ಶಿರಾ: ಇಂದಿನಿಂದ ಎಸ್.ಎಸ್.ಎಲ್.ಸಿ. ಪರೀಕ್ಷೆ ಆರಂಭವಾಗಿದ್ದು, ತಾಲೂಕಿನಿಂದ 19 ವಿಕಲಚೇತನ ವಿದ್ಯಾರ್ಥಿಗಳು ಸೇರಿ 3775 ವಿದ್ಯಾರ್ಥಿಗಳು ಈ ಬಾರಿ ಪರೀಕ್ಷೆ ಬರೆಯುತ್ತಿದ್ದಾರೆ.
ನಗರ ಸೇರಿದಂತೆ ಪರೀಕ್ಷಾ ಸಿದ್ದತೆ ಕುರಿತು ಮಾಹಿತಿ ನೀಡಿದ ಬಿಇಓ ಕೃಷ್ಣಪ್ಪ.
ಅಣೇಶ್ ಪರೀಕ್ಷಾ ಕೆಂದ್ರದ ಮುಖ್ಯ ಆಧೀಕ್ಷರು ಶಿರಾ. ಮತ್ತು ಸ್ಥಾನಿಕ ಜಾಗೃತ ದಳದ ನೀಲಮ್ಮ ಅವರಿಂದ ಮಾಹಿತಿ
ತಾಲೂಕಿನ 19 ಪರೀಕ್ಷಾ ಕೇಂದ್ರಗಳಲ್ಲಿ, ಗಂಡು, ಬಾಲಕಿಯರು ಸೇರಿ ಒಟ್ಟು 3775 ವಿದ್ಯಾರ್ಥಿಗಳು ತಮ್ಮ ಅದೃಷ್ಟ ಪರೀಕ್ಷೆ ಎದುರಿಸುತ್ತಿದ್ದಾರೆ.
ಎಲ್ಲಾ ಕೇಂದ್ರಗಳಲ್ಲೂ ಮೊಬೈಲ್ ಸ್ವಾಧಿನಾಧಿಕಾರಿಗಳು ಇರಲಿದ್ದಾರೆ.
6 ರೂಟ್ ಗಳಲ್ಲಿ ಮಾರ್ಗಾಧಿಕಾರಿಗಳು ಪರೀಕ್ಷಾ ಕೇಂದ್ರಗಳಿಗೆ ನಿಗದಿತ ವೇಳೆಯಲ್ಲಿ ಪರೀಕ್ಷಾಕೇಂದ್ರಗಳಿಗೆ ಪ್ರಶ್ನೆ ಪತ್ರಿಕೆ ತಲುಪಿಸಲಿದ್ದಾರೆ.
ಜೊತೆಗೆ ಕೊಠಡಿ ಮೇಲ್ವಿಚಾರಕರು, ಸಿಟ್ಟಿಂಗ್ ಸ್ವಾಡ್ (ಸ್ಥಾನಿಕ ಜಾಗೃತ ದಳ) ನಿಯೋಜಿಸಲಾಗಿದೆ. ಎಲ್ಲಾ ಕೇಂದ್ರಗಳ ಕಾರಿಡಾರ್ ಗಳಲ್ಲಿ ಸಿ.ಸಿ.ಕ್ಯಾಮರಾ ಅಳವಡಿಸಿದ್ದು. ಇದರಿಂದ ಚಲನವಲನ ಗಮನಿಸಲು ನೆರವಾಗಲಿದೆ.
ಎಲ್ಲಾ ಪರೀಕ್ಷಾ ಕೇಂದ್ರಗಳ ಸುತ್ತ 500 ಮೀಟರ್ ಅಂತರದಲ್ಲಿರುವ ಜೆರಾಕ್ಸ್ ಸೆಂಟರ್ ಗಳನ್ನು ಮುಚ್ಚಲು ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ. ಹೀಗಾಗಿ ಪರೀಕ್ಷಾ ಕೇಂದ್ರಗಳ ಸುತ್ತಮುತ್ತಲಿನಲ್ಲಿರುವ ಜೆರಾಕ್ಸ್ ಅಂಗಡಿಗಳನ್ನು ಏ.15ರ ವರೆಗೆ ಮುಚ್ಚಲು ಅಂಗಡಿ ಮಾಲಿಕರಿಗೆ ಸೂಚನೆ ನೀಡಲಾಗಿದೆ.
ಅಲ್ಲದೆ ಗ್ರಾಮೀಣ ಪ್ರದೇಶಗಳಿಂದಪರೀಕ್ಷಾ ಕೆಂದ್ರಕ್ಕೆ ತೆರಳಬೇಕಾಗಿತ್ತು.
ನಿಗದಿತ ವೇಳೆಯಲ್ಲಿ ಪರೀಕ್ಷೆಗೆ ಹಾಜರಾಗಲು ನೆರವಾಗುವ ಸಲುವಾಗಿ ಕೆ.ಎಸ್.ಆರ್.ಟಿ.ಸಿ.ವತಿಯಿಂದ ಐದು ಬಸ್ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.
ವರದಿ ಶಿರಾ ಶ್ರೀಮಂತ್.