ಶಿರಾ:-ತಾಲೂಕು ಹುಲಿಕುಂಟೆ ಹೋಬಳಿಯ ಕ್ಯಾದಿಗುಂಟೆ ಗ್ರಾಮದಲ್ಲಿ ಶ್ರೀರಂಗನಾಥ ಸ್ವಾಮಿ ದೇವರ ಶ್ರೀ ಕುಂಭಾಭಿಷೇಕ ಮತ್ತು ಗ್ರಾಮದ ಅಭಿವೃದ್ಧಿಗಾಗಿ ಹೋಮ ಅವನ ಕಾರ್ಯಕ್ರಮ ಕೈಗೊಂಡಿದ್ದು ದೇವತಾ ಕಾರ್ಯಕ್ರಮ ದಲ್ಲಿ ಕ್ಷೇತ್ರದ ಶಾಸಕರಾದ ಟಿ ಬಿ ಜಯಚಂದ್ರ ಭಾಗವಹಿಸಿದ್ದರು.
ಸಾಮಾನ್ಯವಾಗಿ ಮನುಶ್ಯರಲ್ಲಿ ‘ದೇವರು’ ಎಂಬುದು ಬಾವನಾತ್ಮಕವಾಗಿ ಬೆಸೆದುಕೊಂಡ ವಿಚಾರವಾಗಿರುತ್ತದೆ.ಅದರಲ್ಲೂ ಬಾರತೀಯರಲ್ಲಿ ದೇವರ ಬಗೆಗಿನ ನಂಬಿಕೆಯನ್ನು ತುಸು ಹೆಚ್ಚಾಗಿಯೇ ಕಾಣಬಹುದು. ನಮಗೆ ಜೀವನದಲ್ಲಿ ಏನೇ ಸಂಕಷ್ಟಗಳು ಬಂದೊದಗಿದರೂ ಪರಿಹಾರಕ್ಕಾಗಿ ದೇವರಲ್ಲಿ ಮೊರೆ ಹೋಗುತ್ತೇವೆ. ದೇವರ ಮೇಲೆ ನಮ್ಮ ನಂಬಿಕೆ ಎಷ್ಟಿದೆ ಎಂದರೆ ನಮ್ಮೆಲ್ಲ ನೋವುಗಳನ್ನು ಕ್ಷಣ ಮಾತ್ರದಲ್ಲಿ ನಿವಾರಿಸುವ ಅಗಾಧ ಶಕ್ತಿ ದೇವರಿಗಿದೆ ಎಂದರು.
ನಾವು ಹೆಚ್ಚು ಸಂಕಶ್ಟದಲ್ಲಿದ್ದಾಗ “ಸಂಕಟ ಬಂದಾಗ ವೆಂಕಟ ರಮಣ“ ಎಂಬ ಗಾದೆಯಂತೆ, ದೇವರಲ್ಲಿ ಹೆಚ್ಚು ಮೊರೆ ಹೋಗುತ್ತೇವೆ. ಹರಕೆಗಳನ್ನು ಕಟ್ಟಿಕೊಳ್ಳುತ್ತೇವೆ, ಮುಡುಪು ಕಟ್ಟಿಡುತ್ತೇವೆ, ಕಾಣಿಕೆಗಳನ್ನು ಸಮರ‍್ಪಿಸುತ್ತೇವೆ. ಇದು ನಾವು ದೇವರ ಮೇಲೆ ಬಾವನಾತ್ಮಕವಾಗಿ ಹೊಂದಿರುವ ಅಪಾರ ನಂಬಿಕೆಯಾಗಿದೆ ಎಂದು ವಿವರಿಸಿದರು.
ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರಾದ ಸಿಆರ್ ಉಮೇಶ್ ಸ್ಥಳೀಯ ಮುಖಂಡ ರಂಗನಾಥ್ ಗೌಡ್ರು ಸೇರಿದಂತೆ ದೇವಸ್ಥಾನದ ಭಕ್ತಾದಿಗಳು ಹಾಜರಿದ್ದರು.
ವರದಿ ಶಿರಾ ಶ್ರೀಮಂತ್.