,282 ಮತಗಟ್ಟೆಗಳು ಇದ್ದು ನಗರ ಪ್ರದೇಶದಲ್ಲಿ 24063 ಹಾಗೂ ಗ್ರಾಮೀಣ ಪ್ರದೇಶದಲ್ಲಿ 34219 ಮತಗಟ್ಟೆಗಳಿದ್ದು 12000 ಸೂಕ್ಷ್ಮ ಮತಗಟ್ಟೆ ಎಂದು ಗುರ್ತಿಸಲಾಗಿದೆ ಒಂದು ಮತಗಟ್ಟೆಯಲ್ಲಿ 883 ಮತದಾರರು ಮತ ಚಲಾಯಿಸಲು ಅವಕಾಶ ಕಲ್ಪಿಸಲಾಗಿದೆ.


ರಾಜ್ಯದಲ್ಲಿ ಯಾವುದೇ ರೀತಿಯ ಮತದಾನಕ್ಕೆ ಸಮಸ್ಯೆಯಾಗದಂತೆ ತಯಾರಿ ಮಾಡಿಕೊಂಡಿದ್ದು ಹೆಚ್ಚಿನ ರೀತಿಯಲ್ಲಿ ಮತದಾನ ನಡೆಯುವಂತೆ ಮತದಾರರಿಗೆ ಜಾಗೃತಿ ಕಾರ್ಯಕ್ರಮಗಳನ್ನು ಕೂಡ ನಡೆಸಲಾಗುವುದು 80 ವರ್ಷ ಮೇಲ್ಪಟ್ಟ ಮತದಾರರಿಗೆ ತಮ್ಮ ಮನೆಯಲ್ಲೇ ಮತದಾನ ಮಾಡುವಂತೆ ವ್ಯವಸ್ತೆ ಕಲ್ಪಿಸಲಾಗುವುದು ಎಂದು ಚುನಾವಣಾ ಆಯೋಗ ತಿಳಿಸಿದೆ.

 ವರದಿ ನರಸಿಂಹಮೂರ್ತಿ ಗುಬ್ಬಿ.






ಕಾಮೆಂಟ್‌‌ ಪೋಸ್ಟ್‌ ಮಾಡಿ

Please Select Embedded Mode To Show The Comment System.*

ನವೀನ ಹಳೆಯದು