ಗುಬ್ಬಿ : ಎಚ್ಎಲ್ ಘಟಕ ಉದ್ಘಾಟನೆಗೆ ಬಂದಿದ್ದ ಸನ್ಮಾನ್ಯ ಶ್ರೀ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಡಿಕೆ ಪೇಟ ಹಾಗೂ ಅಡಿಕೆ ಹಾರ ಹಾಕಲಾಗಿತ್ತು ಅದೇ ರೀತಿ ಹೇರೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮನೆ ಮನೆ ಪ್ರಚಾರದ ವೇಳೆ ಅಭಿಮಾನಿಯೊಬ್ಬರು ಇಂದು ಪೇಟ ಹಾಗೂ ಹಾರವನ್ನು ಮಾಜಿ ಸಚಿವ ಎಸ್ ಆರ್ ಶ್ರೀನಿವಾಸ್ ಗೆ ಹಾಕಿದ್ದು ವಿಶೇಷವಾಗಿತ್ತು.
ಗುಬ್ಬಿ ಅಂದ್ರೆ ತೆಂಗು ಹಾಗೂ ಅಡಕೆಗೆ ಹೆಸರುವಾಸಿ ಅದೇ ರೀತಿ ತಾಲೂಕಿನ ಕಸಬಾ ಹೋಬಳಿ ನಡುವಲಪಾಳ್ಯ ಗ್ರಾಮದ ಎಸ್ ಆರ್ ಶ್ರೀನಿವಾಸ್ ಅಭಿಮಾನಿ ನರಸಿಂಹರಾಜು ರಾಜಣ್ಣ ಎನ್ನುವವರು ಪ್ರಧಾನಿ ನರೇಂದ್ರ ಮೋದಿಯವರಿಗೆ ಅಡಿಕೆ ಹಾರ ಹಾಗೂ ಪೇಟ ತಯಾರು ಮಾಡಿದ್ದ ತಮ್ಮದೇ ಗ್ರಾಮದ ಪ್ಲವರ್ ಡೆಕೋರೇಟರ್ ಎನ್ ಆರ್ ನಟರಾಜು ಅವರ ಮೂಲಕ ಹಾರ ಹಾಗೂ ಪೇಟ ತಯಾರಿಸಿ ವಿಶೇಷವಾಗಿ ಸ್ವಾಗತ ಕೋರಿದರು.
ಮಾಜಿ ಸಚಿವ ಎಸ್ ಆರ್ ಶ್ರೀನಿವಾಸ್ ಅವರಿಗೆ ವಿಶೇಷವಾಗಿ ತನ್ನದೇ ಅದ ರೀತಿಯಲ್ಲಿ ಗೌರವಿಸುವ ಉದ್ದೇಶದಿಂದ ಅಭಿಮಾನಿ ಪ್ಲವರ್ ಡೆಕೋರೇಟರ್ ನಟರಾಜು ಅವರ ಮೂಲಕ 300 ಗ್ರಾಮ್ ಚೂರು ಅಡಿಕೆಯಿಂದ ಟೋಪಿ ಹಾಗೂ ಎರಡು ಕೆಜಿ ಉಂಡೆ ಅಡಿಕೆಯಿಂದ ಹಾರವನ್ನು ತಯಾರು ಮಾಡಿಸಿದ್ದು ವಿಶೇಷವಾಗಿತ್ತು.
ಅಂದು ಪ್ರಧಾನಿ ನರೇಂದ್ರ ಮೋದಿ ಅವರ ತಲೆಮೇಲೆ ಕಂಗೊಳಿಸಿದ್ದ ಅಡಿಕೆ ಪೇಟ ಹಾಗೂ ಹಾರ ಇಂದು ಮಾಜಿ ಸಚಿವ ಎಸ್ ಆರ್ ಶ್ರೀನಿವಾಸ್ ತಲೆ ಮೇಲೆ ಕಂಗೊಳಿದ್ದು ಅಭಿಮಾನಿಗಳು ಹಾಗೂ ಕಾರ್ಯಕರ್ತರಲ್ಲಿ ಉತ್ಸಾಹ ತುಂಬಿತ್ತು.