ಗುಬ್ಬಿ : ಐದನೇ ಬಾರಿಗೆ ಶಾಸಕರಾಗಿ ಆಯ್ಕೆಯಾದ ಎಸ್ ಆರ್ ಶ್ರೀನಿವಾಸ್ ಅವರಿಗೆ ಛಲವಾದಿ ಮಹಾಸಭಾದಿಂದ ಅಭಿನಂದನೆ ಕಾರ್ಯಕ್ರಮ.
ಪಟ್ಟಣದ ಛಲವಾದಿ ಮಹಾಸಭಾ ಕಚೇರಿಯಲ್ಲಿ ಛಲವಾದಿ ಮಹಾಸಭಾದ ವತಿಯಿಂದ ಐದನೇ ಬಾರಿಗೆ ಶಾಸಕರಾಗಿ ಆಯ್ಕೆಯಾದ ಎಸ್ ಆರ್ ಶ್ರೀನಿವಾಸ್ ಅವರಿಗೆ ಅಭಿನಂದನಾ ಕಾರ್ಯಕ್ರಮ ಆಯೋಜನೆ
ಮುಖಂಡರು ಯಾರು ನನ್ನ ಜೊತೆ ಇದ್ದು ಚುನಾವಣಾ ಪ್ರಚಾರ ಮಾಡಲಿಲ್ಲ, ಮತದಾರರು, ಕಾರ್ಯಕರ್ತರು, ಸಣ್ಣ ಸಣ್ಣ ಸಮಾಜದ ಬಂಧುಗಳು ಅವಿರತ ಶ್ರಮಪಟ್ಟ ಹಿನ್ನೆಲೆ ಐದನೇ ಬಾರಿಗೆ ಶಾಸಕರಾಗಿ ಆಯ್ಕೆಯಾಗಲು ಸಹಕಾರಿಯಾಗಿದೆ. ನನ್ನ ಜೊತೆ ಚುನಾವಣೆಯಲ್ಲಿ ಯಾವ ಮುಖಂಡರು ನನ್ನ ಪರ ಮತಯಾಚನೆ ಮಾಡುವುದಾಗಲಿ, ಪಕ್ಷದ ಮುಖಂಡರನ್ನು ಕರೆಸಿ ನನ್ನ ಪರ ಮತಯಾಚನೆಗೆ ಕರೆಸದೇ ಪ್ರತಿ ಮತದಾರರ ಮನೆಯ ಬಾಗಿಲಿಗೆ ತೆರಳಿ ಮತಯಾಚನೆ ಮಾಡಿದ ಪರಿಣಾಮ ಗೆಲುವಿಗೆ ಸಹಕಾರಿಯಾಗಿದೆ. ಹಣಕ್ಕೆ ಕಟುಬಿದ್ದು ಈ ಬಾರಿ ಹಣದ ಹೊಳೆ ಹರಿಯುವ ಕಡೆ ವಾಲಿದ್ದು ನೋಡಿ ಭಯದ ವಾತಾವರಣ ಕಂಡುಬಂತು, ಆದರೂ ದೃತಿ ಕೆಡದೇ ನಿಮ್ಮಂತಹ ಸಣ್ಣಪುಟ್ಟ ಕಾರ್ಯಕರ್ತರ ಅತಿ ಉತ್ಸಾಹವೂ ನನ್ನ ಗೆಲುವಿಗೆ ಕಾರಣವಾಗಿದೆ. ಮುಂದಿನ ದಿನಗಳಲ್ಲಿ ಸ್ಥಳೀಯ ಸಂಸ್ಥೆಗಳ ಹಾಗೂ ಎಂ.ಪಿ ಚುನಾವಣೆಯು ಬರಲಿದ್ದು, ಅಲ್ಲಿಯೂ ಸಹ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಿಕೊಂಡು ಪ್ರಧಾನಿ ನರೇಂದ್ರ ಮೋದಿ ಹಠಾವೋ ಮೂಲಕ ಬಿಜೆಪಿ ಪಕ್ಷದ ಸರ್ಕಾರವನ್ನು ಕಿತ್ತೆಸೆದು ಬಡವರಿಗೆ ಆಶಾ ಕಿರಣವಾಗಿರುವ ಕಾಂಗ್ರೆಸ್ ಪಕ್ಷವನ್ನೂ ಕೇಂದ್ರದಲ್ಲಿಯೂ ಸಹ ಸರ್ಕಾರವನ್ನು ತರುವ ಪ್ರಯತ್ನವನ್ನು ಮಾಡೋಣ ಎಂದು ಶಾಸಕ ಎಸ್ ಆರ್ ಶ್ರೀನಿವಾಸ್ ಮನವಿ ಮಾಡಿದರು.
ಐದನೇ ಬಾರಿಗೆ ಶಾಸಕರಾಗಿ ಆಯ್ಕೆಯಾದ ಎಸ್ ಆರ್ ಶ್ರೀನಿವಾಸ್ ಅವರನ್ನು ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ್ ಪ್ರತಿಮೆ ನೀಡುವ ಮುಖೇನ ಸನ್ಮಾನಿಸಿ ಅಭಿನಂದಿಸಲಾಯಿತು.
ಈ ಅಭಿನಂದನಾ ಕಾರ್ಯಕ್ರಮದಲ್ಲಿ ಛಲವಾದಿ ಮಹಾಸಭಾದ ಅಧ್ಯಕ್ಷ ಜಗನ್ನಾಥ್, ಉಪಾಧ್ಯಕ್ಷ ನಾಗರಾಜ್, ಕಾರ್ಯದರ್ಶಿ ಈರಣ್ಣ, ಪ.ಪಂ ಸದಸ್ಯರಾದ ಶ್ವೇತಾ ಜಗದೀಶ್, ಮಂಗಳಮ್ಮ, ರೇಣುಕಾ ಪ್ರಸಾದ್, ಮಾಜಿ ತಾ.ಪಂ.ಸದಸ್ಯ ಕರೆತಿಮ್ಮಯ್ಶಾ, ಮುಖಂಡರಾದ ರವೀಶ್, ಮಧು, ಮಂಜುನಾಥ್, ಹರೀಶ್, ಸವಿತಾ, ಸೇರಿದಂತೆ ಇತರರು ಉಪ್ಥಿತರಿದ್ದರು.