ಸಮಯಕ್ಕೆ ಸರಿಯಾಗಿ ಬಾರದ ವೈದ್ಯರು: ಚಿಕಿತ್ಸೆಗೆ ಬಂದ ರೋಗಿಗಳ ಪರದಾಟ

 *ಸಮಯಕ್ಕೆ ಸರಿಯಾಗಿ ಬಾರದ ವೈದ್ಯರು: ಚಿಕಿತ್ಸೆಗೆ ಬಂದ ರೋಗಿಗಳ ಪರದಾಟ.* 


ಹನ್ನೊಂದು ಗಂಟೆಗೆ ಕೆಲಸಕ್ಕೆ ಹಾಜರಾದ ವೈದ್ಯರನ್ನು ಸಾರ್ವಜನಿಕ ಪ್ರಶ್ನೆ ಗಳು ಸುರಿಮಳೆ ಮೌನ ವಹಿಸಿ ವೈದ್ಯರು ಸಾಮಾಜಿಕ ಜಾಲಗಳಲ್ಲಿ ವೈರಲ್ ಅಯಿತು ಆಸ್ಪತ್ರೆ ಚಿತ್ರಣ.

 *ಚುನಾವಣೆ ಮುಗಿದು ತಿಂಗಳು ಕಳೆದರು ಚುರುಕು ಗೋಳ್ಳದ ಅಡಳಿತ.....?* 


ಶಿರಾ ತಾಲ್ಲೂಕಿನ ಕಳ್ಳಂಬೆಳ್ಳ ಹೋಬಳಿ ತರೂರು ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ವೈದ್ಯರು ನಿಯಮಿತವಾಗಿ ಬಾರದೆ ಇರುವುದರಿಂದ ಗ್ರಾಮಸ್ಥರು ಪರದಾಡುವಂತಾಗಿದೆ.

ಡಾ.ಕೇಶವ್ ಅವರನ್ನು ಕಳೆದ ಹಲವು ದಿನಗಳ ಹಿಂದೆ ಇಲ್ಲಿಗೆ ನಿಯೋಜನೆ ಮಾಡಲಾಗಿದೆ. ಆದರೆ ಅವರು ಮಧ್ಯಾಹ್ನ 11ರ ಬಳಿಕ ಬರುತ್ತಾರೆ. ರೋಗಿಗಳು ಕಾಯಬೇಕಾದ ಪರಿಸ್ಥಿತಿ ಇದೆ. ಸುತ್ತಮುತ್ತಲಿನ ಗ್ರಾಮಗಳಲ್ಲಿ ಜ್ವರ ಕಾಣಿಸಿಕೊಂಡಿದ್ದು, ಚಿಕಿತ್ಸೆಗಾಗಿ ಇದೇ ಆರೋಗ್ಯ ಕೇಂದ್ರವನ್ನು ಅವಲಂಬಿಸಿದ್ದಾರೆ.


‘ಖಾಸಗಿ ಕ್ಲಿನಿಕ್‌ಗಳಿಗೆ ಹೋಗಿ ಚಿಕಿತ್ಸೆ ಪಡೆಯುವ ಸಾಮರ್ಥ್ಯ ನಮಗೆ ಇಲ್ಲ. ಸರ್ಕಾರಿ ವೈದ್ಯರು ಹೀಗೆ ಮಾಡಿದರೆ ನಮ್ಮ ಗತಿ ಏನು?’ ಎಂದು ತರೂರು ಸುತ್ತಮುತ್ತಲಿನ ಗ್ರಾಮಸ್ಥರ ಪರಡಾಟ 11ಗಂಟೆಗೆ ಬಂದ ವೈದ್ಯರನ್ನು ಸಾರ್ವಜನಿಕರು ಪ್ರಶ್ನಿಸಿದಾಗ ಮೌನವಹಿಸಿದ ವೈದ್ಯ ಸಮಯಕ್ಕೆ ಬರದಿದ್ದರೆ ವೈದ್ಯರ ವಿರುದ್ಧ ಕ್ರಮ ಕೈಗೊಳ್ಳಲು ಸಾರ್ವಜನಿಕರ ಅಗ್ರಹವಾಗಿದೆ...


ವರದಿ ಶಿರಾ ಶ್ರೀಮಂತ್.

ಕಾಮೆಂಟ್‌‌ ಪೋಸ್ಟ್‌ ಮಾಡಿ

Please Select Embedded Mode To Show The Comment System.*

ನವೀನ ಹಳೆಯದು