ಶಿರಾ:-ಭಜನೆ ಎಂಬುದು ಮನುಷ್ಯನ ಜೀವನದಲ್ಲಿ ದೇವರನ್ನು ಅತೀ ವೇಗವಾಗಿ ಒಲಿಸುವಂತಹ ಒಂದು ಅದ್ಬುತವಾದ ಶಕ್ತಿ ಶ್ರೀ ಚಿದಾನಂದ ಭಾರತಿ ಸ್ವಾಮಿಜಿ ತಿಳಿಸಿದರು.
ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ವಿವಿಧ ದೇವಾಲಯದ ಸಹಯೋಗದೊಂದಿಗೆ ನಗರದ ವಿದ್ಯಗಣಪತಿ ಕಲ್ಯಾಣ ಮಂಟಪದಲ್ಲಿ ಮಕ್ಕಳ ಕುಣಿತ ಭಜನಾ ತರಬೇತಿ ಕಾರ್ಯಕ್ರಮದ ಉದ್ಘಾಟಿಸಿದ ಶಿರಾ ತಾಲ್ಲೂಕಿನ ಪೂಜಾರ ಮುದ್ದನ ಹಳ್ಳಿಯ ಸಿದ್ಧಾರೂಢ ಮಠದ ಸದ್ಗುರುಗಳಾದ ಶ್ರೀ ಚಿದಾನಂದ ಭಾರತಿ ಸ್ವಾಮಿಗಳು ಮಾತನಾಡುತ್ತಾಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸ್ವಸ್ಥ ಸಮಾಜದ ನಿರ್ಮಾಣಕ್ಕಾಗಿ ತನ್ನದೇ ಆದ ಕೆಲಸ ನಿರ್ವಹಿಸುತ್ತಿದ್ದು, ದುಶ್ಚಟ ಮುಕ್ತ ಸಮಾಜ ನಿರ್ಮಾಣಕ್ಕಾಗಿ ಜನಜಾಗೃತಿ ವೇದಿಕೆಯ ಕಾರ್ಯ ಶ್ಲಾಘನೀಯ, ಪೂಜ್ಯರ ಸಮಾಜಮುಖಿ ಕಾರ್ಯ ಕ್ರಮ ವನ್ನು ಸರಕಾರದ ಮಟ್ಟದಲ್ಲೂ ಮಾಡಲು ಸಾಧ್ಯ ಇಲ್ಲ ಪೂಜ್ಯರ ಇಂತಹ ಕಾರ್ಯ ಕ್ರಮಗಳಿಂದ ಅದೆಷ್ಟೋ ಕುಟುಂಬ ಬದುಕನ್ನು ಕಟ್ಟಿಕೊಂಡಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಜನಜಾಗೃತಿ ವೇದಿಕೆಯ ಜಿಲ್ಲಾಧ್ಯಕ್ಷರು ವಹಿಸಿದ್ದರು. ಕಾರ್ಯಕ್ರಮದಲ್ಲಿ ಕಾರ್ಯನಿರ್ವಾಹಕ ನಿರ್ದೇಶಕರ ಸಂದೇಶವನ್ನು ತಿಳಿಸಲಾಯಿತು. ಶಿರಾ ತಾಲೂಕಿನ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವಿವಿಧ ಅಧಿಕಾರಿಗಳು ಹಾಜರಿದ್ದರು.
ವರದಿ ಶಿರಾ ಶ್ರೀಮಂತ್.