ಚಿಕ್ಕನಾಯಕನಹಳ್ಳಿ : ಕೆ.ಎಸ್ ಆರ್ ಟಿ ಸಿ ಬಸ್ ಗೆ ಕಾದು ಕುಳಿತಿದ್ದ ಮಹಿಳಾ ಪ್ರಯಾಣಿಕರಿಗೆ ಸಿಹಿ ಹಾಗೂ ಗುಲಾಬಿ ಹೂವು ನೀಡುವ ಮೂಲಕ, ಬಸ್ ಒಳಗೆ ಟಿಕೇಟ್ ವಿತರಿಸಿ ಶಕ್ತಿ ಯೋಜನೆಗೆ ಚಾಲನೆ ನೀಡಿದ ಶಾಸಕ, ಸಿ. ಬಿ.ಸುರೇಶ್ ಬಾಬು ಹಾಗೂ ತಹಶೀಲ್ದಾರ್ ಅರ್ಚನಾ ಭಟ್.
ಪಟ್ಟಣದ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ಆಯೋಜಿಸಿದ ಶಕ್ತಿಯೋಜನೆ ಕಾರ್ಯಕ್ರಮದಲ್ಲಿ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು ಕಾಂಗ್ರೇಸ್ ಪ್ರಣಾಳಿಕೆಯಂತೆ ಹೊಸ ಸರ್ಕಾರ, ಹೊಸ ಪ್ರಯೋಗ ದ ಮೂಲಕ ರಾಜ್ಯದಾದ್ಯಂತ ಮಹಿಳೆಯರು ಉಚಿತವಾಗಿ ಪ್ರಯಾಣಿಸಲು ಶಕ್ತಿ ಯೋಜನೆ ಜಾರಿಗೊಳಿಸಿದ್ದು ಚಿಕ್ಕನಾಯಕನಹಳ್ಳಿ ಕ್ಷೇತ್ರದ ಶಾಸಕನಾಗಿ ಸರ್ಕಾರದ ಅಂಗವಾಗಿ ಈ ಯೋಜನೆಯ ತುಂಬು ಮನಸ್ಸಿನಿಂದ ಚಾಲನೆ ನೀಡುತ್ತಿದ್ದು ಮಹಿಳೆಯರು ಯೋಜನೆಯನ್ನ ಒಳ್ಳೆಯದಕ್ಕೆ. ಬಳಸಿಕೊಂಡು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.
ಆರೋಗ್ಯ ಸಮಸ್ಯೆ, ಸರ್ಕಾರಿ ಕಚೇರಿಗೆ,ಕೆಲ ಬಡವರಿಗೆ ಆರ್ಥಿಕ ಪರಿಸ್ಥಿತಿ ಕೊರತೆ ಯಿಂದ ಪ್ರಯಾಣ ಮಾಡೋದಕ್ಕೆ ಆಗದೆ. ಇರುವರುವರಿಗೆ ಒಳ್ಳೆಯ ಯೋಜನೆ ಇದಾಗಿದೆ.ಮಹಿಳೆಯರಿಗೆ ಎಲ್ಲರಂಗದಲ್ಲೂ ಮೀಸಲಾತಿ ಇದೆ ಆದರೂ ಮಹಿಳೆಯರ ಸಬಲೀಕರಣಕ್ಕಾಗಿ ಹೆಚ್ಚು ಆದ್ಯತೆ ನೀಡುತ್ತಿರುವುದು ತುಂಬಾ ಸಂತೋಷ.ರಾಜ್ಯದಲ್ಲಿ ಸ್ತ್ರೀ ಶಕ್ತಿ ಸಂಘ ಸ್ಥಾಪನೆ ಮಾಡಿದ ಶ್ರೀಮತಿ ಮೋಟಮ್ಮ ನವರ ಯೋಜನೆ ರಾಜ್ಯದ ಮಹಿಳೆಯರ ಪಾಲಿಗೆ ಉತ್ತಮ ಯೋಜನೆಯಾಗಿದೆ.
ಕೆಎಸ್ಆರ್ಟಿಸಿ ಡಿಪೋ ನಿರ್ಮಾಣ ಹಂತದಲ್ಲಿದ್ದು ಶೀಘ್ರದಲ್ಲಿ ಉತ್ತಮ ಸೌಲಭ್ಯವುಳ್ಳ ಡಿಪೋ ನಿರ್ಮಾಣ ಮಾಡಿ ತಾಲೂಕಿನ ಎಲ್ಲಾ ಹಳ್ಳಿಗಳಲ್ಲಿಯೂ ಬಸ್ ಸಂಪರ್ಕ ವ್ಯವಸ್ಥೆ ಕಲ್ಪಿಸಿಕೊಡಲಾಗುವುದು ಎಂದರು.
ತಹಶೀಲ್ದಾರ್ ಅರ್ಚನಾ ಭಟ್ ಮಾತನಾಡಿ ಮಹಿಳಾ ಸಬಲೀಕರಣದಲ್ಲಿ ಇದೊಂದು ದೊಡ್ಡ ಮೈಲುಗಲ್ಲು ಯೋಜನೆಯಾಗಿದೆ.
ಗ್ರಾಮೀಣ ಭಾಗದಲ್ಲಿ ಮಹಿಳೆಯರು ಪ್ರಯಾಣ ಬೆಳೆಸಲು ಹೆಚ್ಚು ಗಂಡಸರನ್ನು ಅವಲಂಬಿತರಾಗಿದ್ದರು, ಆದರೆ ಈ ಯೋಜನೆಯಿಂದ ಸ್ವತಂತ್ರದಿಂದ ಯೋಚನೆ ಮಾಡಿ ಒಳ್ಳೆಯ ಉದ್ದೇಶಕ್ಕೆ ಪ್ರಯಾಣ ಮಾಡಲು ತುಂಬಾ ಅನುಕೂಲಕರ, ಮಹಿಳಾ ಸಿಬ್ಬಂದಿಗಳಿಗೆ ಮಹಿಳಾ ವಿದ್ಯಾರ್ಥಿಗಳಿಗೆ ಉಚಿತ ಪ್ರಯಾಣ ಅವಕಾಶ ಸಿಕ್ಕಿರುವುದು ಈ ದೇಶದ ಪ್ರಗತಿಗೆ ಸಾಧ್ಯ ಎಂದರು.
ತುರುವೇಕೆರೆ ಕೆಎಸ್ಆರ್ಟಿಸಿ ವಿಭಾಗದ ಡಿಪೋ ಅಧಿಕಾರಿ ತಮ್ಮಯ್ಯಣ್ಣ ಮಾತನಾಡಿ ಈಗಾಗಲೇ 250ಕ್ಕೂ ಹೆಚ್ಚು ಸುತ್ತುಗಳ ಸಾರ್ವಜನಿಕರ ಪ್ರಯಾಣಕ್ಕೆ ಬಸ್ ನಿಲ್ಲಿಸಲಿಟ್ಟಿದ್ದು ಅದರಲ್ಲಿ ಸ್ವತಂತ್ರ ಯೋಧರಿಗೆ ವಿದ್ಯಾರ್ಥಿಗಳಿಗೆ ಅಂಗವಿಕಲರಿಗೆ ಈಗಾಗಲೇ 25 ಪರ್ಸೆಂಟ್ ನಾಗರಿಕ ಸೇವೆ ನೀಡುತ್ತಿದ್ದು ಈಗಿನ ಸರ್ಕಾರದ ನೂತನ ಯೋಜನೆ ಶಕ್ತಿ ಯೋಜನೆಯಲ್ಲಿ ಆರರಿಂದ ಹನ್ನೆರಡು ಮೇಲ್ಪಟ್ಟು ವಿಶೇಷ ವಾಹನ ಬಿಟ್ಟು ಇನ್ನುಳಿದ ಬಸ್ನಲ್ಲಿ ರಾಜ್ಯಾದ್ಯಂತ ಉಚಿತ ಪ್ರಯಾಣ ಕಲ್ಪಿಸಿದ್ದು ಸಾರ್ವಜನಿಕರು ಸದ್ಬಳಿಕೆ ಮಾಡಿಕೊಳ್ಳಬೇಕು.
ಚಿಕ್ಕನಾಯಕನಹಳ್ಳಿ ಬಸ್ ನಿಲ್ದಾಣದ ಟಿಸಿ ಜಬಿ ಉಲ್ಲಾ ಮಾತನಾಡಿ ಸರ್ಕಾರ ಶಕ್ತಿ ಯೋಜನೆ ಅಡಿ ಮಹಿಳೆಯರಿಗೆ ಉಚಿತ ಪ್ರಯಾಣ ಸೌಲಭ್ಯ ಕಲ್ಪಿಸಿದ್ದು ಮಹಿಳೆಯರು ಕಡ್ಡಾಯವಾಗಿ ಯಾವುದಾದರೂ ಒಂದು ಗುರುತಿನ ಚೀಟಿಯನ್ನು ಇಟ್ಟುಕೊಂಡು ಉಚಿತ ಪ್ರಯಾಣ ಮಾಡಿಕೊಳ್ಳಿ ಗುರುತಿನ ಚೀಟಿ ಇಲ್ಲದೆ ಚಾಲಕ ಹಾಗೂ ನಿರ್ವಾಹಕರ ನಡುವೆ ಜಗಳಕ್ಕೆ ಅವಕಾಶ ಮಾಡಿಕೊಡ ಭೇಡಿ.
ಪ್ರಯಾಣ ಪ್ರಯಾಣಿಕೆ. ಮಂಜುಳಾ ಮಾತನಾಡಿ ಆರ್ಥಿಕ ತೊಂದರೆಯಿಂದ ಪರಿತಪಿಸುತ್ತಿದ್ದ ಬಡ ಮಧ್ಯಮ ವರ್ಗದವರಿಗೆ ಉದ್ಯೋಗಕ್ಕೆ ಹೋಗಲು ತುಂಬಾ ಅನುಕೂಲ ಮಾಡಿರುವ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರಕ್ಕೆ ತುಂಬಾ ಧನ್ಯವಾದಗಳು.
ಈ ವೇಳೆ ಕೆಎಸ್ಆರ್ಟಿಸಿ ಎಇಇ ತ್ರಿವೇಣಿ, ಸರ್ಕಲ್ ಇನ್ಸ್ಪೆಕ್ಟರ್ ನಿರ್ಮಲ, ಮುಖಂಡ ರಾಮಚಂದ್ರಯ್ಯ ಹಾಗೂ ಸಾರ್ವಜನಿಕರು ಸಿಬ್ಬಂದಿ ವರ್ಗದವರು ಹಾಜರಿದ್ದರು.
ವರದಿ ಚಿಕ್ಕನಾಯಕನಹಳ್ಳಿ ಚಂದ್ರು