ನಿಮ್ಮ ಗ್ರಾಮದಲ್ಲಿ ಸ್ಮಶಾನ ಒತ್ತುವರಿ ಹಾಗಿದ್ದರೆ ತಾಲೂಕು ಅಥವಾ ಜಿಲ್ಲಾಡಳಿತಕ್ಕೆ ದೂರು ನೀಡಿ.

ಗುಬ್ಬಿ ತಾಲೂಕಿನ ಎಲ್ಲಾ ಗ್ರಾಮಗಳಲ್ಲಿಯೂ ಸ್ಮಶಾನಕ್ಕಾಗಿ ಜಮೀನನ್ನು ಕಾಯ್ದಿರಿಸಿದ್ದು, ಈ ಜಮೀನು ಒತ್ತುವರಿಯಾಗಿರುವುದು ಕಂಡುಬಂದಿದ್ದಲ್ಲಿ ಸಾರ್ವಜನಿಕರು ಜಿಲ್ಲಾಧಿಕಾರಿಗಳು/ ತಹಶೀಲ್ದಾರ್ ರವರಿಗೆ ಈ ಪತ್ರದೊಂದಿಗೆ ಲಗತ್ತಿಸಿರುವ ನೋಟಿಸ್ ನಲ್ಲಿ ದೂರು ನೀಡಬಹುದಾಗಿರುತ್ತದೆ ಎಂದು ತಹಶೀಲ್ದಾರ್ ಬಿ ಆರತಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

  ಉಚ್ಚ ನ್ಯಾಯಾಲಯದಲ್ಲಿ ದಾಖಲಾಗಿರುವ ನ್ಯಾಯಾಂಗ ನಿಂದನಾ ಅರ್ಜಿ ಸಂಖ್ಯೆ CCC 343/2020 ಅನ್ವಯ ಜಿಲ್ಲೆಯಲ್ಲಿರುವ ಪ್ರತಿಯೊಂದು ಗ್ರಾಮೀಣ ಪ್ರದೇಶದಲ್ಲಿಯೂ ಕಡ್ಡಾಯವಾಗಿ ಸ್ಮಶಾನ ಭೂಮಿ ಸೌಲಭ್ಯ ಹೊಂದಿರಬೇಕು ಎಂದು ನೀಡಲಾಗಿದ್ದು, ಆ ಆದೇಶದನ್ವಯ ಯಾವುದೇ ಗ್ರಾಮದಲ್ಲಿ ಸ್ಮಶಾನ ಭೂಮಿ ಸೌಲಭ್ಯವಿಲ್ಲದೇ ಇದ್ದಲ್ಲಿ / ಸ್ಮಶಾನ ಭೂಮಿ ಒತ್ತುವರಿಯಾಗಿದ್ದಲ್ಲಿ ಸಂಬಂಧಿಸಿದ ಗ್ರಾಮದ ಗ್ರಾಮಸ್ಥರು ಇಲ್ಲವೇ ಸಾರ್ವಜನಿಕರು ಕೂಡಲೇ ಆಯಾ ಗ್ರಾಮ ಆಡಳಿತ ಅಧಿಕಾರಿ/ ಕಂದಾಯ ನಿರೀಕ್ಷಕರು/ ತಹಶೀಲ್ದಾರ್ ಅವರಿಗೆ ತಮ್ಮ ಹೆಸರು/ ತಂದೆಯ ಹೆಸರು/ಆಧಾರ್ ಕಾರ್ಡ್ ಸಂಖ್ಯೆ / ಗ್ರಾಮದ ವಿವರಗಳೊಂದಿಗೆ ಲಿಖಿತ ದೂರಿನ ಅರ್ಜಿಯನ್ನು ನೀಡಬಹುದಾಗಿದೆ ಎಂದು ತಿಳಿಸಿದ್ದಾರೆ.


ವರದಿ ಸಂಜಯ್ ಕೊಪ್ಪ.

ಕಾಮೆಂಟ್‌‌ ಪೋಸ್ಟ್‌ ಮಾಡಿ

Please Select Embedded Mode To Show The Comment System.*

ನವೀನ ಹಳೆಯದು