ನಾನು ಒಂದು ಮೀಸಲಾತಿ ಕೊಡುತ್ತೀವಿ ಅಂದರೆ ನಿಮ್ಮೆಲ್ಲರ ಒಂದೊಂದು ವೋಟು ಮೀಸಲು ನೀಡಿ : ---ಜೆ. ಸಿ. ಮಾಧುಸ್ವಾಮಿ.

 ಚಿಕ್ಕನಾಯಕನಹಳ್ಳಿ : ಸಾಮಾಜಿಕ ನ್ಯಾಯದಡಿ ಮೀಸಲು ಕಲ್ಪಿಸಿರುವ ಬಿಜೆಪಿ ಪಕ್ಷಕ್ಕೆ, ನಿಮ್ಮಗಳ ಮತ ಮೀಸಲು ಇಡಿ. ಸಚಿವ ಜೆಸಿ ಮಾಧುಸ್ವಾಮಿ.


 30 ವರ್ಷಗಳ ಹೋರಾಟದ ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿಯಲ್ಲಿನ ದೋಷಗಳನ್ನು ಮಾರ್ಪಾಡು ಮಾಡಿ 2011ರ ಜಾತಿ ಗಣತಿ ಪ್ರಕಾರ ಜನಸಂಖ್ಯಾ ವಾರು ಸಾಮಾಜಿಕ ನ್ಯಾಯವಾಗಿ ಕಲ್ಪಿಸಿರುವ ಮೀಸಲು ಕೊಡುಗೆಗೆ ನಿಮ್ಮಗಳ ಮತ ಮೀಸಲಿಡಿ ಎಂದು ಸಚಿವ ಜೆ ಸಿ ಮಾಧುಸ್ವಾಮಿ ನುಡಿದರು.


 ಪಟ್ಟಣದ ನವೋದಯ ಕಾಲೇಜ್ ಆವರಣದಲ್ಲಿ ತಾಲೂಕ್ ಎಸ್ಸಿ ಜನಾಂಗದ ಮತ ಪ್ರಚಾರ ಸಭೆಯಲ್ಲಿ ಮಾತನಾಡಿದರು.


 ಒಳ ಮೀಸಲಾತಿಯನ್ನು ಧರ್ಮಸಿಂಗ್ ಅಧಿಕಾರದಲ್ಲಿದ್ದಾಗ ಕಾಂಗ್ರೆಸ್ ಪಕ್ಷ ನ್ಯಾಯಮೂರ್ತಿ ಸದಾಶಿವ ಆಯೋಗ ರಚನೆ ಮಾಡಿ, ವರದಿಯನ್ನ ನೀಡಿ 30 ವರ್ಷ ದಿಂದ ಒಪ್ಪಲು ಇಲ್ಲ, ತಿರಸ್ಕರಿಸಲು ಇಲ್ಲ, ಬಿಜೆಪಿ ಸರ್ಕಾರ ಐತಿಹಾಸಿಕ ದಿಟ್ಟ ನಿರ್ಧಾರವನ್ನು ತೆಗೆದುಕೊಂಡಿದೆ.


 101 ಪರಿಶಿಷ್ಟ ಜಾತಿಯಲ್ಲಿ ಎಡಗೈ ಸಮುದಾಯಕ್ಕೆ 6%,,

 ಬಲಗೈ ಸಮುದಾಯಕ್ಕೆ 5.5%

 ಲಂಬಾಣಿ ಬೋವಿ ಕೊರಮ ಕೊರಚ ಸಮುದಾಯಕ್ಕೆ 4.5%

 ಇನ್ನಿತರೆ ವಿಶೇಷ ಸಮುದಾಯಕ್ಕೆ1% ರಂತೆ ಒಳ ಮೀಸಲಾತಿ ಕಲ್ಪಿಸಿದ್ದು ಯಾರಿಗೆ ಪಾಲು ಸೇರಬೇಕು ಅವರಿಗೆಲ್ಲ ನಿಮ್ಮ ಪಾಲು ದಕ್ಕಿದೆ.


(ಬಾಕ್ಸ್ )

 ಒಳ ಮೀಸಲಾತಿ ಎನ್ನುವ ಜೇನು ಗೂಡಿನ ಪೋಟೆಯೊಳಗೆ ಬಿಜೆಪಿ ಕೈ ಇಟ್ಟಿದ್ದೇವೆ, ಆದರಲ್ಲಿ ಜೇನು ಹುಳು, ಹಾವು ಯಾವುದು ಕಚ್ಚುತ್ತವೆ ನಮ್ಮನ್ನು ಗೊತ್ತಿಲ್ಲ.

 ಇಂತಹ ದಿಟ್ಟ ನಿರ್ಧಾರ ತೆಗೆದುಕೊಂಡಿರುವ ನಮಗೆ ಅಂಬೇಡ್ಕರ್ ಸಿದ್ದಾಂತವನ್ನು ಬಳಸಿಕೊಳ್ಳುವ ಮೂಲಕ ಓಟಿನ ಶಕ್ತಿ ಬಳಸಿ ಸ್ವಾಭಿಮಾನದ ಮತ ನೀಡಿ.



 ಸುಪ್ರೀಂ ಕೋರ್ಟ್ ನಲ್ಲಿ ಯಾರೋ ಅರ್ಜಿದಾರರು ತಕರಾರು ಮಾಡಿ ಲಂಬಾಣಿ, ಕೊರಮ,ಕೊರಚ,ಬೋವಿ, ಸಮುದಾಯವು ಎಸ್ ಸಿ ಪಟ್ಟಿಯಿಂದ ಕೈಬಿಡಬೇಕೆಂದು ಅರ್ಜಿ ಸಲ್ಲಿಸಿರುವ ಕಾರಣ 15 ವರ್ಷಗಳ ಹಿಂದೆಯೇ ಕಾಂಗ್ರೆಸ್ ಸರ್ಕಾರಗಳಿಗೆ ಶೆಡ್ಯೂಲ್ ಕ್ಯಾಸ್ಟ್ರೋ, ಇಲ್ಲವೋ ಅನ್ನುವ ಬಗ್ಗೆ ವರದಿ ನೀಡಿಲ್ಲ, ಆದರೆ ಬಿಜೆಪಿ ಸರ್ಕಾರ ಸಚಿವ ಸಂಪುಟದಲ್ಲಿ ಬದ್ಧತೆ ತೋರಿ ಲಂಬಾಣಿ ಕೊರವ ಕೊರಚ ಬೋವಿ ಇವರುಗಳು ಎಸ್ ಸಿ ಪಟ್ಟಿಯಲ್ಲಿ ಇದ್ದಾರೆ ಎಂಬುವುದರ ಮೂಲಕ ಬದ್ಧತೆ ತೋರಿದ್ದೇವೆ, ಆದ್ರೆ ದುರ್ದೈವ ಒಳ ಮೀಸಲಾತಿಯಲ್ಲಿ ಬಹು ಸಿಂಹ ಪಾಲು ಪಡೆದ ಲಂಬಾಣಿ ಸಮುದಾಯ ಬಿಜೆಪಿ ಪಕ್ಷದ, ಮುಖಂಡರುಗಳ ಮೇಲೆ ಹಲ್ಲೆ ಹೋರಾಟ ಇದು ಯಾವ ನ್ಯಾಯ..


 ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡಗಳ ಬಹು ದಿನಗಳ ಬೇಡಿಕೆ ಮೀಸಲಾತಿಯನ್ನು ಹೆಚ್ಚಳ ಮಾಡಿರುವುದರಿಂದ ಆ ಸಮುದಾಯದ ಮತದಾರರು ಸಾಮಾಜಿಕ ನ್ಯಾಯ ಕಲ್ಪಿಸಿದ ಬಿಜೆಪಿ ಪಕ್ಷದ ಪರ ಪಕ್ಷವನ್ನ ಕುಣಿದು ಕುಪ್ಪಳಿಸಿ ವೋಟು ಹಾಕಬೇಕ್ಕಿತ್ತು. ಆದರೆ ನಮಗೂ ಅದಕ್ಕೂ ಸಂಬಂಧವಿಲ್ಲದಂತೆ ಇದ್ದಾರೆ.


 ರಾಜ್ಯದ ಇತಿಹಾಸದಲ್ಲೇ ಇಂತಹ ರಿಸ್ಕ್ ತೆಗೆದುಕೊಂಡು ಸಾಮಾಜಿಕ ಬದ್ಧತೆ ತೋರಿರವರಲ್ಲಿ ಎಲ್ ಜೆ. ಹಾವನೂರು ಅವರು ಮತ್ತು ಜೆಸಿ ಮಾಧುಸ್ವಾಮಿಯವರು ನಿಲ್ಲಲಿದ್ದೇವೆ.


 ಈ ದೇಶದ ಪ್ರಜೆಗಳು ಸಂವಿಧಾನಾತ್ಮಕವಾಗಿ ದಕ್ಕ ಬೇಕಾದ ನಿಮ್ಮ ಸ್ವತ್ತು ಕಲ್ಪಿಸಿದ್ದು ಎಲ್ಲರಂತೆ ಬಾಳಿ ಜೀವನ ಮಾಡೋದಕ್ಕೆ ಸಂವಿಧಾನದ ಆಶಯವಾಗಿದೆ.


 ಸ್ವತಂತ್ರ ಬಂದು 75 ವರ್ಷ ಆದರೂ ಈ ದೇಶದಲ್ಲಿ ಜಾತಿಭೇದ ನಿಂತಿಲ್ಲ, ಆದ್ದರಿಂದ ಸಮಾಜದಲ್ಲಿ ಶೋಷಣೆಯಲ್ಲಿ ಅವರನ್ನು ಬದುಕಿಸಿರುತ್ತಿರೋ, ಅವರನ್ನ ಬೇರೆ ಅಂತ ನೋಡಿರಿತ್ತೀರೋ ಅಲ್ಲಿಯವರೆಗೂ ಅಂಥವರಿಗೆ ಮೀಸಲಾತಿ ಅಗತ್ಯ ವಿದೆ. ಎಂದರು.


 ಕೆಲವರು ಒಳ ಮೀಸಲಾತಿ ನಿರ್ಧಾರದ ಬದ್ಧತೆ ಯನ್ನ ವಿರೋಧಿಸುತ್ತಾ

 ಮಾತಾಡಿ ಮಾತಾಡಿ ನನ್ನನ್ನು ವಿಲನ್ ಆಗಿ ಮಾಡಿಬಿಟ್ಟಿದ್ದಾರೆ.


 24% ಪರಿಶಿಷ್ಟ ಜಾತಿಯಲ್ಲಿನ ಜನರ ಕೈಯಲ್ಲಿ 5% ಹೋದ್ರು ಇನ್ನುಳಿದ 15, 20% ಜನರ ವೋಟು ಬಂದ್ರೂ ಈ ರಾಜ್ಯದ ರಾಜಕಾರಣ ಬೇರೆ ಆಗುತ್ತೆ,, ಈ ರಾಜ್ಯದ ರಾಜಕಾರಣ ನಿಮ್ಮ ಕೈಯಲ್ಲಿದೆ.

 ಯಾರು ಕೆಲಸ ಮಾಡಿದ್ದಾರೋ ಅವರ ಋಣ ತೀರಿಸಿ ಕೊಳ್ಳಿ,

 ಯಾರು ಮಾಡಿದ್ದಾರೋ ಅವರಿಗೆ ಗೌರವ ತೀರಿಸಿ. ನಮಗೆ ಯಾರು ಆಗುತ್ತಾರೋ ಯಾರು ಆ ದಿಕ್ಕಿನಲ್ಲಿ ಕನಿಷ್ಠ ಯೋಚನೆ ಮಾಡುತ್ತಾರೋ ಅಂತ ಹೇಳಿ ಅವರಿಗೆ ಕೊಟ್ಟರೆ ಒಳ್ಳೆಯದು.


 ರಾಜ್ಯದಲ್ಲಿ ಮಾದಿಗ, ಹೊಲೆಯ ಸಂಬಂಧಿತ ಸಮುದಾಯದವರೇ ರಾಜ್ಯದಲ್ಲಿ ದೊಡ್ಡ ಮನುಷ್ಯರು.

 ಏಕೆಂದರೆ ಇತಿಹಾಸದಲ್ಲಿ ಕನಿಷ್ಠ ಆರು ಜಾತಿಗಳು ಮಾತ್ರ ಅಸ್ಪೃಶ್ಯತೆ ಜಾತಿಗಳಿದ್ದವು ಆದರೆ ನೂರೊಂದು ಜಾತಿಗಳು ಸೇರಿಕೊಂಡು ಎಸ್ ಎ ಪಟ್ಟಿಗೆ ಸೇರಿಸಿಕೊಂಡಾಗ ಸುಮ್ಮನೆ ಇದ್ದು ತಕರಾರು ಮಾಡದೆ ಇರುವರೆ ರಾಜ್ಯದಲ್ಲಿ ನಿಜವಾದ ದೊಡ್ಡ ಮನುಷ್ಯರು ನೀವುಗಳು.

 ದೊಡ್ಡತನ ಅರ್ಥ ಮಾಡಿಕೊಳ್ಳಿ ಅರ್ಥಮಾಡಿಕೊಂಡರೆ ಅವರ ಸಮಾಜಗಳು ಉದ್ದಾರ ಆಗುತ್ತವೆ, ಈ ದೊಡ್ಡತನವನ್ನು ಅರ್ಥ ಮಾಡಿಕೊಂಡರೆ ಸಮಾಜ ಉದ್ಧಾರ ಆಗುತ್ತಾರೆ, ದೊಡ್ಡತನ ಅರ್ಥಮಾಡಿಕೊಳ್ಳದಿದ್ದರೆ ಅವರ ಪರಿಣಾಮ ಅನುಭವಿಸುತ್ತಾರೆ.


 ಈ ಬಗ್ಗೆ ಉದ್ದ ಎಳೆದು ಯಾರೋ ಹಿತಾಸಕ್ತಿಗೆ ಒಳ್ಳೆಯದಲ್ಲ ಯಾರೋ ಮಾಡಿಕೊಂಡು ಬಂದ ಪೂರ್ವ ರಾಸಾಯಣೆ ಯನ್ನ ಒಬ್ಬನಿಗೆ ಕೊಡಬೇಕು ಅಂದ್ರೆ ಯಾವ ಧರ್ಮ.

ಅವರ ಪಾಲು ಅವರು ತಾಳಿ ಜನಸಂಖ್ಯೆಗೆ ಅನುಗುಣವಾಗಿ ತೆಗೆದುಕೊಳ್ಳಿ ಯಾವುದೇ ಸಮಾಜಕ್ಕೆ ಅನ್ಯಾಯ ಮಾಡಿಲ್ಲ ನಾನು.


ಈ ಒಳ ಮೀಸಲು ಕೇಂದ್ರ ಸರ್ಕಾರದ ಪಾರ್ಲಿಮೆಂಟ್ ನಲ್ಲಿ ಅಸ್ತು ಅಂದರೆ ಮಾತ್ರ ಸಿಂಧೂವಾಗುತ್ತದೆ.

 ಆದ್ದರಿಂದ ಪಾರ್ಲಿಮೆಂಟ್ ಮುಂದೆ ವರದಿ ಹೋಗಬೇಕಾದರೆ ನಮಗೆ ಶಕ್ತಿ ನೀಡಿ, ಪಾರ್ಲಿಮೆಂಟ್ ಮುಂದೆ ತರಬೇಕು ಅಂದರೆ ಇಲ್ಲಿ ಬಿಜೆಪಿ ಸರ್ಕಾರ ಮತ್ತೆ ಬರಬೇಕು.

 ಕಾಂಗ್ರೆಸ್ನವರು ಹೇಳಿದ್ದಾರೆ ಒಳ ಮೀಸಲು ರದ್ದು ಮಾಡುತ್ತೇವೆ ಎಂದು ಯಾರನ್ನು ಓಲೈಸುವ ಕೆಲಸ ಮಾಡುತ್ತಿದ್ದಾರೆ.


ಮೀಸಲು ಜಾರಿ ಮಾಡಿದವರಿಗೆ ಬೆಂಬಲ ಸೂಚಿಸುತ್ತೀರೋ.. ರದ್ದು ಮಾಡುವವರಿಗೆ ಬೆಂಬಲ ಕೊಡುತ್ತೀರಾ ನೋಡಿ..


 ಕಾಂಗ್ರೆಸ್ ನವರಿಗೆ ಎಸ್.ಸಿ, ಎಸ್.ಟಿ ಹಾಗೂ ಶೋಷಿತ ಸಮಾಜ ಚುನಾವಣೆ ಹೊತ್ತಿನಲ್ಲಿ ಜ್ಞಾಪಕಕ್ಕೆ ಬರುತ್ತದೆ ಎಂದು ಕೇಂದ್ರ ಸಾಮಾಜಿಕ ನ್ಯಾಯ ಸಚಿವ ಎ.ನಾರಾಯಣಸ್ವಾಮಿ ದಲಿತರಿಗೆ ಸ್ಮಶಾನಕ್ಕೆ ಭೂಮಿ ನೀಡುವಂತೆ ಹೈಕೋರ್ಟ್ ಆದೇಶ ನೀಡಿದರೂ 70 ವರ್ಷಗಳಿಂದ ನೀಡುತ್ತಿಲ್ಲ, ಶೋಷಿತ ವರ್ಗಗಳಿಗೆ ನಿವೇಶನ, ಮನೆ ಹಾಗೂ ಭೂಮಿಯ ಹಕ್ಕುಪತ್ರವನ್ನು ಕಾಂಗ್ರೆಸ್ ಸರ್ಕಾರ ನೀಡಲಿಲ್ಲ, ಒಳ ಮೀಸಲಾತಿಯ ಬಗ್ಗೆ ಸದಾಶಿವ ಆಯೋಗ ರಚಿಸಿ ಸರ್ಕಾರಕ್ಕೆ ವರದಿ ನೀಡಿದರೂ 30 ವರ್ಷಗಳಿಂದ ನೆನಗುದಿಗೆಗೆ ಬಿದ್ದಿದೆ, ಕೇಂದ್ರದ ಮೋದಿ ಪ್ರಧಾನ ಮಂತ್ರಿಯಾದ ನಂತರ ಗುಡಿಸಲು ವಾಸಿಗಳಿಗೆ ಮನೆಗಳು, ವಿದ್ಯುತ್, ಶೌಚಾಲಯ, ಗ್ಯಾಸ್ ಹಾಗೂ ಆಯುಷ್ ಮಾನ್ 5 ಲಕ್ಷದ ವರೆಗೆ ಉಚಿತ ಚಿಕಿತ್ಸೆ, ಭಾಗ್ಯಲಕ್ಷ್ಮೀ, ಸೈಕಲ್ ಹಾಗೂ ಕೋವಿಡ್ ಸಂದರ್ಭದಲ್ಲಿ 3 ಬಾರಿ ಉಚಿತ ವ್ಯಾಕ್ಸಿನೇಷನ್ ನೀಡಿ ಜನರ ಪ್ರಾಣ ಉಳಿಸಿದ್ದಾರೆ. ಜೆ.ಸಿ.ಮಾಧುಸ್ವಾಮಿ ಸಾಮಾಜಿಕ ಕಳಕಳಿ ಇರುವ ಸಚಿವರು 75 ವರ್ಷಗಳ ನಂತರ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿಯನ್ನು ಹೆಚ್ಚಿಸಿದ್ದಾರೆ ಎಂದರಲ್ಲದೆ ಚಿ.ನಾ.ಹಳ್ಳಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜೆ.ಸಿ.ಮಾಧುಸ್ವಾಮಿಯವರಿಗೆ ಮತ ನೀಡುವಂತೆ ಸಮಾಜದ ಜನರಿಗೆ ಮನವಿ ಮಾಡಿದರು.


 ಈ ವೇಳೆ ದಲಿತ ಮುಖಂಡ ಡಾಕ್ಟರ್ ರವಿಕುಮಾರ್ ಮಾತನಾಡಿ ಈ ರಾಜ್ಯ ಸರ್ಕಾರದ ಒಳ ಮೀಸಲಾತಿ ಬದ್ಧತೆಯ ಕಾರ್ಯಕ್ರಮ ಇತಿಹಾಸದ ಪುಟ ಸೇರಿದ ಮಹಾನ್ ಪುರುಷ ಜೆ.ಸಿ. ಮಾಧುಸ್ವಾಮಿ.


 ಈ ಸಮಾಜಕ್ಕೆ ದೀಪ ಇಟ್ಟಿದ್ದಾರೆ ಅವರನ್ನ ಶಾಸಕ ಮಂತ್ರಿಗೆ ಸೀಮಿತ ಮಾಡದೆ ಇನ್ನು ಮುಂದೆ ದೊಡ್ಡ ಹುದ್ದೆ ಹೋಗುವ ಎಲ್ಲಾ ಶಕ್ತಿ ಇರುವ ಗುಣ ಸಾಮಾಜಿಕ ನ್ಯಾಯದ ವ್ಯಕ್ತಿ ಯಾಗಿರುವ ಇವರಿಗೆ ಶಕ್ತಿ ಯಾಗಬೇಕಿದೆ.


 ಈಕಾರ್ಯಕ್ರಮದಲ್ಲಿ ಹರಿಯಾಣದ ಮಾಜಿ ಸಂಸದ ರಾಜೀವ್ ಜೈನ್, ಮಂಡಲದ ಅಧ್ಯಕ್ಷ ಆರ್.ಕೇಶವಮೂರ್ತಿ, ಪ್ರಧಾನ ಕಾರ್ಯದರ್ಶಿ ನಿರಂಜನ್ ಮೂರ್ತಿ, ಬುಕ್ಕಾಪಟ್ಟಣದ ಮುಖಂಡ ಸತ್ಯನಾರಾಯಣ್, ಡಿಎಸ್ಎಸ್ ಮುಖಂಡ ಬಿಳಿಗೆಹಳ್ಳಿ ರಾಜು,ದುಗುಡಿಹಳ್ಳಿ ಬಸವರಾಜ್, ಗೋ.ನಿ.ವಸಂತ್ ಕುಮಾರ್, ತಾ.ಪಂ.ಮಾಜಿ ಸದಸ್ಯ ರುದ್ರೇಶ್, ಅರಸ್ ಸೇರಿದಂತೆ ಹಲವರು ಹಾಜರಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

Please Select Embedded Mode To Show The Comment System.*

ನವೀನ ಹಳೆಯದು