ಹಂದನಕೆರೆ ವಿದ್ಯುತ್ ಉಪಸ್ಥಾವರದ ವ್ಯಾಪ್ತಿಯಲ್ಲಿ ವಿದ್ಯುತ್ ವ್ಯತ್ಯಯ.

 ಚಿಕ್ಕನಾಯಕನಹಳ್ಳಿ : ಬೈಲಪ್ಪನಮಠದ ಸಮೀಪ ವಿರುವ 110 ಕೆ.ವಿ. ವಿದ್ಯುತ್ ಪ್ರಸರಣಾ ಮಾರ್ಗದಿಂದ 110/11 ಕೆ.ವಿ.ಹಂದನಕೆರೆ ವಿದ್ಯುತ್ ಉಪಸ್ಥಾವರಕ್ಕೆ ಎರಡನೇ ರ್ಸ್ಕೂಟ್ 110 ಕೆ.ವಿ ಮಾರ್ಗವನ್ನು ಎಳೆಯುವ ಕಾಮಗಾರಿ ನಡೆಯುವುದರಿಂದ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂನ ಎ.ಇ.ಇ. ರಾಜಶೇಖರ್ ತಿಳಿಸಿದ್ದಾರೆ.


ಪತ್ರಿಕಾ ಪ್ರಕಟಣೆಯಲ್ಲಿ ದಿನಾಂಕ ----5-6-23, 7-6-23, 9-6-23, 12-6-23, 14-6-23, 16-6-23, 19-6-23 ಹಾಗೂ 21-6-2023ರಂದು ಬೃಹತ್ ಲೈನ್ ಕಾಮಗಾರಿಯನ್ನು ತುಮಕೂರಿನ ಕೆ.ಪಿ.ಟಿ.ಸಿ.ಎಲ್ ವಿಭಾಗದವರು ಕೆಲಸ ಹಮ್ಮಿಕೊಂಡಿರುವುದರಿ೦ದ ಈ ದಿನಾಂಕಗಳ೦ದು ಬೆಳಗ್ಗೆ9 ಗಂಟೆಯಿ೦ದ ಸಂಜೆ 6 ಗಂಟೆಗಳವರೆಗೆ ಹಂದನಕೆರೆ ವಿದ್ಯುತ್ ಉಪಸ್ಥಾವರದಿಂದ ಸರಬರಾಜಾಗುವ ಎಲ್ಲಾ 11 ಕೆವಿ ಪೂರಕಗಳಲ್ಲಿ ವಿದ್ಯುತ್ ಸರ¨ರಾಜು ಇರುವುದಿಲ್ಲ ಹಾಗೂ ಇದೇ ದಿನಗಳಂದು110/11 ಕೆವಿ ಹುಳಿಯಾರು ವಿದ್ಯುತ್ ಉಪಸ್ಥಾವರದಿಂದ ವಿದ್ಯುತ್‌ಸರಬರಾಜಾಗುವ ಎಲ್ಲಾ11 ಕೆವಿ ಪೂರಕಗಳಿಗೆ ಬೆಳಗ್ಗೆ ಸುಮಾರು 8 .30 ರಿಂದ 9.30 ವರೆಗೆ ಹಾಗೂ ಸಂಜೆ 5 ರಿಂದ6 ಗಂಟೆ ಸುಮಾರಿನಲ್ಲಿ ಒಂದುಗ೦ಟೆ ವಿದ್ಯುತ್‌ ವ್ಯತ್ಯಯವಾಗುತ್ತದೆ ಅದ್ದರಿಂದ ಸಾರ್ವಜನಿಕರು ಸಹಕರಿಸಬೇಕೆಂದು ತಿಳಿಸಿದ್ದಾರೆ.


ವರದಿ ಚಿಕ್ಕನಾಯಕನಹಳ್ಳಿ ಚಂದ್ರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

Please Select Embedded Mode To Show The Comment System.*

ನವೀನ ಹಳೆಯದು