ಚಿಕ್ಕನಾಯಕನಹಳ್ಳಿ : ಜೀವ ರಕ್ಷಕ ಚುಚ್ಚುಮದ್ದು ಪಡೆದ ಎರಡು ವರ್ಷದ ಮಗುವಿನ ಪ್ರಾಣಕ್ಕೆ ಕುತ್ತು ಪೋಷಕರು ಹಾಗೂ ಕುಟುಂಬಸ್ಥರ ಆಕ್ರಂದನ.
ತಾಲೂಕಿನ ಹುಳಿಯಾರು ಹೋಬಳಿ ಹೊಯ್ಸಳಕಟ್ಟೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮೃತ. ಪೋಷಕರು ಮಗುವಿನ ಸಾವಿಗೆ ಕಾರಣರಾದ ತಪ್ಪಿಸಸ್ಥರ ಮೇಲೆ ಕ್ರಮಕ್ಕೆ ಒತ್ತಾಯಿಸಿ ಪ್ರತಿಭಟನೆ.
ತಾಲೂಕಿನ ಸೋಮನಹಳ್ಳಿ ಭೋವಿ ಹಟ್ಟಿಯ ಮಧು ಹಾಗೂ ಶ್ರುತಿ ದಂಪತಿಯ ಗಂಡು ಮಗು ಮನೆಯಿಂದ ಆಸ್ಪತ್ರೆಗೆ ಕರೆತಂದು ಲಸಿಕೆ ಪಡೆದು ಹಿಂತಿರುಗಿ ಹೋಗುವಷ್ಟರಲ್ಲಿ ಪ್ರಾಣಪಕ್ಷಿ ಹಾರಿ ಹೋಗಿತ್ತು ವೈದ್ಯರು ಹಾಗೂ ಸಿಬ್ಬಂದಿಯ ನಿರ್ಲಕ್ಷ್ಯದಿಂದಲೇ ಮಗು ಮೃತಪಟ್ಟಿದೆ ಎಂಬ ಆರೋಪ, ಮಗುವಿನ ಸಾವಿಗೆ ಪೋಷಕರು ಹಾಗೂ. ಗ್ರಾಮಸ್ಥರು ಆಸ್ಪತ್ರೆ ಮುಂಭಾಗ ಮಗುವಿನ ಮೃತ ದೇಹ ಇಟ್ಟು ಪ್ರತಿಭಟನೆ.
ಸ್ಥಳಕ್ಕೆ ಶಾಸಕ ಸಿ ಬಿ ಸುರೇಶ್ ಬಾಬು, ತಹಸಿಲ್ದಾರ್ ಅರ್ಚನಾ ಭಟ್ ಬೇಟಿ ಶಾಸಕರಿಂದ ಕುಟುಂಬಸ್ಥರಿಗೆ ಸಾಂತ್ವನ, ಈ ಘಟನೆ ಬಗ್ಗೆ ನಿಷ್ಪಕ್ಷಪಾತವಾದ ತನಿಖೆ ನಡೆಸಿ ತಪ್ಪಿತಸ್ಥರ ಮೇಲೆ ಕಠಿಣ ಕ್ರಮಕ್ಕೆ ಸೂಚನೆ ನೀಡಿದರು. ಶಾಸಕರು ಪ್ರತಿಭಟನಾಕಾರರನ್ನು ಮನವೊಲಿಸಿದರು.
ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಮೃತ ದೇಹ ಪರೀಕ್ಷೆ ವರದಿಯ ನಂತರ ಸಾವಿನ ಸತ್ಯ ಸತ್ಯತೆ ಹೊರಬೀಳಲಿದೆ.
ವರದಿ ಚಿಕ್ಕನಾಯಕನಹಳ್ಳಿ ಚಂದ್ರು.