ಚಿಕ್ಕನಾಯಕನಹಳ್ಳಿ : ಯೋಗಕ್ಷೇಮ ಮುಖ್ಯವೇ ಹೊರತು ಆಡಂಬರದ ಕಾರ್ಯಕ್ರಮ ಅಲ್ಲ, ಕುಡಿತ ಬಿಟ್ಟು ಉತ್ತಮ ಜೀವನ ನಡೆಸುವಂತಾಗಬೇಕು " ಎಂದು ಬೆಂಗಳೂರು ಪ್ರಾದೇಶಿಕ ಕಚೇರಿಯ ಜನಜಾಗೃತಿ ವಿಭಾಗದ ಯೋಜನಾಧಿಕಾರಿ ಶ್ರೀ ತಿಮ್ಮಯ್ಯ ನಾಯ್ಕ್ ಹೇಳಿದರು.
ಪಟ್ಟಣದ ಶ್ರೀ ಅಕ್ಕಮಹಾದೇವಿ ಸಮುದಾಯ ಭವನದಲ್ಲಿ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಜಿಲ್ಲಾ ಪದಾಧಿಕಾರಿಗಳ ಸಭೆಯನ್ನ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಅಖಿಲ ಕರ್ನಾಟಕ ಜನ ಜಾಗೃತಿ ವೇದಿಕೆಯ ತುಮಕೂರು 02 ಜಿಲ್ಲೆಯ ಸಭೆಯಲ್ಲಿ ಮಾತಾನಾಡಿ ಬೆಂಗಳೂರು ಪ್ರಾದೇಶಿಕ ಕಚೇರಿಯ ಜನಜಾಗೃತಿ ವಿಭಾಗದ ಯೋಜನಾಧಿಕಾರಿ ಶ್ರೀ ತಿಮ್ಮಯ್ಯ ನಾಯ್ಕ್ ರವರು ಮಾತನಾಡಿ " ಈ ವರ್ಷದ ಮಧ್ಯವರ್ಜನ ಶಿಬಿರವು ಕಡಿಮೆ ವೆಚ್ಚದಲ್ಲಿ ಆಗಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಜನಜಾಗೃತಿ ವೇದಿಕೆಯ ಅಧ್ಯಕ್ಷರಾದ ಶ್ರೀ ಎಸ್ ಕೆ ರಾಮಚಂದ್ರ ಗುಪ್ತ ರವರು ವಹಿಸಿದ್ದರು.
ಈ ಸಭೆಯನ್ನು ಚಿಕ್ಕನಾಯಕಹಳ್ಳಿ ತಾಲೂಕಿನ ಸದಸ್ಯರಾದ ಶ್ರೀ ಪ್ರಕಾಶ್ ರವರು ದೀಪ ಬೆಳಗಿಸಿ ಉದ್ಘಾಟಿಸಿದರು.
ಜಿಲ್ಲಾ ನಿರ್ದೇಶಕರಾದ ಶ್ರೀ ದಿನೇಶ್ ಡಿ ಅವರು ಈ ವರ್ಷದ ಕ್ರಿಯ ಯೋಜನೆ ಬಗ್ಗೆ ಮಾಹಿತಿ ನೀಡಿದರು. "2023-24 ನೇ ಸಾಲಿನಲ್ಲಿ ನಮ್ಮ ಜಿಲ್ಲೆಯಲ್ಲಿ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಜಾಗೃತಿ ಕಾರ್ಯಕ್ರಮ 08, ತಂಬಾಕು ವಿರೋಧಿ ದಿನಾಚರಣೆ 05, ಮಾದಕ ವಸ್ತುಗಳ ವಿರೋಧಿ ದಿನಾಚರಣೆ 05, ಸಮುದಾಯ ಮಧ್ಯವರ್ಜನ ಶಿಬಿರ 04, ನವಜೀವನ ಸಮಾವೇಶ 05, ಗಾಂಧಿ ಜಯಂತಿ ಕಾರ್ಯಕ್ರಮ 05, ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ 18, ಮಕ್ಕಳ ವಿಶೇಷ ಕುಣಿತ ಭಜನಾ ತರಬೇತಿ ಕಮ್ಮಟ ವನ್ನು ಮಾಡುವುದೆಂದು ತೀರ್ಮಾನಿಸಲಾಗಿದೆ."ಎಂದರು.
ಈ ಸಭೆಯಲ್ಲಿ ಜಿಲ್ಲಾ ಜನಜಾಗೃತಿ ವೇದಿಕೆಯ ಸದಸ್ಯರಾದ ಶ್ರೀ ಎಂ. ಬಿ. ನಾಗರಾಜ್, ಶ್ರೀಮತಿ ಜಯಪ್ರಭಾ, ಶ್ರೀ ದೇವರಾಜ್, ಶ್ರೀ ನಾಗರಾಜ್, ಶ್ರೀ ಸೋಮಶೇಖರ್, ರಾಜಗೋಪಾಲ್, ಶ್ರೀ ಸಣ್ಣ ನಾಗಪ್ಪ, ಶ್ರೀಮತಿ ರತ್ನಮ್ಮ, ಶ್ರೀ ಸಂಜೀವ ಗೌಡ, ಶ್ರೀ ಲಿಂಗ ರೆಡ್ಡಿ, ಶ್ರೀ ಮಂಜುನಾಥ, ಶ್ರೀ ಜಗದೀಶ್, ಶ್ರೀ ಪ್ರದೀಪ್ ಕುಮಾರ್, ಶ್ರೀಮತಿ ಮಮತಾ ಯೋಜನಾಧಿಕಾರಿಗಳಾದ ಶ್ರೀ ಮಹೇಶ್, ಶ್ರೀ ಬಾಲಕೃಷ್ಣ ಶ್ರೀ ದಿನೇಶ್ ಕುಮಾರ್ ಅವರು ಭಾಗವಹಿಸಿದ್ದರು.