ಗುಬ್ಬಿ : ಕಾಂಗ್ರೆಸ್ ಪಕ್ಷವು ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ್ದ ಶಕ್ತಿ ಯೋಜನೆಯ ಮೂಲಕ ಮಹಿಳಾ ಪ್ರಯಾಣಿಕರಿಗೆ ಉಚಿತ ಪ್ರಯಾಣಕ್ಕೆ ಶಾಸಕ ಎಸ್ ಆರ್ ಶ್ರೀನಿವಾಸ್ ಇಂದು ಚಾಲನೆ ನೀಡಿದರು.
ಕಾಂಗ್ರೆಸ್ ಪಕ್ಷವು ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ್ದ ಮಹಿಳೆಯರಿಗೆ ಉಚಿತ ಪ್ರಯಾಣ ಭರವಸೆಯನ್ನು ಶಕ್ತಿ ಯೋಜನೆಯ ಮೂಲಕ ರಾಜ್ಯದೆಲ್ಲೆಡೆ ಏಕಕಾಲಕ್ಕೆ ಚಾಲನೆ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯರೇ, ಗುಬ್ಬಿ ತಾಲೂಕಿನ ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣದಲ್ಲಿ ಸ್ವತಃ ತಾವೇ ಚಾಲಕರಾಗಿ ಡ್ರೈವಿಂಗ್ ಮಾಡುವ ಮೂಲಕ ಶಕ್ತಿ ಯೋಜನೆಗೆ ಶಾಸಕ ಎಸ್ ಆರ್ ಶ್ರೀನಿವಾಸ್ ನೀಡಿದರೆ, ಕಂಟ್ಕಾಟರ್ ಆಗಿ ಪ್ರಯಾಣಿಕರಿಗೆ ತಹಶೀಲ್ದಾರ್ ಬಿ ಆರತಿ ಅವರು ತಾವೇ ಸ್ವತಃ ಉಚಿತ ನಮೂನೆವುಳ್ಳ ಬಸ್ ಟಿಕೆಟ್ ನೀಡಿ ಗಮನ ಸೆಳೆದಿದ್ದು ಮತ್ತೊಂದು ವಿಶೇಷ.ನುಡಿದಂತೆ ನಡೆದ ಮುಖ್ಯಮಂತ್ರಿ ಯಾರಾದರೂ ಇದ್ದರೆ ಅದು ಸಿದ್ದರಾಮಯ್ಯ ಅವರು ಕಳೆದ ಬಾರಿಯ ಸರ್ಕಾರದ 165 ಯೋಜನೆಗಳನ್ನು ನೀಡಿದ್ದ ಭರವಸೆಯಂತೆ ಪೂರ್ಣವಾಗಿ ಈಡೇರಿಸಿದ್ದರೆ, ಈ ಬಾರಿಯ ಸರ್ಕಾರದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಕಾಂಗ್ರೆಸ್ ಪಕ್ಷವು ನೀಡಿದ್ದ ಐದು ಗ್ಯಾರಂಟಿ ಕಾರ್ಡ್ ನಲ್ಲಿ ನೀಡಿರುವ ಭರವಸೆಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಭರವಸೆಯನ್ನು ನೀಡಿದ್ದರು. ಅದನ್ನು ಅನುಷ್ಠಾನಕ್ಕೆ ತರುವ ನಿಟ್ಟಿನಲ್ಲಿ ಹಲವು ಕಸರತ್ತು ಮಾಡಿದ ಬಳಿಕ ಇಂದು ಅಧಿಕೃತವಾಗಿ ಚಾಲನೆ ನೀಡಿದ್ದು ಇದರಿಂದ ಹಿಂದುಳಿದ ವರ್ಗ ಹಾಗೂ ಬಡ ಮಹಿಳೆಯರಿಗೆ ಆದ್ಯತೆ ನೀಡಿದೆ. ಆದರೆ ವಿರೋಧ ಪಕ್ಷದ ನಾಯಕರು ಕಾಂಗ್ರೆಸ್ ಪಕ್ಷದ ಗ್ಯಾರೆಂಟಿ ಕಾರ್ಡ್ ಬಗ್ಗೆ ಮಾತನಾಡುವ ಮೊದಲು ಅನುಷ್ಠಾನಕ್ಕೆ ಬೇಕಾದ ವ್ಯವಸ್ಥೆ ಮಾಡಿಕೊಳ್ಳಲು ಸಮಯ ಬೇಕಿರುವ ಬಗ್ಗೆ ಅರಿವು ಇಲ್ಲದ ರೀತಿಯಲ್ಲಿ ರಾಜಕೀಯ ಮಾಡಲು ಹೊರಟಿದ್ದು, ಚುನಾವಣಾ ಸಮಯದಲ್ಲಿ ರಾಜಕೀಯ ಮಾಡಲಿ ಅದಕ್ಕೆ ತಕರಾರು ಇಲ್ಲ. ಜನತೆಗೆ ದಾರಿ ತಪ್ಪಿಸುವ ನಿಟ್ಟಿನಲ್ಲಿ ಬಾಯಿಗೆ ಬಂದಂತೆ ಮಾತನಾಡುತ್ತಾ ಇರುವುದು ಸರಿಯಲ್ಲ ಎಂದು ಶಾಸಕ ಎಸ್ ಆರ್ ಶ್ರೀನಿವಾಸ್ ತಿಳಿಸಿದರು.
ಸರ್ಕಾರವು ಇತ್ತೀಚಿನ ದಿನಗಳಲ್ಲಿ ಮಹಿಳಾ ಸಬಲೀಕರಣಕ್ಕಾಗಿ ಹಲವು ರೀತಿಯಲ್ಲಿ ಯೋಜನೆಗಳನ್ನು ಅನುಷ್ಠಾನಕ್ಕೆ ತಂದು ಸಮಾಜದಲ್ಲಿ ಸಬಲೆಯಾಗುವ ನಿಟ್ಟಿನಲ್ಲಿ ಮುಂದಾಗಿದ್ದು, ಈ ಯೋಜನೆಗಳನ್ನು ಸಕಾರಾತ್ಮಕವಾಗಿ ತೆಗೆದುಕೊಂಡು ಕುಟುಂಬದ ಆರ್ಥಿಕತೆ ಚೇತರಿಕೆಗೆ ಸಹಕಾರಿಯಾಗಲಿದೆ. ಹಾಗಾಗಿ ಎಲ್ಲಾ ಮಹಿಳೆಯರು ಸರ್ಕಾರ ನೀಡುವ ಎಲ್ಲಾ ಯೋಜನೆಗಳನ್ನು ಸದುಪಯೋಗಕೊಳ್ಳುವ ಮೂಲಕ ಸಹಕಾರಿಯಾಗುವಂತೆ ಮಹಿಳೆಯರಲ್ಲಿ ತಹಶೀಲ್ದಾರ್ ಬಿ ಆರತಿ ಅವರು ಮನವಿ ಮಾಡಿದರು.
ಸಮಾಜವು ಉದ್ದರವಾಗಬೇಕಾದರೆ ಮಹಿಳೆಯರು ಸಬಲೀಕರಣವಾದಾಗ ಮಾತ್ರ ಸಾಧ್ಯ ಎಂಬುದನ್ನು ಅರಿತು ಸರ್ಕಾರವು ಮಹಿಳೆಯರಿಗೆ ವಿಶೇಷ ಯೋಜನೆಗಳು ಜಾರಿಗೆ ತರುತ್ತಿದೆ.
ಒಂದು ಗಂಟೆಯ ಬಳಿಕ ತಹಶೀಲ್ದಾರ್ ಬಿ ಆರತಿ ಅವರೇ ಸ್ವತಃ ಗುಬ್ಬಿಯಿಂದ ತುಮಕೂರಿಗೆ ತೆರಳುವ ಪ್ರಯಾಣಿಕರಿಗೆ ಸ್ವತಃ ಕಂಟಾಕ್ಟರ್ ಆಗಿ ಟಿಕೆಟ್ ಯಂತ್ರ ಹಿಡಿದು ಉಚಿತ ಪ್ರಯಾಣ ಟಿಕೆಟ್ ನೀಡಿ ಶುಭ ಕೋರಿದರು.
ಈ ಕಾರ್ಯಕ್ರಮದಲ್ಲಿ ಪ. ಪಂ ಸದಸ್ಯರಾದ ಮೋಹನ್ ಕುಮಾರ್, ರೇಣುಕಾ ಪ್ರಸಾದ್, ಮಂಗಳಮ್ಮ, ಶೌಕತ್ ಆಲಿ, ಮಾಜಿ ಜಿ.ಪಂ ಸದಸ್ಯ ಜಗನ್ನಾಥ್, ಕೆ ಎಸ್ ಆರ್ ಟಿ ಸಿ ಡಿ.ಟಿ.ಓ ಗಜೇಂದ್ರ ಕುಮಾರ್ ಉಪಸ್ಥಿತರಿದ್ದರು.