ಗುಬ್ಬಿ : ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಗೆ ಬಾಡೇನಹಳ್ಳಿ ಗ್ರಾಮದ ಬಹಳಷ್ಟು ಮನೆಯ ಎಲೆಕ್ಟ್ರಾನಿಕ್ ವಸ್ತುಗಳು ಸಂಪೂರ್ಣ ಭಸ್ಮ ಹಾಗೂ ಕೆಲ ಮನೆಗಳಿಗೆ ಹಾನಿ.
ತಾಲೂಕಿನ ಕಡಬ ಹೋಬಳಿಯ ಬಾಡೇನಹಳ್ಳಿ ಗ್ರಾಮದಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದ ಇಡೀ ಗ್ರಾಮದ ಎಲೆಕ್ಟ್ರಾನಿಕ್ಸ್ ವಸ್ತುಗಳು ಸಂಪೂರ್ಣ ಭಸ್ಮವಾಗಿದ್ದು ಮನೆಗಳಿಗೂ ಬೆಂಕಿ ಆವರಿಸಿ ಬಹಳಷ್ಟು ನಷ್ಟವನ್ನು ತಂದಿಟ್ಟಿದೆ.
ಬಾಡೇನಹಳ್ಳಿ ಗ್ರಾಮದ ಲೋಕೇಶ್ ಎಂಬವವರಿಗೆ ಮನೆ ಸುಟ್ಟು ಕರಕಲಾಗಿದ್ದು ಸುಮಾರು 35 ಲಕ್ಷಕ್ಕೂ ಹೆಚ್ಚು ಬೆಲೆಬಾಳುವ ವಸ್ತುಗಳು ಸಂಪೂರ್ಣ ಸುಟ್ಟು ಕರಕಲಾಗಿವೆ
ವೀಡಿಯೋಗ್ರಾಫರ್ ಆಗಿ ಕೆಲಸ ಮಾಡುತ್ತಿರುವ ಲೋಕೇಶ್ ಅವರ ಮನೆಯಲ್ಲಿ ದೊಡ್ಡ ದೊಡ್ಡ ಕ್ಯಾಮರಗಳು, ಒಡವೆ ಸೇರಿದಂತೆ ಬಹಳಷ್ಟು ವಸ್ತುಗಳು ಸುಟ್ಟು ಕರಕಲಾಗಿದೆ ಕೆಇಬಿ ಅಧಿಕಾರಿಗಳ ನಿರ್ಲಕ್ಷದಿಂದಾಗಿ ಈ ಘಟನೆ ನಡೆದಿದ್ದು ಇದುವರೆಗೂ ಯಾವುದೇ ಅಧಿಕಾರಿಗಳು ಸಹ ಭೇಟಿ ನೀಡಿಲ್ಲ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಸೂಕ್ತ ಪರಿಹಾರ ನೀಡಬೇಕು ಇಲ್ಲವಾದಲ್ಲಿ ಉಗ್ರ ಹೋರಾಟ ಮಾಡುವ ಎಚ್ಚರಿಕೆಯನ್ನು ಗ್ರಾಮಸ್ಥರು ನೀಡಿದರು.