ಚಿಕ್ಕನಾಯಕನಹಳ್ಳಿ :ಕರ್ನಾಟಕದ ಭವಿಷ್ಯದ ಮುನ್ನುಡಿಯನ್ನು ಬರೆಯುವ ಯಾವುದಾದರೂ ಜಿಲ್ಲೆಇದ್ದರೆ ಅದು ಕಲ್ಪತರು ನಾಡು ತುಮಕೂರು ಜಿಲ್ಲೆಯಾಗಿದೆ :--- ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ.
ತಿಪಟೂರು ಹಾಗೂ ಚಿಕ್ಕನಾಯಕನಹಳ್ಳಿ ತಾಲ್ಲೂಕುಗಳಿಗೆ ಎತ್ತಿನಹೊಳೆ ಯೋಜನೆ ಪೂರ್ಣ ಗೊಳ್ಳುತ್ತಿದ್ದೂ ಬರುವ ಜೂನ್ ತಿಂಗಳಲ್ಲಿ ನೀರನ್ನ ಪಡೆಯುವ ಮೊದಲ ಕ್ಷೇತ್ರ ತಿಪಟೂರ್, ಚಿನಾಹಳ್ಳಿ ಎಂದು ಮುಖ್ಯಮಂತ್ರಿ ಬಸವರಾಜು ಬೊಮ್ಮಾಯಿ ತಿಳಿಸಿದರು.
ಪಟ್ಟಣದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಪಾಠಶಾಲಾ ಆವರಣದಲ್ಲಿ ಹಮ್ಮಿಕೊಂಡಿದ್ದ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಮುಖ್ಯಮಂತ್ರಿ ರಿಮೋಟ್ ಕಂಟ್ರೋಲ್ ಮೂಲಕ ಉದ್ಘಾಟಿಸಿ ಚಾಲನೆ ನೀಡಿದರು.
ನೂತನ ತಾಲ್ಲೂಕು ಆಡಳಿತ ಕಛೇರಿ ಉದ್ಘಾಟನೆ,534 ಜನವಸತಿ, ಪಟ್ಟಣದ ಶ್ರೀ ಹಳೆಯೂರು ಆಂಜನೇಯಸ್ವಾಮಿ 3 ಕೋಟಿ ರೂ ವೆಚ್ಚ ದ ಸಮುದಾಯ ಭವನ ಶಂಕುಸ್ಥಾಪನೆ ಸೇರಿದಂತೆ ವಿವಿಧ ಕಾಮಗಾರಿಗಳಿಗೆ ಉದ್ಘಾಟನೆ ನೆರವೇರಿಸಿ ಮಾತನಾಡಿ ಅಗ್ಯಾರೆಂಟಿ ಈ ಗ್ಯಾರಂಟಿ, ನಿಮ್ಮ ಗ್ಯಾರೆಂಟಿ ಡೇಟ್ ಬಾರ ಆಗಿದೆ ಹಾಗಾಗಿ ಯಾವ ಗ್ಯಾರೆಂಟಿ ನಡೆಯುವುದಿಲ್ಲ ಎಂದು ಕಾಂಗ್ರೆಸ್ ಪಕ್ಷವನ್ನು ಕುಟೀಕಿದರು.
ತಾಲ್ಲೂಕಿನಲ್ಲಿ 5 ವಸತಿ ಶಾಲೆ ಹಾಗೂ ವಿವಿಧ ಇಲಾಖೆಯ ನೂತನ ಕಟ್ಟಡಗಳಾದ ಹುಳಿಯಾರು ಮತ್ತು ಚಿಕ್ಕನಾಯಕನಹಳ್ಳಿಯ ಪೋಲಿಸ್ ಠಾಣೆ ಮತ್ತು ಪ್ರವಾಸಿ ಮಂದಿರವನ್ನು ಉದ್ಘಾಟಿಸಲಾಗಿದೆ.
ಹೇಮಾವತಿ ನಾಲಾಯೋಜನೆ ತುಮಕೂರು ಬ್ರಾಂಚ್ ಕೆನಾಲ್ ಆಗ್ಬೇಕಾದರೆ ದಿವಂಗತ ವೈ.ಕೆ.ರಾಮಯ್ಯ, ಸಂಸದ ಜಿ.ಎಸ್.ಬಸವರಾಜು ಹಾಗೂ ಸಚಿವ ಜೆ.ಸಿ.ಮಾಧುಸ್ವಾಮಿ ಇವರ ಹೋರಾಟದ ಫಲವಾಗಿ ಅಂದಿನ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆಯವರು ಜಿಲ್ಲೆಗೆ ನೀರು ಹರಿಸಲು ಕಾರಣರಾದರು.
ರಾಜಕಾರಣದಲ್ಲಿ ಎರಡು ರೀತಿಯ ರಾಜಕಾರಣಿಗಳಿದ್ದು ಅಧಿಕಾರ ರಾಜಕಾರಣ, ಅಧಿಕಾರ ದೊರೆತ ಮೇಲೆ ಬಳಕೆ ಮಾಡಿಕೊಳ್ಳುವ ಮತ್ತು ಅಧಿಕಾರ ಉಳಿಸಿಕೊಳ್ಳುವ ರಾಜಕಾರಣ ಮಾಡುತ್ತಾರೆ, ಜನರಿಗಾಗಿ ಅಧಿಕಾರ ಬೇಕು, ರಾಜಕಾರಣ ಜನಪರ ಅಭಿವೃದ್ದಿಗೆ ಉಪಯೋಗಿಸಿಕೊಳ್ಳಬೇಕು, ಅಂಥವರ ಸಾಲಿನಲ್ಲಿ ಜನಪ್ರಿಯ ಶಾಸಕ ಬೇಡ ಜನ ಉಪಯೋಗಿ ಶಾಸಕರಲ್ಲಿ ಸಚಿವ ಜೆ.ಸಿ.ಮಾಧುಸ್ವಾಮಿ ಒಬ್ಬ ಮತ್ಸಧ್ದಿ ರಾಜಕಾರಣಿ, ಇವರು ಚಿಕ್ಕನಾಯಕನಹಳ್ಳಿ ಕ್ಷೇತ್ರಕ್ಕೆ ಮಾತ್ರ ಅಲ್ಲ, ಇಡೀ ರಾಜ್ಯದಎಲ್ಲಾ ವಿಷಯಗಳಲ್ಲಿ ಕಾನೂನು ಪಂಡಿತರಾಗಿ ಕರ್ನಾಟಕ ಸರ್ಕಾರದ ದೊಡ್ಡ ಆಸ್ತಿಯಾಗಿದ್ದಾರೆ. ಚಿಕ್ಕನಾಯಕನಹಳ್ಳಿಯಿಂದ ದೊಡ್ಡ ನಾಯಕನನ್ನ ಆರಿಸಿದ ಕೀರ್ತಿ ಕ್ಷೇತ್ರದ ಮತದಾರರಿಗೆ ಸಲ್ಲಬೇಕು.
ಬರಗಾಲ ಪೀಡಿತವಾದ ಈ ಪ್ರದೇಶ ಲಿಫ್ಟ್ ಇರ್ರೀಗೇಷನ್ ಮೂಲಕ ಮಾಡಲು ಮಾತ್ರ ಸಾಧ್ಯ, ಒಂದು ಗ್ರಾವಿಟಿ, ಇನ್ನೊಂದು ಲಿಫ್ಟ್ ಇರಿಗೇಶನ್ ಮೂಲಕ ಯೋಜನೆಯ ಅಭಿವೃದ್ಧಿ ನೋಟ ಮಾಡಲ್ ಅದ ಸಣ್ಣ ನೀರಾವರಿ ಖಾತೆ ಸಚಿವ ಜೆಸಿ ಮಾಧುಸ್ವಾಮಿಯವರ ಕೈಗೆ ಸಿಕ್ಕ ಮೇಲೆ ದೊಡ್ಡ ಕೆಲಸ ಮಾಡಿರುವ ಮುಸ್ಥಧಿ ರಾಜಕಾರಣಿ ಯಾಗಿದ್ದಾರೆ.
ತುಮಕೂರು ಜಿಲ್ಲೆಯ 155 ಕೆರೆಗಳಿಗೆ 4.5 ಟಿ.ಎಂ.ಸಿ ನೀರು ಹರಿಸಲು ಚಾಲನೆ ನೀಡಿ, ಈ ಭಾಗದ ನೀರಿನ ಕೊರತೆಯನ್ನು ನೀಗಿಸಲಾಗಿದೆ, ಇದರಿಂದ ಮುಂದಿನ ಹಲವಾರು ವರ್ಷಗಳ ಕಾಲ ಅಂತರ್ಜಲ ಹೆಚ್ಚಿಲಿದ್ದು ಕುಡಿಯುವ ನೀರಿಗೆ, ಕೃಷಿಯಲ್ಲಿ ಕೈಗಾರಿಕೆಯಲ್ಲಿ ಅಭಿವೃದ್ಧಿ ಆದರೆ ಕರ್ನಾಟಕದ ಜಿಡಿಪಿ ಗೆ ಅನುಕೂಲವಾಗಲಿದೆ ಎಂದರು.
ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿ ತಾಲ್ಲೂಕಿನ ವಿವಿದೆಡೆ ಸಮಾಜ ಕಲ್ಯಾಣ ಇಲಾಖಾ ವತಿಯಿಂದ ಹೆಣ್ಣು ಮಕ್ಕಳ ವಸತಿ ಶಾಲೆಗಳನ್ನು ಪ್ರಾರಂಭಿಸಿದ್ದಾರೆ,
ತುಮಕೂರು ಒಂದು ಕಲ್ಪತರು ನಾಡು ಮಣ್ಣಿನಲ್ಲಿ ತುಂಬಾ ಶ್ರೇಷ್ಠ ಗುಣವಿದ್ದು ಹೀಮಾವತಿ ನೀರು ಮತ್ತು ಶ್ರಮಿಕರ ಬೆವರು ಸೇರಿಸಿದರೆ ಭೂಮಿತಾಯಿ ಬಂಗಾರದ ಬೆಳೆ ನೀಡುತ್ತಾಳೆ.
ಕಲ್ಪತರು ನಾಡು ತುಮಕೂರಿನಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸುವುದರಿಂದ ನಿರುದ್ಯೋಗ ಯುವಕರಿಗೆ ಕೆಲಸ ಸಿಗಲಿದೆ ಎಂದರು. ಬೆಂಗಳೂರಿನ ನಂತರ ತುಮಕೂರು ಕೈಗಾರಿಕೆ ಸ್ಥಾಪಿಸಲು ಯೋಗ್ಯ ಸ್ಥಳವಾಗಿದೆ ಎಂದರಲ್ಲದೆ,
ರಾಜ್ಯದ ಯಡಿಯೂರಪ್ಪ ಹಾಗೂ ಕೇಂದ್ರದ ಮೋದಿ ಸರ್ಕಾರ ಕೋವಿಡ್ ನ್ನು ಸಮರ್ಥವಾಗಿ ಎದುರಿಸಿದೆ, ಪ್ರವಾಹದ ಸಂದರ್ಭದಲ್ಲಿ ಬೆಳೆ ನಾಶವಾದರೆ ಎರಡು ಪಟ್ಟು ಪರಿಹಾರ ನೀಡಿದ್ದಾರೆ. ಕಿಸಾನ್ ಸಮ್ಮಾನ್ ಯೋಜನೆಯಡಿ ರಾಜ್ಯದ 53 ಲಕ್ಷ ರೈತರಿಗೆ 16 ಸಾವಿರ ಕೋಟಿ ರೂಪಾಯಿ ನೀಡಿದ್ದು ಚಿಕ್ಕನಾಯಕನಹಳ್ಳಿ ತಾಲ್ಲೂಕಿನ 31600 ರೈತರಿಗೆ 10g ಸಾವಿರದಂತೆ 89 ಕೋಟಿ ರೂಪಾಯಿ ರೈತರ ಖಾತೆಗೆ ಜಮವಾಗಿದೆ. ಚಿಕ್ಕನಾಯಕನಹಳ್ಳಿಗೆ ನಗರಾಭಿವೃದ್ದಿ ಯೋಜನೆಯಡಿ 15 ಕೋಟಿ, ಅಮೃತ ಯೋಜನೆಯಡಿ 38 ಕಾಮಗಾರಿಗಳಿಗೆ 176 ಕೋಟಿ, ಸ್ವಸಹಾಯ ಸಂಘಗಳಿಗೆ 17 ಕೋಟಿ, ಜಲಜೀವನ್ ಯೋಜನೆಯಡಿ ರಾಜ್ಯದ 40 ಲಕ್ಷ ಮನೆಗಳಿಗೆ ಹಾಗೂ ತಾಲ್ಲೂಕಿನ 50 ಸಾವಿರ ಮನೆಗಳಿಗೆ ಕುಡಿಯುವ ನೀರು ಒದಗಿಸಲಾಗಿದೆ, ಜಿಲ್ಲೆಯ ಕೈಗಾರಿಕಾ ಅಭಿವೃದ್ಧಿಗೆ ಮಲ್ಟಿ ಮೋಡ್ ಪಾರ್ಕ್, ವಿಶೇಷ ಹೂಡಿಕೆ ವಲಯ (SIR) ಯೋಜನೆಗಳಿಗೆ ಚಾಲನೆ ನೀಡಲಾಗಿದೆ. ಜಿಲ್ಲೆಯ ಅಡಿಕೆ ಹಾಗೂ ತೆಂಗಿಗೆ ಬಹಳಷ್ಟು ಪ್ರಾಮುಖ್ಯತೆ ಇದೆ, ಈ ಬೆಳೆಗಳಿಗೆ ಸ್ಥಿರತೆ ಮತ್ತು ಮಾರುಕಟ್ಟೆ ಅತ್ಯವಶ್ಯಕ ಇವು ಎರಡನ್ನೂ ಸಹ ಒದಗಿಸಲಾಗಿದೆ ಎಂದರು.ಈ ಅಭಿವೃದ್ದಿ ಕಾರ್ಯಗಳನ್ನು ಸಹಿಸಲಾಗದೆ ವಿರೋಧ ಪಕ್ಷದವರು ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಮಾಡುತ್ತಿವೆ ಆದ್ದರಿಂದ ವಿರೋಧಿಗಳ ಬಗ್ಗೆ ತಲೆಕೆಡಿಸಿಕೊಳ್ಳದೆ ಅಭಿವೃದ್ದಿಯ ಹರಿಕಾರ ಜೆ.ಸಿ.ಮಾಧುಸ್ವಾಮಿಯವರನ್ನು ಪುನಃ ಆಯ್ಕೆ ಮಾಡುವಂತೆ ಮನವಿ ಮಾಡಿದರು.
ಈ ವೇಳೆ ಸಮಾಜ ಕಲ್ಯಾಣ ಇಲಾಖಾ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಮಾತನಾಡಿ, ರಾಜ್ಯ,ಜಿಲ್ಲೆಯಲ್ಲೇ ಅತಿ ಹೆಚ್ಚು ಜನಪರ ಅಭಿವೃದ್ಧಿ ಕಾರ್ಯಗಳನ್ನು ಸಚಿವ ಜೆ.ಸಿ.ಮಾಧುಸ್ವಾಮಿ ಮಾಡಿದ್ದು ಇಂತಹ ಮುತ್ಸಧ್ದಿ ರಾಜಕಾರಣಿಯನ್ನು ವಿಧಾನಸಭೆಗೆ ಕಳುಹಿಸಿರುವುದಕ್ಕೆ ನೀವೇ ಪುಣ್ಯಾತ್ಮರು, ಭಾರತದ ಎಲ್ಲಾ ರಾಜ್ಯಗಳ ನ್ಯಾಯಾಂಗಗಳಿಗೆ ಹೋಲಿಸಿದರೆ ಮಾಧುಸ್ವಾಮಿ ಮುತ್ಸದ್ಧಿ ಕಾನೂನು ಸಚಿವರಾಗಿದ್ದಾರೆ. ರಾಜ್ಯದಲ್ಲಿ ಧ್ವನಿ ಇಲ್ಲದವರಿಗೆ ಹಿಂದುಳಿದ, ಅಲ್ಪಸಂಖ್ಯಾತ, ಪರಿಶಿಷ್ಠ ಜಾತಿ-ಪರಿಶಿಷ್ಠ ಪಂಗಡದವರಿಗೆ 38 ಸಾವಿರ ಕೊಳವೆ ಬಾವಿಗಳನ್ನು ಇಲಾಖಾ ವತಿಯಿಂದ ನೀಡಿದ್ದು, ರಾಜ್ಯದ ಹಲವೂ ಯೋಜನೆಗಳ ಅನುಮೋದನೆಗೆ ಚಿಕ್ಕನಾಯಕನಹಳ್ಳಿ ಕ್ಷೇತ್ರ ಕಾರಣಿ ಭೂತ ಎಂದರು.
ಈ ವೇಳೆ ಕಾನೂನು ಸಂಸದೀಯ ವ್ಯವಹಾರಗಳ, ಹಾಗೂ ಸಣ್ಣ ನೀರಾವರಿ
ಸಚಿವ ಜೆ.ಸಿ.ಮಾಧುಸ್ವಾಮಿ ಮಾತನಾಡಿ, ರೈತ ಪರ ಜನಗಳ ಪರ ಗ್ರಾಮೀಣರ ಪರ ಹಾಗೂ ಎಲ್ಲಾ ಆಯಾಮಗಳಲ್ಲೂ ನಿಮಗೆ ಮಂಜುರ ಮಾಡಿದ್ದೇವೆ, ಭವಿಷ್ಯ ಇತಿಹಾಸದಲ್ಲಿ ನಾವೇ ಅಡಿಗಲ್ಲು ಹಾಕಿ ನಾವೇ ಉದ್ಘಾಟನೆ ಮಾಡುತ್ತಿರುವುದು ನಮ್ಮ ಪುಣ್ಯ.
ಕ್ಷೇತ್ರಕ್ಕೆ 25 ಕೋಟಿ ವೆಚ್ಚದಲ್ಲಿ ವಸತಿ ಶಾಲೆಗಳು, ಪಟ್ಟಣದಲ್ಲಿ 60 ಕೋಟಿ ವೆಚ್ಚದಲ್ಲಿ ಯುಜಿಡಿ ಕಾಮಗಾರಿ, ಸಣ್ಣ ನೀರಾವರಿ ಇಲಾಖಾ ವತಿಯಿಂದ 300 ಕೋಟಿ ವೆಚ್ಚದಲ್ಲಿ 122 ಕೆರೆಗಳಿಗೆ ನೀರು, ಹುಳಿಯಾರು ಹಾಗೂ ಚಿಕ್ಕನಾಯಕನಹಳ್ಳಿ ಪೋಲಿಸ್ ಠಾಣೆ, ಮತ್ತು ಪ್ರವಾಸಿ ಮಂದಿರ, 15 ಕೋಟಿ ವೆಚ್ಚದಲ್ಲಿ ತಾಲ್ಲೂಕು ಕಛೇರಿ, 3 ಕೋಟಿ ವೆಚ್ಚದಲ್ಲಿ ಹಳೆಯೂರು ಆಂಜನೇಯಸ್ವಾಮಿ ಸಮುದಾಯ ಭವನ, ತಾಲ್ಲೂಕಿನ 3 ಕಡೆ ಹೆದ್ದಾರೆ ನಿರ್ಮಾಣಕ್ಕೆ 180 ಕೋಟಿ, ಚಿಕ್ಕನಾಯಕನಹಳ್ಳಿಯಲ್ಲಿ ತಾಯಿ ಮಗು ಆಸ್ಪತ್ರೆ 30 ಕೋಟಿ ಮಂಜೂರಾತಿ , ತಾಲ್ಲೂಕಿಗೆ ಪಾಲಿಟೆಕ್ನಿಕ್ ಕಾಲೇಜು ಮಂಜೂರಾಗಿದ್ದು ತಿಪಟೂರು ತಾಲ್ಲೂಕಿಗೆ ತೋಟಗಾರಿಕಾ ಕಾಲೇಜು ಮಂಜೂರು ಮಾಡಲಾಗಿದೆ.
ಚಿಕ್ಕನಾಯಕನಹಳ್ಳಿ ಕೆರೆಗೆ 78 ಕೋಟಿ ಹಾಗೂ ಎತ್ತಿನಹೊಳೆಯಿಂದ 1.5 ಟಿ.ಎಂ.ಸಿ ನೀರು, ಗುಬ್ಬಿ ತಿಪಟೂರು ಹಾಗೂ ಚಿಕ್ಕನಾಯಕನಹಳ್ಳಿ ಕೆರೆಗೆ ಮಂಜೂರಾಗಿದೆ, ಇಷ್ಟೆಲ್ಲಾ ಅಭಿವೃದ್ದಿ ಕಾರ್ಯಗಳಿಗೆ ನಾನೇ ಶಂಕುಸ್ಥಾಪನೆ ಮಾಡಿ ಉದ್ಘಾಟನೆ ಮಾಡಿದ್ದೇನೆ ಇದು ತಾಲ್ಲೂಕಿನ ಅಭಿವೃದ್ದಿ ಅಲ್ಲವೇ ಎಂದರು.
ಸಮಾರಂಭದಲ್ಲಿ ವಿವಿಧ ಇಲಾಖೆ ಗಳ ಯೋಜನೆಯನ್ನು, ಸ್ತ್ರೀ ಶಕ್ತಿ ಸಂಘಗಳಿಗೆ ಹಾಗೂ ಫಲಾನುಭವಿಗಳಿಗೆ ಸಹಾಯಧನ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಶಿಕ್ಷಣಸಚಿವ ಬಿ.ಸಿ.ನಾಗೇಶ್, ವಿಧಾನ ಪರಿಷತ್ ಸದಸ್ಯ ಚಿದಾನಂದಗೌಡ, ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಕ ಅಧಿಕಾರಿ ಡಾ. ಕೆ. ವಿದ್ಯಾಕುಮಾರಿ, ತಹಸಿಲ್ದಾರ್ ಅರ್ಚನಾ ಭಟ್, ಪುರಸಭಾಧ್ಯಕ್ಷೆ ಪುಷ್ಪ ಹನುಮಂತರಾಜು ಮತ್ತಿತರರು ಉಪಸ್ಥಿತರಿದ್ದರು.
ವರದಿ ಚಿಕ್ಕನಾಯಕನಹಳ್ಳಿ ಚಂದ್ರು.