ಪಾವಗಡ: ಶ್ರೀರಾಮಾನುಜರ ತತ್ವ ಆದರ್ಶಗಳನ್ನು ನಾವುಗಳು ಮೈಗೂಡಿಸಿಕೊಳ್ಳಬೇಕು ಎಂದು ತುಮಕೂರು ವೈಷ್ಣವ ಸಂಘದ ಮುಖಂಡ ವೆಂಕಟೇಶ್ ತಿಳಿಸಿದರು.
ತಾಲ್ಲೂಕಿನ ಮಂಗಳವಾಡ ಗ್ರಾಮದಲ್ಲಿ ತಾಲ್ಲೂಕು ವೈಷ್ಣವ ಮಹಾಸಭಾದ ವತಿಯಿಂದ ಹಮ್ಮಿಕೊಂಡಿದ್ದ ಶ್ರೀರಾಮನುಜಚಾರ್ಯರ 5 ನೇ ಜಯಂತೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು ವಿಶಿಷ್ಟ ಅದ್ವೈತ ಸಿದ್ದಾಂತ ಪ್ರತಿಪಾದಕರಾದ ಶ್ರೀ ರಾಮನುಜರು ಆಗಿನ ಕಾಲದ ಸಮಾನತೆಯ ಹರಿಕಾರರು, ಕೆಳ ವರ್ಗದ ಜನರಿಗೆ ವೈಷ್ಣವ ದೀಕ್ಷೆ ನೀಡಿ ಸಮಾನತೆಯ ಪಾಠ ಭೋದಿಸಿದ ಮಹಾನ್ ಸಂತರು ಎಂದು ತಿಳಿಸಿದರು
ತಾಲ್ಲೂಕು ವೈಷ್ಣವ ಮಹಾಸಭಾದ ಅಧ್ಯಕ್ಷ ಸಂಪತ್ ಕುಮಾರ್ ಮಾತನಾಡಿ ವೈಷ್ಣವ ಧರ್ಮಕ್ಕೆ ಅಡಿಪಾಯ ಹಾಕಿ ನಮ್ಮ ಸಮುದಾಯದ ಶ್ರೇಯೋಭಿವೃದ್ದಿಗೆ ಶ್ರಮಿಸಿದ ಮಹಾನ್ ಸಾಧಕರಾದ ರಾಮಾನುಜರ ಜಯಂತಿಯನ್ನು ಇಂದು ತಾಲ್ಲೂಕಿನ ವೈಷ್ಣವ ಬಂಧುಗಳಾದ ನಾವೇಲ್ಲರು ಆಚರಿಸುತ್ತಿದ್ದೇವೆ, ರಾಮನುಜರು ನಮ್ಮೇಲ್ಲರ ಕುಲಗುರುಗಳು ಎಂದು ತಿಳಿಸಿದರು
ಕಾರ್ಯಕ್ರಮಕ್ಕೂ ಮುನ್ನ ಊರಿನ ಪ್ರಮುಖ ಬೀದಿಗಳಲ್ಲಿ ಶ್ರೀ ರಾಮನುಜರ ವಿಗ್ರಹವನ್ನು ವೇದ-ಮಂತ್ರ- ಘೋಷಗಳೊಂದಿಗೆ ಮೆರವಣಿಗೆ ನಡೆಸಲಾಯಿತು,
ರಾಮಾನುಜರ ಕುರಿತ ಹಾಡುಗಳಿಗೆ ನೃತ್ಯ ಮಾಡುವುದರ ಮೂಲಕ ಮೆರವಣಿಗೆ ಸಾಗಿತ್ತು
ಕಾರ್ಯಕ್ರಮದಲ್ಲಿ ಜಿಲ್ಲಾ ವೈಷ್ಣವ ಸಂಘದ ಮುಖಂಡರಾದ ಮೋಹನ್ ಕುಮಾರ್, ನಾರಯಣ್, ರವಿಕುಮಾರ್, ಶ್ರೀನಿವಾಸ್, ಶಿರಾದ ಮೋಹನ್, ಜಿಲ್ಲಾ ವೈಷ್ಣವ ಸಂಘದ ನಿರ್ದೇಶಕ ಮಂಗಳವಾಡ ಪಾಂಡು, ಶ್ರೀನಾಥ್, ಕಾರ್ಯದರ್ಶಿ ರಾಮು, ಮಾರುತಿ, ನಾಗೇಶ್, ವೆಂಕಟೇಶ್, ರವಿ ಪುರೋಹಿತ್, ಭರತ್, ನವೀನ್, ಇತರ ಮುಖಂಡರು ಹಾಜರಿದ್ದರು
ವರದಿ: ಶ್ರೀನಾಥ್ ಪಿ.ಜಿ. ಪಾವಗಡ