ಏ. 11ರವರೆಗೆ ನಮೂನೆ 6ರಲ್ಲಿ ಮತದಾರರ ಪಟ್ಟಿಗೆ ಹೊಸಬರ ಸೇರ್ಪಡೆಗೆ ಅವಕಾಶವಿದೆ ಚುನಾವಣಾಧಿಕಾರಿಯಾಗಿ ಎ.ಇ. ರಘು.

 ಚಿಕ್ಕನಾಯಕನಹಳ್ಳಿ : ಕ್ಷೇತ್ರದಲ್ಲಿ ಒಟ್ಟು 2,15,210 ಮತದಾರರಿದ್ದು, ಈ ಪೈಕಿ1,06,950 ಪುರುಷ,1,08,248 ಮಹಿಳಾ, ಇತರೆ 1 ಮತದಾರರಿದ್ದಾರೆ. ಈ ಸಲ 724ವಿಐಪಿ ಮತದಾರರನ್ನು ಗುರುತಿಸಲಾಗಿದೆ. ಏ. 11ರವರೆಗೆ ನಮೂನೆ 6ರಲ್ಲಿ ಮತದಾರರ ಪಟ್ಟಿಗೆ ಹೊಸಬರ ಸೇರ್ಪಡೆಗೆ ಅವಕಾಶವಿದೆ. ವಿಶೇಷ ಎಂದರೆ, ಎನ್ಕೋರ್ ಎಂಬ ಆಪ್ ಪರಿಚಯಿಸಲಾಗಿದೆ ಎಂದು ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿಯಾಗಿ ಎ.ಇ. ರಘು ತಿಳಿಸಿದರು.


ತಾಲೂಕು ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕ್ಷೇತ್ರ ವ್ಯಾಪ್ತಿಯಲ್ಲಿ 5500 ವಯಸ್ಕ ಮತದಾರರನ್ನು ಗುರುತಿಸಲಾಗಿದೆ. ಮತಗಟ್ಟೆಗೆ ಬಂದು ಮತದಾನ ಮಾಡಲು ಸಾಧ್ಯವಾಗದವರು ಮತಗಟ್ಟೆ ಅಧಿಕಾರಿ, ಪೊಲೀಸ್ ಅಧಿಕಾರಿ ಕ್ಯಾಮರಾ ಮೆನ್ ಅವರನ್ನೊಳಗೊಂಡ ತಂಡದ ಸಮ್ಮುಖದಲ್ಲಿ ಬ್ಯಾಲೆಟ್ ಮೂಲಕ ಗುಪ್ತವಾಗಿ ಮತದಾನ ಮಾಡಲು ಅವಕಾಶ ನೀಡಲಾಗಿದೆ. ಮತಗಟ್ಟಗೆ ಬಂದು ಮತದಾನ ಮಾಡುವುದಾಗಿ ಇಚ್ಚಿಸಿದರೆ ಅದಕ್ಕೂ ಅವಕಾಶ ಕಲ್ಪಿಸಲಾಗುತ್ತದೆ ಎಂದು ತಿಳಿಸಿದರು. ಈ ಸಲದ ಮತ್ತೊಂದು ವಿಶೇಷ ಎಂದರೆ, ಎನ್ಕೋರ್ ಎಂಬ ಆಪ್ ಪರಿಚಯಿಸಲಾಗಿದೆ. ಈ ಪೋರ್ಟಲ್ನಲ್ಲಿ ಸಾರ್ವಜನಿಕರು ಚುನಾವಣೆಗೆ ಸಂಬಂಧಿಸಿದ ಮಾಹಿತಿ ವೀಕ್ಷಿಸಬಹುದು.

 ಅಂತರ್ ಜಿಲ್ಲಾ ಗಡಿಗಳನ್ನು ಕ್ಷೇತ್ರ ವ್ಯಾಪ್ತಿಯ ಕೆಂಕೆರೆ , ಯಳನಾಡು , ದೊಡ್ಡ ಎಣ್ಣೆಗೆರೆಯಲ್ಲಿ ಚೆಕ್ಪೋಸ್ಟ್ಗಳನ್ನು ತೆರೆಯಲಾಗಿದೆ. ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ 80 ವರ್ಷ ಮೇಲ್ಪಟ್ಟವರಿಗೆ ಮನೆಯಲ್ಲೇ ಕುಳಿತು ಅಂಚೆ ಮತದಾನಕ್ಕೆ ಅವಕಾಶ ಮಾಡಿಕೊಡಲಾಗಿದೆ, ತಾಲೂಕು ಕಚೇರಿಯಲ್ಲಿ ಚುನಾವಣಾ ಸಂಬಂಧಪಟ್ಟ ದೂರು ನಿರ್ವಹಣೆ ಸಹಾಯವಾಣಿ (08133-267242) ತೆರೆದಿದ್ದು ಸಾರ್ವಜನಿಕರು ದೂರು ನೀಡಬಹುದಾಗಿದೆ ಎಂದರು.

ನಾಮಪತ್ರ ಸಲ್ಲಿಕೆ, ಅಭ್ಯರ್ಥಿಗಳ ಖರ್ಚು ವೆಚ್ಚಗಳ ವಿವರ, ಅವರು ಸಲ್ಲಿಸುವ ಘೋಷಣಾ ಪತ್ರಗಳನ್ನು ಅದರಲ್ಲಿ ಅಪ್ಲೋಡ್ ಮಾಡಲಾಗುತ್ತದೆ ಹಾಗೂ ಸಾರ್ವಜನಿಕರು, ಚುನಾವಣಾ ಅಭ್ಯರ್ಥಿಗಳು ಸಭೆ, ಸಮಾರಂಭಗಳನ್ನು ಮಾಡಿಕೊಳ್ಳಲು ಚುನಾವಣಾ ಆಯೋಗದ ಅನುಮತಿ ಪಡೆದುಕೊಳ್ಳಲು ಸುವಿಧಾ, ಸುಗಮ, ಸಮಾಧಾನ ಎಂಬ ಪೋರ್ಟಲ್ಗಳನ್ನು ಪರಿಚಯಿಸಲಾಗಿದೆ. ನೀತಿ ಸಂಹಿತೆ ಅಡಿಯಲ್ಲಿ 24 ಜನ ಸೆಕ್ಟರ್ ಅಧಿಕಾರಿಗಳು, ಅಕ್ರಮಗಳ ತಡೆಗೆ 6ಎಫ್ಎಸ್ ಟಿ 3ಎಸ್ಎಸ್ ಟಿ ತಲಾ ಒಬ್ಬರು ವಿವಿಟಿ, ವಿಎಸ್ ಟಿ ಇಎನ್ಸಿಓಆರ್ಇ, ರವರು ಖರ್ಚುವೆಚ್ಚಗಳ ಲೆಕ್ಕಾಧಿಕಾರಿ ಕೆಲಸ ಮಾಡುತ್ತಿದ್ದಾರೆ. ಈಗಾಗಲೇ ಅಲ್ಲಿ ಅಧಿಕಾರಿಗಳು ಕರ್ತವ್ಯದಲ್ಲಿ ನಿರತರಾಗಿದ್ದಾರೆ ಎಂದು ತಿಳಿಸಿದರು.

ಕ್ಷೇತ್ರ ವ್ಯಾಪ್ತಿಯಲ್ಲಿ 262 ಮತಗಟ್ಟೆಗಳಿವೆ. ಇದರಲ್ಲಿ 2 ಸೂಕ್ಷ್ಮ, ಮಾಕುವಳ್ಳಿ, ಗೌರಸಾಗರದಲ್ಲಿ ದುರ್ಬಲವರ್ಗದವರ ಮತಗಟ್ಟೆಗಳನ್ನು ಗುರುತಿಸಲಾಗಿದೆ.

 ತಹಶೀಲ್ದಾರ್ ಅರ್ಚನಾಭಟ್ ಸಹಾಯಕ ಚುನಾವಣಾಧಿಕಾರಿಯಾಗಿ ಕರ್ತವ್ಯ ವಿರ್ವಹಿಸಲಿದ್ದಾರೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಗ್ರೇಡ್ 2 ತಹಸೀಲ್ದಾರ್ ಕೀರ್ತಿ ಉಪಸ್ಥಿತರಿದ್ದರು.

ವರದಿ ಚಿಕ್ಕನಾಯಕನಹಳ್ಳಿ ಚಂದ್ರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

Please Select Embedded Mode To Show The Comment System.*

ನವೀನ ಹಳೆಯದು