ಪರಿಸರ ಸಂರಕ್ಷಣೆ ನಮ್ಮೆಲ್ಲರ ಗುರಿಯಾಗಬೇಕು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮಹೇಶ್.

ಶಿರಾ:-ಸಸಿ ನೆಟ್ಟು ಪರಿಸರ ಸಂರಕ್ಷಣೆ ಹಿಂದೆಂದಿಗಿಂತ ಈಗ ಹೆಚ್ಚು ಮಹತ್ವ ಪಡೆಯುತ್ತಿದೆ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮಹೇಶ್ ತಿಳಿಸಿದರು.


ತಾಲೂಕಿನ ಮದಲೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಹುಳಿಗೆರೆ ಪೌಡ ಶಾಲೆ ಆವರಣದಲ್ಲಿ ಅರಣ್ಯ ಇಲಾಖೆಯ ಸಹಯೋಗದಲಿ ವನಮಹೋತ್ಸವ ಕಾರ್ಯಕ್ರಮದಲ್ಲಿ ಗಿಡಗಳನ್ನು ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು ಪ್ರಕೃತಿ ವಿಕೋಪಗಳು ಈಗಾಗಲೇ ಮನುಕುಲಕ್ಕೆ ಪಾಠ ಹೇಳಿಕೊಡುತ್ತಿವೆ. 

ಪರಿಸರ ಸಂರಕ್ಷ ಣೆ ಈಗಿರುವ ಮಾರ್ಗವಾಗಿದೆ. ಈಗ ನೆಟ್ಟಿರುವ ಸಸಿಗಳನ್ನು ಗಿಡ, ಮರಗಳನ್ನಾಗಿ ಪೋಷಿಸುವ ಜವಾಬ್ದಾರಿಯನ್ನು ಶಾಲಾ ಆಡಳಿತ ಮಂಡಳಿ ವಹಿಸುತ್ತದೆ. 

ಪ್ರತಿಯೊಬ್ಬ ವಿದ್ಯಾರ್ಥಿಗೆ ಒಂದೊಂದು ಸಸಿ ಪೋಷಣೆ ನಿರ್ವಹಣೆಗೆ ಮಾಡಿದರೆ ಅದುಮರವಾಗಿ ಬೆಳೆದು ಫಲವತ್ತತೆ ಹೆಚ್ಚುತ್ತದೆ ಎಂದು ವಿದ್ಯಾರ್ಥಿಗಳಿಗೆ ವಿವರಿಸಿದರು

ಅರಣ್ಯ ಇಲಾಖೆ ಅಧಿಕಾರಿ ನವನೀತ್ ಮಾತನಾಡಿ ಹಸಿರುಕರಣ ಯೋಜನೆ ಅಡಿಯಲ್ಲಿ ಶಾಲೆ, ಸರಕಾರಿ ಕಚೇರಿ ಆವರಣ, ಸ್ಮಶಾನ, ಉದ್ಯಾನಗಳಲ್ಲಿ ಹೆಚ್ಚು ಪ್ರಮಾಣದಲ್ಲಿ ಗಿಡ, ಮರ ಬೆಳೆಸುವ ಉದ್ದೇಶ ಹೊಂದಲಾಗಿದೆ ಎಂದರು.

ಮಾಹಿತಿ ನೀಡಿ, ನೇರಳೆ, ಮಾವು, ಸಾಗವಾನಿ, ಸೆಂಪಿಗೆ, ಅತ್ತಿ, ಹೊಳೆಮತ್ತಿ, ಅರಳಿ, ಹೊಂಗೆ, ಗೋಣಿ, ನಿಂಬು, ನುಗ್ಗೆ, ಹೆಬ್ಬೇವು ಜಾತಿಯ ಸಸಿಗಳನ್ನು ನೆಡಲಾಗುತ್ತಿದೆ. ಒಂದು ವರ್ಷದಲ್ಲಿ ಈ ಸಸಿಗಳು ಬೆಳೆದು ಗಿಡ, ಮರ ರೂಪ ತಾಳುತ್ತವೆ. ನೀರು, ಸುತ್ತಲೂ ಕಂಪೌಂಡ್‌ ವ್ಯವಸ್ಥೆ ಇಲ್ಲಿ ಇದೆ ಎಂದರು.

ಕಾರ್ಯಕ್ರಮದಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿ ಸೇರಿದಂತೆ ಗ್ರಾಮ ಪಂಚಾಯತ್ ಸದಸ್ಯರು,ಶಾಲೆಯ ಮುಖ್ಯ ಶಿಕ್ಷಕರು ಮತ್ತಿತರ ಹಾಜರಿದ್ದರು .

ವರದಿ ಶಿರಾ ಶ್ರೀಮಂತ್.

ಕಾಮೆಂಟ್‌‌ ಪೋಸ್ಟ್‌ ಮಾಡಿ

Please Select Embedded Mode To Show The Comment System.*

ನವೀನ ಹಳೆಯದು