ಮೌಲ್ಯಧಾರಿತ ಹಾಗೂ ಸುಸಂಸ್ಕೃತ ಶಿಕ್ಷಣವನ್ನು ನಾವು ಕಲಿಸಿದಾಗ ಸಮಾಜದ ಅಭಿವೃದ್ದಿ ಸಾಧ್ಯ ಹಿಂದುಳಿದ ವರ್ಗ ಆಯೋಗದ ಮಾಜಿ ಸದಸ್ಯ ಯೋಗಾನಂದ್.

 ಗುಬ್ಬಿ : ಮೌಲ್ಯಧಾರಿತ  ಹಾಗೂ ಸುಸಂಸ್ಕೃತ ಶಿಕ್ಷಣವನ್ನು  ನಾವು ಕಲಿಸಿದಾಗ ಮಾತ್ರ  ಇನ್ನಿತರರಿಗೆ ಮಾದರಿಯಾಗಬಹುದು ಎಂದು ಹಿಂದುಳಿದ ವರ್ಗ ಆಯೋಗದ ಮಾಜಿ ಸದಸ್ಯ  ಯೋಗಾನಂದ ತಿಳಿಸಿದರು.


 ಪಟ್ಟಣದ ಎ ವಿ ಕೆ ಕಲ್ಯಾಣ ಮಂಟಪದ ಆವರಣದಲ್ಲಿ ಅಗ್ನಿ ಬನ್ನಿರಾಯಸ್ವಾಮಿ  ಮೂರನೇ ವರ್ಷದ ಜಯಂತೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ನಮ್ಮ ಅಗ್ನಿವಂಶ ಕ್ಷತ್ರಿಯ ಸಮಾಜವು  ಸುಮಾರು ನೂರಾರು ವರ್ಷಗಳ ಇತಿಹಾಸವನ್ನು ಒಳಗೊಂಡಿದೆ  ಬಹಳ ಪೂರ್ವಕಾಲದಿಂದ  ಕಷ್ಟ ಬಿದ್ದು ಕೆಲಸ ಮಾಡಿಕೊಂಡು  ತೋಟ, ತುಡಿಕೆಗಳಲ್ಲಿ  ತರಕಾರಿ ಬೆಳೆಯುವುದೇ ನಮ್ಮ  ಜೀವನದ ಉದ್ದೇಶವಾಗಿತ್ತು ಇತ್ತೀಚಿನ ದಿನಗಳಲ್ಲಿ ನಮ್ಮ ಮಕ್ಕಳು  ವಿದ್ಯಾವಂತರಾಗುತ್ತಿರುವುದು  ನಮ್ಮ ಸಮಾಜದ ಅಭಿವೃದ್ಧಿಗೆ ಪೂರಕವಾಗಿ ಕಾಣಿಸುತ್ತಿದೆ ನಾವು ಎಲ್ಲಾ ಸಮಾಜದ ಜೊತೆಯಲ್ಲಿಯೂ  ಉತ್ತಮವಾದ ಬಾಂಧವ್ಯ, ಪ್ರೀತಿ, ವಿಶ್ವಾಸವನ್ನು ಇಟ್ಟುಕೊಂಡು ಸಾಗಿದಾಗ ನಾವು ಸಹ  ಮುಂದುವರಿದ ಸಮಾಜದಂತೆ ಅಭಿವೃದ್ಧಿಯತ್ತ ಸಾಗಬಹುದು ಎಂದು ತಿಳಿಸಿದರು.


   ಸಂಪನ್ಮೂಲ ವ್ಯಕ್ತಿ ಮಧುಸೂದನ್ ಮಾತನಾಡಿ ಅಗ್ನಿವಂಶ  ರಾಜವಂಶದ ರಾಜಧಾನಿ ಗುಬ್ಬಿ ತಾಲೂಕಿನ ಇಡಗೂರು ಎಂಬುದು ತಾವೆಲ್ಲರೂ ಅರ್ಥ ಮಾಡಿಕೊಳ್ಳಿ  ನಮ್ಮ ಸಮುದಾಯದ ಬಗ್ಗೆ ಸುಮಾರು 8 ರಿಂದ 10 ಶಾಸನಗಳಲ್ಲಿ ನಮ್ಮ  ಸಮುದಾಯ ನಮ್ಮ ಆಡಳಿತ ನಮ್ಮ ಪರಂಪರೆಯ ಹೆಸರಿನ ಉಲ್ಲೇಖವಿದೆ ನಮ್ಮ ಸಮುದಾಯದ ಮೂಲ ಪುರುಷ ಅಗ್ನಿ ಬನ್ನಿರಾಯ ತಮಿಳುನಾಡಿನಲ್ಲಿ ಬೇರೆ ಹೆಸರಿನಲ್ಲಿ ಕರೆಯಲಾಗುತ್ತದೆ  ದೇಶದ ಹಲವು ಭಾಗಗಳಲ್ಲಿ  ಹಲವು ಹೆಸರಿನಲ್ಲಿ ಕರೆದರೂ ಸಹ  ನಾವೆಲ್ಲರೂ ಒಂದೇ ಎಂಬುದನ್ನು  ತಿಳಿದುಕೊಳ್ಳಬೇಕಾಗಿರುವ ಇತಿಹಾಸ ನಮ್ಮದಾಗಿದೆ ಎಂದು ತಿಳಿಸಿದರು.


   ಎವಿಕೆ ಸಂಘದ ಅಧ್ಯಕ್ಷ  ಹುಂಡೆ ರಾಮಣ್ಣ ಮಾತನಾಡಿ  ಇಂದು ನಡೆದಿರುವಂತಹ ಈ ಅದ್ದೂರಿ ಕಾರ್ಯಕ್ರಮಕ್ಕೆ  ಸಾವಿರಾರು ಸಂಖ್ಯೆಯಲ್ಲಿ ನಮ್ಮ ಬಾಂಧವರು ಆಗಮಿಸಿರುವುದು ಹಬ್ಬದ ವಾತಾವರಣವನ್ನು ಸೃಷ್ಟಿಸಿದೆ  ನಾವೆಲ್ಲರೂ ಒಗ್ಗಟ್ಟಿನಿಂದ  ಒಂದಾದಲ್ಲಿ  ನಮ್ಮ ಶಕ್ತಿ ಎಂಥದ್ದು ಎಂಬುದು  ಎಲ್ಲರಿಗೂ ಅರ್ಥವಾಗುತ್ತದೆ ಎಂದು ತಿಳಿಸಿದರು.

 ಗುಬ್ಬಿಯ ಶ್ರೀ ಚನ್ನಬಸವೇಶ್ವರ ಸ್ವಾಮಿ ದೇವಾಲಯದ ಆವರಣದಿಂದ ಸಾವಿರಾರು ಸಂಖ್ಯೆಯಲ್ಲಿ  ತಿಗಳ ಸಮುದಾಯದವರು ಆಗಮಿಸಿದರು 200 ಕ್ಕೋ ಹೆಚ್ಚು ಮಹಿಳೆಯರು ಕುಂಭ ಕಳಸ ಹೊತ್ತು ಸಾಗಿದರೆ, ಕೋಲಾಟ, ಸೇರಿದಂತೆ ಸಾಂಸ್ಕೃತಿಕ ಕಾರ್ಯಕ್ರಮಗಳ ಜೊತೆಯಲ್ಲಿ  ಅಗ್ನಿ ಬನ್ನಿರಾಯ ಸ್ವಾಮಿ ಯ ಭಾವಚಿತ್ರಗಳನ್ನು  ಹಲವು ಗ್ರಾಮಗಳಿಂದ  ವಿಶೇಷವಾಗಿ ಅಲಂಕರಿಸಿ  ಮೆರವಣಿಗೆ ಮೂಲಕ ಎವಿಕೆ ಕಲ್ಯಾಣ ಮಂಟಪದವರೆಗೆ ಸಾಗಿ ಬಂತು.

ಕಾರ್ಯಕ್ರಮದಲ್ಲಿ ಎ ವಿ ಕೆ ಸಂಘದ ಉಪಾಧ್ಯಕ್ಷ ಲೋಕೇಶ್ ಬಾಬು, ಮಾಜಿ ಅಧ್ಯಕ್ಷ ಹಿಂಡಿಸಗೆರೆ ನಾಗರಾಜು, ಪಟ್ಟಣ ಪಂಚಾಯಿತಿ ಉಪಾಧ್ಯಕ್ಷೆ ಮಹಾಲಕ್ಷ್ಮಿ ಲೋಕೇಶ್ ಬಾಬು, ಸದಸ್ಯರಾದ   ಕೃಷ್ಣಮೂರ್ತಿ, ಕುಮಾರ್,ಮಂಗಳಮ್ಮ, ಮುಖಂಡರಾದ ನಂಜೇಗೌಡ, ಕೋಳಿಶಿವಣ್ಣ, ಮಲ್ಲಪ್ಪ, ಅಶ್ವಥ್ ಮಂಜುಳ,ಸೋಮಶೇಖರ್ ಗಂಗಣ್ಣ, ಮಂಜುನಾಥ್, ಸುರೇಶ್, ರಾಜಣ್ಣ, ಬಲರಾಮಣ್ಣ, ಸೇರಿದಂತೆ  ಸಾವಿರಾರು ಸಂಖ್ಯೆಯಲ್ಲಿ  ತಿಗಳ ಸಮುದಾಯದ ಮುಖಂಡರು ಸಾರ್ವಜನಿಕರು ಭಾಗಿಯಾಗಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

Please Select Embedded Mode To Show The Comment System.*

ನವೀನ ಹಳೆಯದು