ಗುಬ್ಬಿ: ಪಟ್ಟಣದ ತಾಲೂಕು ಕಚೇರಿಯ ಚುನಾವಣಾ ಕಚೇರಿಯಲ್ಲಿ ಇಂದು ಚುನಾವಣಾ ಅಧಿಕಾರಿ ಜಂಬಗಿ ರೇಣುಕಾ ಪ್ರಸಾದ್ ಹಾಗೂ ಸಹಾಯಕ ಚುನಾವಣಾಧಿಕಾರಿ ಹಾಗೂ ತಹಶೀಲ್ದಾರ್ ಬಿ ಆರತಿ ಅವರು ವಿಧಾನ ಸಭಾ ಚುನಾವಣೆ ಸಂಬಂಧಿಸಿದ ಸುದ್ದಿಗೋಷ್ಠಿ ನಡೆಸಿದರು.
ಸಹಾಯಕ ಚುನಾವಣಾಧಿಕಾರಿ ಹಾಗೂ ತಹಶೀಲ್ದಾರ್ ಬಿ ಆರತಿ ಮಾತನಾಡಿ ವಿಧಾನ ಸಭಾ ಕ್ಷೇತ್ರದಲ್ಲಿ 80+ ಮತದಾರರು 278 ಅರ್ಜಿಗಳು ಸ್ವಿಕರವಾಗಿದ್ದು, 269 ಮತದಾರರು ಮತ ಚಲಾವಣೆ ಮಾಡಿದ್ದು, ಆರು ಮಂದಿ ಮರಣವೊಂದಿದ್ದಾರೆ. ಕ್ಷೇತ್ರದಲ್ಲಿ 181086 ಒಟ್ಟು ಮತದಾರರಿದ್ದು,90592 ಮಹಿಳೆ ಹಾಗೂ 90,483 ಇತರೆ 36 ಮತದಾರಿದ್ದು, ಪೋಸ್ಟಲ್ 1051 ಅರ್ಜಿಗಳು ಬಂದಿದ್ದು, 585 ಮತದಾನವಾಗಿದ್ದು, 120 ಹೊರ ಜಿಲ್ಲೆಯ ಮತದಾರರಿದ್ದು ಚುನಾವಣಾ ಕರ್ತವ್ಯದಲ್ಲಿ ತೊಡಗಿರುವ ನೌಕರರು ಜಿಲ್ಲೆಯ ಬೇರೆ ಬೇರೆ ಕ್ಷೇತ್ರಗಳಿಗೆ ತೆರಳುವವರು ನಾಳೆ ಬೆಳಗ್ಗೆ 6 ಗಂಟೆಯಿಂದ ಮತದಾನ ಮಾಡಲು ಮತಗಟ್ಟೆ ಕೇಂದ್ರವನ್ನು ತೆರೆಯಲಾಗಿದೆ ಎಂದು ತಿಳಿಸಿದರು.
ಇಂದು ಸಂಜೆ 6ಕ್ಕೆ ಬಹಿರಂಗ ಪ್ರಚಾರಕ್ಕೆ ತೆರೆ ಬೀಳಲಿದ್ದು, ಮನೆ ಮನೆ ಪ್ರಚಾರಕ್ಕೆ ಅವಕಾಶವಿದ್ದು, ಮೂರು ವಾಹನಗಳ ಬಳಕೆಗೆ ಚುನಾವಣಾ ಆಯೋಗ ಅವಕಾಶ ಮಾಡಿಕೊಟ್ಟಿದೆ. ಸಖಿ ಮತಗಟ್ಟೆ ಕೇಂದ್ರ (ಮಹಿಳೆ) 05, ಮತಗಟ್ಟೆ ಸಂಖ್ಯೆ 76,65,163 ಅಂಗವಿಕಲ ಮತಗಟ್ಟೆ ಸಂಖ್ಯೆ 135 (pwd ಕಚೇರಿ) , ಯುವ ಮತದಾರರನ್ನು ಸೆಳೆಯುವ ನಿಟ್ಟಿನಲ್ಲಿ ಎರಡು ಮತಗಟ್ಟೆಯನ್ನು ಪ್ರತ್ಯೇಕವಾಗಿ ತೆರೆಯಲಾಗಿದೆ ಎಂದು ಚುನಾವಣಾ ಅಧಿಕಾರಿ ಜಂಬಗಿ ರೇಣುಕಾ ಪ್ರಸಾದ್ ದಿಲೀಪ್ ತಿಳಿಸಿದರು.
ಸಂಜಯ್ ಕೊಪ್ಪ ಗುಬ್ಬಿ