ಗುಬ್ಬಿ : ಪ್ರತಿ ವರ್ಷವೂ ಹಿಂದೂ ಪಂಚಾಂಗದ ಪ್ರಕಾರ ವೈಶಾಖ ಮಾಸದ ಶುಕ್ಲಪಕ್ಷದ ಚತುರ್ದಶಿಯ ದಿನದಂದು ಆಚರಿಸುವ ಜಯಂತಿ ನಾರಸಿಂಹ ಜಯಂತಿಯನ್ನು ಆಚರಿಸಲಾಯಿತು.
ಶ್ರೀ ವಿಷ್ಣುವು ತನ್ನ ಭಕ್ತ ಪ್ರಹ್ಲಾದನನ್ನು ತಂದೆ ಹಿರಣ್ಯಕಶ್ಯಪುವಿನಿಂದ ರಕ್ಷಿಸಲು ನರಸಿಂಹಸ್ವಾಮಿಯ ಅವತಾರದಲ್ಲಿ ಬಂದ ದಿನ, ಶ್ರೀ ನರಸಿಂಹ ಜಯಂತಿಯನ್ನು ವೈಷ್ಣವರಾದಿಯಾಗಿ ಎಲ್ಲರೂ ಆಚರಿಸುತ್ತಾ ಬರುದಿರುವುದು ರೂಡಿಯಲ್ಲಿದೆ.ನರಸಿಂಹ ಭಗವಾನ್ ವಿಷ್ಣುವಿನ ನಾಲ್ಕನೇ ಅವತಾರವೆಂದು ತಿಳಿದುಬಂದಿದೆ. ನರಸಿಂಹನು ತನ್ನ ಭಕ್ತ ಪ್ರಹ್ಲಾದನನ್ನು ರಕ್ಷಿಸಲು ಚತುರ್ದಶಿ ತಿಥಿಯಂದು ಕಾಣಿಸಿಕೊಂಡನು ಮತ್ತು ಈ ದಿನವನ್ನು ನರಸಿಂಹನ ಜನ್ಮ ವಾರ್ಷಿಕೋತ್ಸವದ ಸ್ಮರಣಾರ್ಥವಾಗಿ ಆಚರಿಸಲಾಗುತ್ತದೆ. ಈ ದಿನವು ದುಷ್ಟರ ಮೇಲಿನ ವಿಜಯವನ್ನು ಪ್ರತಿನಿಧಿಸುತ್ತದೆ. ನರಸಿಂಹನನ್ನು ಪೂಜಿಸುವ ಭಕ್ತರು ಜೀವನದಲ್ಲಿ ಯಾವುದೇ ಸವಾಲುಗಳನ್ನು ಎದುರಿಸುವುದಿಲ್ಲ ಮತ್ತು ಎಲ್ಲಾ ನಕಾರಾತ್ಮಕತೆ ಮತ್ತು ಅಡೆತಡೆಗಳನ್ನು ತೊಡೆದುಹಾಕುತ್ತಾರೆ ಎಂದು ನಂಬಲಾಗಿದೆ.
ನರಸಿಂಹ ಭಗವಾನ್ ವಿಷ್ಣುವಿನ ನಾಲ್ಕನೇ ಅವತಾರವೆಂದು ತಿಳಿದುಬಂದಿದೆ. ನರಸಿಂಹನು ತನ್ನ ಭಕ್ತ ಪ್ರಹ್ಲಾದನನ್ನು ರಕ್ಷಿಸಲು ಚತುರ್ದಶಿ ತಿಥಿಯಂದು ಕಾಣಿಸಿಕೊಂಡನು ಮತ್ತು ಈ ದಿನವನ್ನು ನರಸಿಂಹನ ಜನ್ಮ ವಾರ್ಷಿಕೋತ್ಸವದ ಸ್ಮರಣಾರ್ಥವಾಗಿ ಆಚರಿಸಲಾಗುತ್ತದೆ. ಈ ದಿನವು ದುಷ್ಟರ ಮೇಲಿನ ವಿಜಯವನ್ನು ಪ್ರತಿನಿಧಿಸುತ್ತದೆ. ನರಸಿಂಹನನ್ನು ಪೂಜಿಸುವ ಭಕ್ತರು ಜೀವನದಲ್ಲಿ ಯಾವುದೇ ಸವಾಲುಗಳನ್ನು ಎದುರಿಸುವುದಿಲ್ಲ ಮತ್ತು ಎಲ್ಲಾ ನಕಾರಾತ್ಮಕತೆ ಮತ್ತು ಅಡೆತಡೆಗಳನ್ನು ತೊಡೆದುಹಾಕುತ್ತಾರೆ ಎಂದು ನಂಬಲಾಗಿದೆ. ಭಗವಾನ್ ವಿಷ್ಣುವಿನ ಅತ್ಯುನ್ನತ ಭಕ್ತಿಯಿಂದಾಗಿ ಪ್ರಹ್ಲಾದನು ಸ್ವರ್ಗೀಯ ವಾಸಸ್ಥಾನವನ್ನು ಪಡೆದನು ಎಂದು ಹೇಳಲಾಗುತ್ತದೆ. ಈ ರೀತಿಯಲ್ಲಿ ವಿಷ್ಣುವಿನ ನರಸಿಂಹ ಅವತಾರವನ್ನು ಪೂಜಿಸುವವನು ಮಾನಸಿಕ ಮತ್ತು ದೈಹಿಕ ಶಕ್ತಿಯನ್ನು ಪಡೆಯುತ್ತಾನೆ. ಅದೇ ಸಮಯದಲ್ಲಿ, ದೇವರ ಈ ರೂಪವನ್ನು ಪೂಜಿಸುವುದರಿಂದ, ವ್ಯಕ್ತಿಯೊಳಗಿನ ಭಯವು ದೂರವಾಗುತ್ತದೆ. ಅಷ್ಟೇ ಅಲ್ಲ, ನರಸಿಂಹ ದೇವರನ್ನು ನಿಯಮಾನುಸಾರ ಪೂಜಿಸುವುದರಿಂದ ಜೀವನದಲ್ಲಿ ಬರುವ ಎಲ್ಲಾ ಅಡೆತಡೆಗಳು ದೂರವಾಗುತ್ತವೆ ಮತ್ತು ಜೀವನದಲ್ಲಿನ ಶತ್ರುಗಳು ದೂರಾಗುತ್ತಾರೆ ಎನ್ನುವ ನಂಬಿಕೆಯು ಭಕ್ತರಲ್ಲಿ ಹಿಂದಿನನಿಂದಲೂ ನಡೆದುಕೊಂಡು ಬಂದಿದೆ.
ದೇವಾಲಯಕ್ಕೆ ತೆರಳಿ ಸ್ವಾಮಿ ದರ್ಶನ ಪಡೆಯಲು ಸಾಧ್ಯವಾಗದೆ ಇದ್ದಲ್ಲಿ ಭಕ್ತರು ಮನೆಗಳಲ್ಲಿ ಲಕ್ಷ್ಮಿ ನರಸಿಂಹ ಸ್ವಾಮಿ ಅವರಿಗೆ ಪೂಜೆ ಸಲ್ಲಿಸುತ್ತಾ ಬಂದಿದ್ದು, ಕ್ರಮವಾಗಿ ಪೂಜೆ ಮಾನೈವೇದ್ಯಕ್ಕೆ ಸಾಮಾನ್ಯವಾಗಿ ಕೋಸಂಬರಿ ಪಾನಕ ಮಾಡುತ್ತಾ ಬಂದಿರುವ ವೈಷ್ಣವರು ಪುಳಿಯೋಗರೆ, ಮೊಸರನ್ನ ಮಾಡಿ ನೈವೇದ್ಯ ಅರ್ಪಿಸುತ್ತಾ ಬರುತ್ತಿದ್ದಾರೆ. ಶ್ರೀ ಲಕ್ಷ್ಮೀ ನರಸಿಂಹ ಪೂಜೆಯಿಂದ ನಾನಾ ಪುಣ್ಯಗಳಿಗೆ ಪಾತ್ರರಾಗುತ್ತೀವಿ ಎಂಬ ನಂಬಿಕೆ ಇದ್ದು, ನಾರಸಿಂಹ ಮಂತ್ರವನ್ನು ಭಕ್ತಿಯಿಂದ ಪಠಿಸಿ ಹಾಗೂ ದೇವರ ಕೃಪೆಗೆ ಪಾತ್ರರಾಗುತ್ತಾ ಬಂದಿದ್ದಾರೆ.
ತಾಲೂಕಿನ ಕಡಬ ಹೋಬಳಿ ಕುಣಾಘಟ್ಟ ಗ್ರಾಮದ ಲಕ್ಷ್ಮೀ ನಾರಸಿಂಹ ಸ್ವಾಮಿ ಅವರ ಜಯಂತಿಯನ್ನು ಆಗಮಿಕರಾದ ರಘು ಶರ್ಮಾ ಸಮ್ಮುಖದಲ್ಲಿ ಅರ್ಚಕ ಕೇಶವಮೂರ್ತಿ ನೇತೃತ್ವದಲ್ಲಿ ಪಂಚಾಮೃತ ಅಭಿಷೇಕ, ಹೋಮ ಹವನ ಯಜ್ಞ ಯಾಗಾದಿಗಳನ್ನು ನಡೆಸಿ ಪೂರ್ಣಾಹುತಿ ಬಳಿಕ ಸ್ವಾಮಿಯವರಿಗೆ ಮಹಾ ಮಂಗಳಾರತಿ ನೆರವೇರಿಸಿ ಭಕ್ತರಿಗೆ ತೀರ್ಥ ಪ್ರಸಾದ ವಿನಿಯೋಗ ಮಾಡಲಾಯಿತು.
ಆಗಮೀಕರಾದ ದರ್ಶನ್, ನರಸಿಂಹನ್, ಕೃಷ್ಣ, ಸುದರ್ಶನ್, ಸಂತೋಷ್ ಅವರು ಪಂಚಾಮೃತ ಅಭಿಷೇಕ ಹೋಮ ಹವನ ಮಂತ್ರ ಘೋಷವನ್ನು ನಡೆಸಿಕೊಟ್ಟರು.
ವರದಿ ಸಂಜಯ್ ಕೊಪ್ಪ.