ಮಧುಗಿರಿ : ಬಿಜೆಪಿ ಅಭ್ಯರ್ಥಿ ಎಲ್ ಸಿ ನಾಗರಾಜುರವರ ಪತ್ನಿ ಸಾವು ಹಾಗೂ ಇಡಿ ದಾಳಿಗೂ ರಾಜಣ್ಣನವರಿಗೂ ಯಾವುದೇ ಸಂಬಂಧವಿಲ್ಲವೆಂದು ತಾಲೂಕು ನಾಯಕ ಸಂಘದ ಅಧ್ಯಕ್ಷರಾದ ರಂಗಶಾಮಣ್ಣ ತಿಳಿಸಿದರು.
ಪಟ್ಟಣದ ನಾಯಕ ಸಂಘ ಸಭಾಂಗಣದಲ್ಲಿ ಆಯೋಜಿಸಿದ್ದ ಸಮುದಾಯದ ಮುಖಂಡರ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿ ಮಾತನಾಡಿದರು.
ಇತ್ತೀಚಿಗೆ ಸಾಮಾಜಿಕ ಜಾಲತಾಣಗಳಲ್ಲಿ ಬಿಜೆಪಿ ಅಭ್ಯರ್ಥಿ ಎಲ್ ಸಿ.ನಾಗರಾಜು ಮತ್ತು ಕುಟುಂಬದವರು ಸೇರಿಕೊಂಡು ಪತ್ನಿ ಸಾವಿನ ಹೆಸರಿನಲ್ಲೂ ತನ್ನ ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ.
ಹಾಗೂ ಸಮುದಾಯದ ಮುಗ್ದ ಮತದಾರರನ್ನು ಸೆಳೆಯು ಉದ್ದೇಶದಿಂದ ಇಲ್ಲಸಲ್ಲದ ಗೊಂದಲವನ್ನು ಸೃಷ್ಟಿಸುತ್ತಿದ್ದಾರೆ.
ಕೆಲವೊಂದು ವಿಚಾರಗಳನ್ನು ಮರೆಮಾಚಿ ಅವರ ವಿರುದ್ಧ ಇಲ್ಲಸಲ್ಲದ ಆರೋಪ ಮಾಡುತ್ತಿರುವುದು ಸರಿಯಲ್ಲ. ಪತ್ನಿಯವರು ಎಲ್ಲೂ ರಾಜಣ್ಣ ನವರ ಹೆಸರನ್ನು ಹೇಳಿಲ್ಲ ನಿಮ್ಮ ವೈಯಕ್ತಿಕ ವಿಚಾರಗಳಿಗೆ ರಾಜಣ್ಣಜವಾಬ್ದಾರರಾಗಿರುವುದಿಲ್ಲ. ಇದೇ ರೀತಿ ಆರೋಪಿಸಿದರೆ ಮುಂದಿನ ದಿನಗಳಲ್ಲಿಇದಕ್ಕೆ ಬೆಲೆ ತೆರಬೇಕಾದಿತು ಎಂದರು.
ಸಂಘದ ಉಪಾಧ್ಯಕ್ಷರಾದ ಹನುಮಂತ ರಾಯಪ್ಪ ಮಾತನಾಡಿ ಈ ಇಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ
ಅಧಿಕಾರಿಯಾಗಿದ್ದ ನಾಗರಾಜು ರವರ ಮನೆ ಮೇಲೆ ಇಡೀ ಅಧಿಕಾರಿಗಳು ದಾಳಿ ನಡೆಸಿದ್ದು ಈ ದಾಳಿಗೂ ನಮಗೂ ಹಾಗೂ ಕೆ.ಎನ್ ರಾಜಣ್ಣ ರವರಿಗಾಗಲಿ ಸಂಬಂಧವಿಲ್ಲ. ಎಲ್. ಸಿ.ನಾಗರಾಜು ರವರ ಪತ್ನಿ ಸಾವಿಗೆ ಅವರ ಕುಟುಂಬದ ಅನೇಕ ವೈಯಕ್ತಿಕ ಕಾರಣಗಳಿವೆ ಅದೂ ಅವರಿಗೂ ತಿಳಿದಿದೆ. ಆ ವಿಚಾರವನ್ನು ಮುಚ್ಚಿಟ್ಟು ಚುನಾವಣಾ ಸಮಯದಲ್ಲಿ ಸಾವಿನ ಹೆಸರಿನಲ್ಲಿ ರಾಜಕೀಯ ಮಾಡಲು ಹೊರಟಿರುವುದು ವಿಷಾದದ ಸಂಗತಿಯಾಗಿದ್ದು ಈ ಹಿಂದೆ ದಾಳಿ ನಡೆಸಿದ ಸರ್ಕಾರವೇ ಈಗ ನಿಮಗೆ ಪಕ್ಷದಿಂದ ಕ್ಷೇತ್ರದ ಟಿಕೆಟ್ ನೀಡಿ ನಮ್ಮ ಸಮಾಜದಲ್ಲಿ ಒಡಕು ಸೃಷ್ಟಿಸಲು ಹೊರಟಿರುವುದು ಸರಿಯಲ್ಲ . ನಮ್ಮ ತಾಲೂಕು ನಾಯಕ ಸಮುದಾಯವು ಮೊದಲಿನಿಂದಲೂ ನಮ್ಮ ಕಷ್ಟ ಸುಖಗಳಿಗೆ ಭಾಗಿ ಆಗುತ್ತಿರುವ ಕೆ ಎನ್ ರಾಜಣ್ಣ ರವರ ಬೆಂಬಲಿಸುತ್ತಾ ಬಂದಿದ್ದೇವೆ. ಮುಂದಿನ ದಿನಗಳಲ್ಲೂ ಅವರ ಪರವಾಗಿ ನಿಲ್ಲುತ್ತೇವೆ. ಸಮುದಾಯ ನಿಲ್ಲಲಿದೆ ಎಂದರು.
ತಾಲೂಕು ಮಹಿಳಾ ನಾಯಕ ಸಂಘದ ಅಧ್ಯಕ್ಷೆ ಚಂದ್ರಮ್ಮ ಮಾತನಾಡಿ ಎಲ್ ಸಿ ನಾಗರಾಜ್ ರವರ ಪುತ್ರಿಯರು ಅವರ ತಾಯಿಯ ಸಾವು ನೋವಿನ ಬಗ್ಗೆ ಕಣ್ಣೀರು ಹಾಕಿ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹರಿ ಬಿಡುತ್ತಿದ್ದಾರೆ. ವಿದ್ಯಾವಂತರಾದ ಇವರುಗಳು ಈ ಘಟನೆಯ ಬಗ್ಗೆ ಸತ್ಯ ಸತ್ಯತೆ ತಿಳಿದಿದ್ದರು ಇನ್ನೊಬ್ಬರ ಮೇಲೆ ಆರೋಪ ಮಾಡುವುದು ಇವರಿಗೆ ಶೋಭೆ ತರುವುದಿಲ್ಲ , ವಿನಾಕಾರಣ ಇನ್ನೊಬ್ಬರನ್ನು ಟೀಕಿಸುವುದನ್ನು ಬಿಟ್ಟು ಕಾನೂನು ಹೋರಾಟ ನಡೆಸಲಿ ಎಂದರು.
ಈ ಸಂಧರ್ಭದಲ್ಲಿ
ಲೋಕೇಶ್ , ರಾಜಣ್ಣ ,ಟಿ ವಿ ಎಸ್ ಮಂಜು , ಅಭಿಷೇಕ್ , ಯೋಗೀಶ್ , ಅಂಜನೇಯಲು , ಶಂಕರನಾರಾಯಣ ಬಾಬು , ಜಗದೀಶ್ ಕುಮಾರ್ , ನಾರಾಯಣ್ಣಪ್ಪ , ಕರಿಯಣ್ಣ , ಚಿರಂಜೀವಿ , ದೊಡ್ಡಯ್ಯ , ನಾಗರಾಜು ಹೆಚ್ ಎನ್ ಹಾಗೂ ಮತ್ತಿತರರು ಇದ್ದರು.
ವರದಿ ಮದುಗಿರಿ ಬಾಲು ಪಾಣಿಂದ್ರ.