ಶಿರಾ:- ತ್ರಿವೇಣಿ ಸಂಗಮ ಮಾಡಿ ನೀರಾವರಿ ಪ್ರದೇಶವಾಗಿಸುವ ಕನಸು ಸಕಾರ ಗೊಳಿಸುವೆ ಶಾಸಕ ಟಿ.ಬಿ.ಜಯಚಂದ್ರ.
ನಗರದ ಶಾಸಕರ ಜನಸೇವಾ ಕಚೇರಿ ಉದ್ಘಾಟಿಸಿ ಮಾತನಾಡಿದ ಅವರು ಜನರ ಸರ್ವಾಂಗಿಣ ಪ್ರಗತಿಗೆ ಪೂರಕವಾಗಿ ನಗರದಲ್ಲಿ ಶಾಸಕರ ಜನಸೇವಾ ಕಚೇರಿಯನ್ನು ಆರಂಭಿಸಲಾಗಿದೆ ಎಂದ ಅವರು ತಾಲ್ಲೂಕಿಗೆ ಹೇಮಾವತಿ ನೀರು ಹರಿದ ಕಾರಣಗಳಿಂದ ಅಂತರ್ಜಲ ಮಟ್ಟವೂ ಹೆಚ್ಚಿದೆ. ಭದ್ರಾ ಮೇಲ್ದಂಡೆ ಹಾಗೂ ಎತ್ತಿನ ಹೊಳೆ ಯೋಜನೆ ನೀರು ತಾಲ್ಲೂಕಿಗೆ ತರುವ ಮೂಲಕ ತ್ರಿವೇಣಿ ಸಂಗಮ ಮಾಡಬೇಕು ಎನ್ನುವುದು ನನ್ನ ಕನಸು.
ತ್ರಿವೇಣಿ ಸಂಗಮವಾಗಿಸುವ ಭರವಸೆಯನ್ನು ನೀಡಿದೆ ಹಾಗಾಗಿ ಕ್ಷೇತ್ರದ ಜನತೆ ಆಸೆ ಕಂಗಳಿಂದ ನೀರಾವರಿ ಯೋಜನೆಗೆ ಎದುರು ನೋಡುತ್ತಿದ್ದಾರೆ.ಅದನ್ನು ಸಕಾರ ಗೊಳಿಸಲು ಎಲ್ಲಾ ರೀತಿಯ ತಾಯಾರಿ ಮತ್ತು ಮುಂದಿನ ಅಧಿವೇಶನದಲ್ಲಿ ಭದ್ರ ಯೋಜನೆಯ ಕರ್ಮಕಾಂಡ ಬಿಚ್ಚಿಡುವೆ ಮಾದರಿ ಕ್ಷೇತ್ರದ ಗುರಿ ಹೊಂದಿದ್ದೇನೆ.
ತಾಲ್ಲೂಕನ್ನು ಹೇಮಾವತಿ ಭದ್ರಾ ಮೇಲ್ದಂಡೆ ಹಾಗೂ ಎತ್ತಿನ ಹೊಳೆ ಯೋಜನೆ ಮೂಲಕ ತ್ರಿವೇಣಿ ಸಂಗಮ ಮಾಡಿ ನೀರಾವರಿ ಪ್ರದೇಶವಾಗಿಸಲಾಗುವುದು. ಕೈಗಾರಿಕೆ ಪ್ರಾರಂಭದ ಮೂಲಕ ಯುವಜನತೆಗೆ ಉದ್ಯೋಗಾವಕಾಶ ಕಲ್ಪಿಸಲಾಗುವುದು ಎಂದು ಶಾಸಕ ಟಿ.ಬಿ.ಜಯಚಂದ್ರ ತಿಳಿಸಿದರು.
ವರದಿ ಶಿರಾ ಶ್ರೀಮಂತ್