ಗುಬ್ಬಿ : ಉದ್ಯೋಗ ಪ್ರತಿ ಒಬ್ಬರಿಗೂ ಅವಶ್ಯಕತೆ ಇದ್ದು ಅದನ್ನು ಪಡೆಯಲು ತಯಾರಿ ನಡೆಸಬೇಕು ಎಂದು ಹಾಲಪ್ಪ ಫೌಂಡೇಶನ್ ಅಧ್ಯಕ್ಷ ಮುರಳಿಧರ್ ಹಾಲಪ್ಪ ತಿಳಿಸಿದರು.
ಪಟ್ಟಣದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಿದ್ದ ಯುವ ಕೌಶಲ್ಯ ತರಬೇತಿ ಕೇಂದ್ರ ದಿಂದ ಪದವಿ ವಿದ್ಯಾರ್ಥಿಗಳಿಗೆ ಹಾಗೂ ಉನ್ನತ ಶಿಕ್ಷಣ ಪಡೆಯುತ್ತಿರುವ ಯುವಕರಿಗೆ ಯಾವ ರೀತಿ ಉದ್ಯೋಗವನ್ನು ಪಡೆಯಬೇಕು ಎಂಬ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಸರಕಾರಿ ಉದ್ಯೋಗ, ಸ್ವಯಂ ಉದ್ಯೋಗ, ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿ, ವಿದೇಶಗಳಲ್ಲಿ ಓದುವಂತಹ ಕೆಲಸ ಇವೆಲ್ಲವುಗಳಿಗೂ ಸಹ ಈಗನಿಂದಲೇ ತಾವೆಲ್ಲರೂ ಪ್ರಯತ್ನ ಪಡಬೇಕು ಮತ್ತು ಅದರ ಬಗ್ಗೆ ಮಾಹಿತಿ ಪಡೆದಾಗ ಮಾತ್ರ ಉದ್ಯೋಗ ಗಿಟ್ಟಿಸಿಕೊಳ್ಳಲು ಅನುಕೂಲವಾಗುತ್ತದೆ ಇಂದಿನ ವಿದ್ಯಾರ್ಥಿಗಳಿಗೆ ಉದ್ಯೋಗ ಪಡೆಯುವುದಕ್ಕೆ ಹಾಗೂ ಸ್ವಉದ್ಯೋಗ ಮಾಡುವುದಕ್ಕೆ ಸಾಕಷ್ಟು ಅವಕಾಶಗಳಿದ್ದು ಸರಕಾರ ಕೂಡ ಸಾಕಷ್ಟು ಯೋಜನೆಗಳನ್ನ ಯುವಕರಿಗೆ ಹಾಕಿಕೊಂಡಿದೆ ಅವುಗಳ ಬಗ್ಗೆ ಮಾಹಿತಿಯನ್ನು ತಮಗೆ ನೀಡಲು ಅದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.ಕಾಲೇಜಿನ ಪ್ರಾಚಾರ್ಯ ಶಿವನಂಜಯ ಮಾತನಾಡಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಲ್ಲಿ ಸಾಕಷ್ಟು ಉದ್ಯೋಗಗಳು ಪ್ರತಿ ವರ್ಷ ಇದ್ದೇ ಇರುತ್ತದೆ ಅವುಗಳನ್ನು ಹೇಗೆ ಪಡೆದುಕೊಳ್ಳಬೇಕು ಹೇಗೆಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಬೇಕು ಎಂಬ ಮಾಹಿತಿಯನ್ನು ನೀಡುತ್ತಿದ್ದು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಯುವ ತರಬೇತಿ ಕೇಂದ್ರದ ನಿರ್ದೇಶಕ ಮಧುಗಿರಿ ದಿಲೀಪ್, ಸಹಾಯಕರಾದನಾಗಭೂಷಣ್, ಶ್ರೀಕಾಂತ್, ಸೇರಿದಂತೆ ಕಾಲೇಜಿನ ಉಪನ್ಯಾಸಕರು ಸುಮಾರು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು.