ಕೆ.ಎಸ್.ಕಿರಣ್ ಕುಮಾರ್ ರವರು ಕಾಂಗ್ರೆಸ್ ಗೆ ಸೇರುತ್ತಿದ್ದಂತೆ ಬೇರೆ ಪಕ್ಷದವರು ಅಪಪ್ರಚಾರ ಮಾಡುತ್ತಿದ್ದಾರೆ ಇದಕ್ಕೆ ಮತದಾರರು ಕಿವಿಕೊಡಬಾರದು : ಸಿ.ಎಸ್.ಲಿಂಗದೇವರು.

 ಚಿಕ್ಕನಾಯಕನಹಳ್ಳಿ :ಕೆ.ಎಸ್.ಕಿರಣ್ ಕುಮಾರ್ ರವರು ಕಾಂಗ್ರೆಸ್ ಗೆ ಸೇರುತ್ತಿದ್ದಂತೆ ಬೇರೆ ಪಕ್ಷದವರು ಅಪಪ್ರಚಾರ ಮಾಡುತ್ತಿದ್ದಾರೆ ಇದಕ್ಕೆ ಮತದಾರರು ಕಿವಿಕೊಡಬಾರದು, ಕೆ.ಎಸ್.ಕಿರಣ್ ಕುಮಾರ್ ಮತ್ತೆ ಬಿಜೆಪಿ ಪಕ್ಷ ಸೇರುವುದಿಲ್ಲ ಕಾಂಗ್ರೆಸ್ ಪಕ್ಷದಲ್ಲೇ ತಮ್ಮ ರಾಜಕೀಯ ಜೀವನ ಮುಂದುವರೆಸುತ್ತಾರೆ, ವಿರೋಧ ಪಕ್ಷಗಳ ಆರೋಪಗಳಿಗೆ ಕಿವಿಗೊಡಬೇಡಿ ಎಂದು ಡಿಎಸ್ ಎಸ್ ಮುಖಂಡ ಸಿ.ಎಸ್.ಲಿಂಗದೇವರು ಹೇಳಿದರು.


ಪಟ್ಟಣದ ಜೋಗಿಹಳ್ಳಿ ಗೇಟ್ ಬಳಿ ಇರುವ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆ.ಎಸ್.ಕಿರಣ್ ಕುಮಾರ್ ರವರ ಕಛೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಿರಣ್ ಕುಮಾರ್ ರವರನ್ನು ಸೋಲಿಸಲು ಅವರ ಬಗ್ಗೆ ಅಪಪ್ರಚಾರ, ಸುಳ್ಳು ಸುದ್ದಿಗಳನ್ನು ಹರಿಬಿಡುತ್ತಿದ್ದಾರೆ, ಮತದಾರ ಪ್ರಭುಗಳು ಇಲ್ಲಸಲ್ಲದ ಆರೋಪಕ್ಕೆ, ಅಪಪ್ರಚಾರಕ್ಕೆ ಎಂದಿಗೂ ಕಿವಿಗೊಡಬೇಡಿ ಎಂದರಲ್ಲದೆ, ತಾಲ್ಲೂಕಿನಾದ್ಯಂತ ಕಾಂಗ್ರೆಸ್ ಪಕ್ಷಕ್ಕೆ ಹೆಚ್ಚಿನ ಒಲವು ಇದೆ, ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದ ವೇಳೆ ಜಾರಿಗೆ ತಂದಿದ್ದ ಅನ್ನಭಾಗ್ಯ ಯೋಜನೆ ಸೇರಿದಂತೆ ಬಡವರ ಪರ ಇದ್ದಂತಹ ಯೋಜನೆಗಳು ಈಗಲೂ ಜನರ ಮನಸ್ಸಿನಲ್ಲಿ ಹರಿದಾಡುತ್ತಿವೆ ಆ ಯೋಜನೆಗಳೇ ಕಾಂಗ್ರೆಸ್ ಪಕ್ಷಕ್ಕೆ ಗೆಲುವು ನೀಡಲು ಸಹಕಾರಿಯಾಗಿದೆ ಎಂದರಲ್ಲದೆ, ಕೆ.ಎಸ್.ಕಿರಣ್ ಕುಮಾರ್ ರವರು ಸಹ ತಾಲ್ಲೂಕಿನ ಜನತೆಗೆ ಚಿರಪರಿಚಿತರೇ ಆಗಿದ್ದಾರೆ, ಅವರ ಸರಳ, ಸಜ್ಜನಿಕೆ ಮಾತುಗಳು, ಕೆಲಸ ಮಾಡಲು ಸಿದ್ದರಾಗುವ ಪರಿ ಸೇರಿದಂತೆ ಅವರ ಗುಣಗಳು ಈ ಬಾರಿ ಗೆಲ್ಲಿಸಲು ಮತ್ತೊಂದು ಮೆಟ್ಟಿಲಾಗಿದೆ ಎಂದರಲ್ಲದೆ ಚಿಕ್ಕನಾಯಕನಹಳ್ಳಿಗೆ ಮಾಜಿ ಮುಖ್ಯಮಂತ್ರಿಗಳಾದ ಕಾಂಗ್ರೆಸ್ ಪಕ್ಷದ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯನವರು, ಡಿ.ಕೆ.ಶಿವಕುಮಾರ್ ಹಾಗೂ ಜಮೀರ್ ಅಹಮದ್ ರವರು ಏಪ್ರಿಲ್ 20ರಂದು ಆಗಮಿಸಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಕಿರಣ್ ಕುಮಾರ್ ರವರ ಪರವಾಗಿ ಪ್ರಚಾರ ಮಾಡಲಿದ್ದಾರೆ ಎಂದು ತಿಳಿಸಿದರು. 

ದಲಿತ ಮುಖಂಡ ಬೇವಿನಹಳ್ಳಿ ಚನ್ನಬಸವಯ್ಯ ಮಾತನಾಡಿ, ತಾಲ್ಲೂಕಿನಾದ್ಯಂತ ಕಾಂಗ್ರೆಸ್ ಗಾಳಿ ಬೀಸುತ್ತಿದೆ, ಪ್ರತಿಯೊಬ್ಬರೂ ಕೂಡ ಕಾಂಗ್ರೆಸ್ ಪರ ಒಲವನ್ನು ಹೆಚ್ಚಿಸಿದರೆ ಈ ಬಾರಿ ತಾಲ್ಲೂಕಿನಲ್ಲಿ ಕಾಂಗ್ರೆಸ್ ಗೆದ್ದು ನಗೆ ಬೀರಲಿದೆ, ಇತಿಹಾಸವನ್ನು ಸೃಷ್ಟಿಸಲಿದೆ. ಕಾಂಗ್ರೆಸ್ ಗೆಲುವಿಗಾಗಿ ನಾವೆಲ್ಲರೂ ಒಗ್ಗಟ್ಟಾಗಬೇಕಿದೆ ಪ್ರತಿಯೊಬ್ಬರನ್ನು ಕಾಂಗ್ರೆಸ್ ಕಡೆ ಮುಖ ಮಾಡುವಂತೆ ತಿಳಿಸಬೇಕು, ಬೇರೆ ಪಕ್ಷದವರು ಕಿರಣ್ ಕುಮಾರ್ ರವರ ವಿರುದ್ದ ಮಾಡುತ್ತಿರುವ ಆರೋಪಗಳೆಲ್ಲಾ ಸುಳ್ಳು, ಅವರು ಕಾಂಗ್ರೆಸ್ ಪಕ್ಷ ಬಿಟ್ಟು ತೊರೆಯುವುದಿಲ್ಲ, ಗೆಲುವು ಕಂಡ ತಕ್ಷಣ ನಮ್ಮೆಲ್ಲರ ಅಭಿಲಾಷೆಯಂತೆ ಡಾ.ಬಾಬು ಜಗಜೀವನರಾಂ ಭವನ ನಿರ್ಮಾಣ ಕಾರ್ಯಕ್ಕೆ ಮುಂದಾಗುತ್ತಾರೆ ಎಂದರು.

ದಲಿತ ಮುಖಂಡ ಜೆ.ಸಿ.ಪುರ ಗೋವಿಂದಯ್ಯ ಮಾತನಾಡಿ, ಕಾಂಗ್ರೆಸ್ ಪಕ್ಷದ ಮೂಲಕ ಕೆ.ಎಸ್.ಕಿರಣ್ ಕುಮಾರ್ ರವರು ಎಲ್ಲಾ ವರ್ಗದವರಿಗೆ ಅನುಕೂಲ ಮಾಡಿಕೊಡಲಿದ್ದಾರೆ, ಹೆಚ್ಚಿನದಾಗಿ ಕಡುಬಡವರಿಗೆ ಅವರ ನೆರವು ಇರಲಿದೆ, ಸಿದ್ದರಾಮಯ್ಯನವರಂತೆ ಕಿರಣ್ ಕುಮಾರ್ ರವರೂ ಸಹ ಬಡವರ ಪರ ಕಾಳಜಿ ಇರುವಂತಹವರು ಎಂದರಲ್ಲದೆ ಈ ಬಾರಿ ಕಾಂಗ್ರೆಸ್ ಪಕ್ಷ ಅತಿ ಹೆಚ್ಚು ಮತಗಳ ಅಂತರದಲ್ಲಿ ಗೆಲ್ಲಲಿದೆ, ಕಿರಣ್ ಕುಮಾರ್ ರವರು ಯಾವುದೇ ರೀತಿಯ ಜಾತಿ ರಾಜಕಾರಣ ಮಾಡುವುದಿಲ್ಲ ಹಾಗಾಗಿ ದಲಿತ ಸಂಘಟನೆಗಳು ಅವರ ಪರವಾಗಿವೆ ಎಂದರು.

 ಈ.ಪತ್ರಿಕಾಗೋಷ್ಠಿಯಲ್ಲಿ ದಲಿತ ಮುಖಂಡರುಗಳಾದ ಕೃಷ್ಣಮೂರ್ತಿ,ನಾರಾಯಣ್ ಹಾಗೂ ಕಾಂಗ್ರಸ್ ಸೇವಾದಳದ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಜಿ.ಕೃಷ್ಣೆಗೌಡ ಮತ್ತಿತರರು ಉಪಸ್ಥಿತರಿದ್ದರು.



ವರದಿ ಚಿಕ್ಕನಾಯಕನಹಳ್ಳಿ ಚಂದ್ರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

Please Select Embedded Mode To Show The Comment System.*

ನವೀನ ಹಳೆಯದು