ಚಿಕ್ಕನಾಯಕನಹಳ್ಳಿ : ಇಷ್ಟಾರ್ಥ ಸಿದ್ಧಿಗಾಗಿ ವಿಶೇಷ ಪೂಜೆ ಸಂಕಲ್ಪ ಮಾಡಿದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ .
ಕನಕಪುರ ಬಂಡೆ ಡಿಕೆಶಿಗೆ ಕಲ್ಪತರು ನಾಡಿನ ದೇವರ ಮೇಲೆ ಹೆಚ್ಚು ಭಕ್ತಿ ಭಾವ 20 ವರ್ಷಗಳಿಂದ ಕಾಡ ಸಿದ್ದೇಶ್ವರ ಮಠ ಅಜ್ಜಯ್ಯ, ಗಿರಿ ಸಿದ್ದೇಶ್ವರನಿಗೆ ಭಕ್ತ ಕೇಳಿದ ವರವನ್ನ ಕರುಣಿಸಿದ ಪರಮಾತ್ಮ ನಿಗೆ ಪೂಜೆ.
ನೂರಾರು ದೇವರುಗಳಿರುವ ಪುಣ್ಯಸ್ಥಳ ಹಂದನಕೆರೆ ಶ್ರೀ ಗಳಾದ ಗುರು ರುದ್ರಾರಾಧ್ಯ ಸ್ವಾಮಿಗಳ ಆಶೀರ್ವಾದ ಪಡೆದರು.
ಗ್ರಾಮಸ್ಥರು ಹಾಗೂ ಮಠದ ವತಿಯಿಂದ ಬಿನ್ನವತ್ತಳಿಕೆ ನೀಡಿ ಈ ಭಾಗದ ಅಭಿವೃದ್ಧಿಗೆ ಮನವಿ ಪಕ್ಷ ಬೇಧ ಮರೆತು ನಾಯಕನನ್ನ ಸ್ವಾಗತಿಸಿ, ಜೊತೆಯಾದ ಶಾಸಕ ಸಿ. ಬಿ. ಸುರೇಶ್ ಬಾಬು, ಎಂ ಟಿ ಕೃಷ್ಣಪ್ಪ ಉಪಮುಖ್ಯಮಂತ್ರಿಗೆ ಅದ್ದೂರಿ ಸ್ವಾಗತ ಕೋರಿದ ಚಿಕ್ಕನಾಯಕನಹಳ್ಳಿ ಜನತೆ. ಮಾಜಿ ಶಾಸಕ ಕೆ. ಎಸ್. ಕಿರಣ್ ಕುಮಾರ್, ಶಾಸಕ ಕೆ ಷಡಕ್ಷರಿ, ಶಾಸಕ ರಂಗನಾಥ್, ಮುಖಂಡ ಚಂದ್ರಶೇಖರ್ ಗೌಡ, ಹಾಗೂ ತಾಲ್ಲೂಕಿನ ಕಾಂಗ್ರೇಸ್ ಪಕ್ಷದ ಮುಖಂಡರ, ಕಾರ್ಯಕರ್ತರ ಸಾತ್.
ಪುರಾತನ ದೇವಸ್ಥಾನ ಹರಿಹರೇಶ್ವರ, ಹಾಗೂ ಐತಿಹ್ಯ ವುಳ್ಳ ಹನ್ನೆರಡು ಬಾಗಿಲು ಸೋಪಾನ ಬಾವಿ ಸ್ಥಳ ವೀಕ್ಷಿಸಿ ಕಂದಾಯ ಅಧಿಕಾರಿಗಳಾದ ತಹಶೀಲ್ದಾರ್ ಎಸಿ ರವರಿಗೆ ಜೀರ್ಣೋದ್ಧಾರಕ್ಕಾಗಿ ವರದಿ ನೀಡಲು. ಸೂಚನೆ.
ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ರವರನ್ನ ಹೆಲಿಪ್ಯಾಡ್ ನಿಂದ ತೆರೆದ ವಾಹನದಲ್ಲಿ ಪ್ರಮುಖ ರಾಜ ಬೀದಿಗಳಲ್ಲಿ ಮೆರೆವಣಿಗೆಯಲ್ಲಿ ಅವರನ್ನ ಪೂರ್ಣ ಕುಂಭ ಸ್ವಾಗತ, ವಾದ್ಯಗೋಷ್ಠಿಯೊಂದಿಗೆ ತೆರೆದ. ವಾಹನದಲ್ಲಿ. ಊರಿನ ಪ್ರಮುಖ ಬೀದಿಯಲ್ಲಿ ಮೆರವಣಿಗೆ ಮಾಡಿ ಕರೆತಂದು ಗ್ರಾಮದ ಪವಾಡ ದೈವ ಶ್ರೀ ಗುರು ಗಿರಿ ಸಿದ್ದೇಶ್ವರ ಸ್ವಾಮಿ ಮತ್ತು ಹರಿಹರೇಶ್ವರ ಸ್ವಾಮಿ, ದುರ್ಗಾ ದೇವಿ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿ ಇತಿಹಾಸ ಪ್ರಸಿದ್ದ ಹನ್ನೆರಡು ದಾರಿಗಳ ಸೋಪಾನ_ಬಾವಿ ವೀಕ್ಷಿಸಿ ಸಬ್ಬೇನಹಳ್ಳಿ 21 ಅಡಿ ಎತ್ತರದ ಶಂಕರೇಶ್ವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ನೂತನ ರಥ, ಹಾಗೂ ಮಂದಿರ ನಿರ್ಮಾಣದ ಶಂಕು ಸ್ಥಾಪನೆ ನೆರವೇರಿಸಿದರು.
ದೇವಾಲಯ ಟ್ರಸ್ಠ್ ವತಿಯಿಂದ ಹಮ್ಮಿಕೊಂಡಿದ್ದ ಸಭೆಯಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ಅವರು ಗ್ರೆಮನುಷ್ಯ ನಿಗೆ ನಂಬಿಕೆ ಬಹಳ ಮುಖ್ಯ ಹಿರಿಯರು ಹೇಳಿದ ಹಾಗೆ ಮನೆ ಕಾಪಾಡಿದ ಹಾಗೆ ಮಠವನ್ನ ಕಾಪಾಡ ಬೇಕು.
ನಾವು ಮಾಡುವ ಕೆಲಸ ಏನೆ ಇದ್ದರೂ ಇಬ್ಬರು ಅಂದರೆ ಪರಮಾತ್ಮ, ಮತ್ತು ಅಂತರಾತ್ಮ ಒಪ್ಪಿಕೊಳ್ಳಬೇಕು. ನಾನು ದೈವ ವನ್ನು ನಂಬಿದ್ದೇನೆ, ನನಗೆ ಶಕ್ತಿ ನೀಡಿರುವುದರಿಂದ ಈ ಭಾಗದ ಕೆಲಸಗಳನ್ನು ಆದ್ಯತೆ ಮೇರೆಗೆ ಕೈಗೊಳ್ಳಲಾಗುವುದು.
ಎಲ್ಲಾ ದೇವರಿಗಿಂತ ದೊಡ್ಡವನು ಶಂಬು, ಹರ ಹರ, ಶಂಕರ, ಮಹಾದೇವ, ಶಿವಪರಮೇಶ್ವರ ಇಲ್ಲಿಗೆ ಬೇರೆ ಬೇರೆ ನಾಯಕರು ದೈವನ ಕೃಪೆಗೆ ಪಾತ್ರರಾಗಿದ್ದಾರೆ. ನಾವು ಭೇಟಿ ನೀಡಿದ ಪುಣ್ಯ ಸ್ಥಳಗಳಲ್ಲಿ ಸಾಕ್ಷಿ ಗುಡ್ಡೆಗಳನ್ನು ಬಿಟ್ಟು ಹೋಗುವಂತಹ ರೀತಿಯಲ್ಲಿ ಕೆಲಸ ಕಾರ್ಯಗಳನ್ನು ಮಾಡಲು ದೈವ ಕೃಪೆಯಿಂದ ಆಗಲಿದೆ.
ನಮ್ಮ ಕಾಂಗ್ರೇಸ್ ಸರ್ಕಾರ ಅಧಿಕಾರಕ್ಕೆ ಬಂದಿದೆ ಬಡವರ ಪರ ಜನಪರ ಕಾರ್ಯಕ್ರಮಗಳನ್ನು ಗ್ಯಾರಂಟಿಯಾಗಿ ನೀಡಿದ್ದು ಅವುಗಳನ್ನ ಒಂದೊಂದಾಗಿ ಈಡೇರಿಸಲಿದ್ದೇವೆ. ಯಾರು ಮಧ್ಯವರ್ತಿ ಗಳಿಗೆ ಲಂಚ ನೀಡಬಾರದು. ಯೋಜನೆ ಗಳಿಗೆ ಕಾಲಮಿತಿ ಇಲ್ಲ .ನಿಧಾನವಾಗಿ ಆಪ್ ನಲ್ಲಿ ಅರ್ಜಿ ಸಲ್ಲಿಸಿ ಎಂದು ಉಪಮುಖ್ಯಮಂತ್ರಿ, ಡಿ.ಕೆ ಶಿವಕುಮಾರ್ ಸಾರ್ವಜನಿಕರಿಗೆ ಮನವಿ ಮಾಡಿದರು.
ನಂತರ ವಿಶೇಷ ಸಂಕಲ್ಪ ಪೂಜೆ ಸಲ್ಲಿಸಲು ಸಬ್ಬೆನಹಳ್ಳಿ ಪ್ರಕೃತಿಯಲ್ಲಿ ಕಾಲ್ನಡಿಗೆಯಲ್ಲಿ ಬೆಟ್ಟ ಹತ್ತಿ ಶ್ರೀ ಗುರು ಗಿರಿ ಸಿದ್ದೇಶ್ವರ. ಸ್ವಾಮಿ ದರ್ಶನ ಪಡೆದು ವಿಶೇಷ ಪೂಜೆಯಲ್ಲಿ ಭಾಗಿಯಾಗಿದ್ದರು.
ವರದಿ ಚಿಕ್ಕನಾಯಕನಹಳ್ಳಿ ಚಂದ್ರು