ಗುಬ್ಬಿ : 77ನೇ ಸ್ವಾತಂತ್ರ್ಯ ದಿನಾಚರಣೆಯನ್ನು ತಹಶೀಲ್ದಾರ್ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ಅಧ್ಯಕ್ಷರಾದ ಬಿ ಆರತಿ ಅವರು ತಾಲೂಕು ಕಚೇರಿ , ಪಟ್ಟಣ ಪಂಚಾಯಿತಿ ಹಾಗೂ ಜೂನಿಯರ್ ಕಾಲೇಜ್ ಆಟದ ಮೈದಾನದಲ್ಲಿ ಧ್ವಜಾರೋಹಣ ನೆರವೇರಿಸಿ ಧ್ವಜವಂದನೆ ಸ್ವೀಕರಿಸಿದರು.
ಶಾಸಕ ಎಸ್ ಆರ್ ಶ್ರೀನಿವಾಸ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಸ್ವಾತಂತ್ರ್ಯ ಬಂದು 77 ವಸಂತಗಳನ್ನು ಪೂರೈಸಿರುವ ಸಂದರ್ಭದಲ್ಲಿ ದೇಶದ ಪ್ರಗತಿಯು ಎಷ್ಟರ ಮಟ್ಟಿಗೆ ಪ್ರಗತಿಯತ್ತ ಕಾಣುತ್ತಿದೆ ಎಂಬುದನ್ನು ಅವಲೋಕಿಸಬೇಕಿದೆ, ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಪ್ರಾಣ ಬಲಿದಾನ ಮಾಡಿದವರನ್ನು ಸ್ಮರಿಸುವ ಮೂಲಕ ಆಚರಿಸಬೇಕು. ಜಾತಿ ನಿರ್ವಹಣೆ, ಧರ್ಮ ಧರ್ಮ ನಡುವೆ ಸ್ವಾವಲಂಬಿಯಾಗಿ ಬದುಕಲು ಇಂದಿಗೂ ಆಗುತ್ತಿಲ್ಲ. ಪ್ರಸ್ತುತ ಅಸಮಾನತೆಯಿಂದ ಒಳಗೊಂಡಿರುವ ಸಮುದಾಯವನ್ನು ದೇಶದಲ್ಲಿ ಕಾಣುತ್ತಿರುವುದು ದೌರ್ಭಾಗ್ಯದ ಸಂಗತಿ ಎಂದು ಕಳವಳ ವ್ಯಕ್ತಪಡಿಸಿದರು.
ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಅಧ್ಯಕ್ಷರು ಹಾಗೂ ತಹಶೀಲ್ದಾರ್ ಬಿ.ಆರತಿ ಅವರು ದಿನಾಚರಣೆಯ ಸಂದೇಶ ಸಾರಿ
ಸ್ವಾತಂತ್ರ್ಯ ಎಂಬುದು ಬಹುದೊಡ್ಡ ಆಸ್ತಿ ಅದು ಕಳೆದು ಹೋದಾಗ ಮಾತ್ರ ಅದರ ಮೌಲ್ಯ ಅರ್ಥವಾಗುವುದು, ಸ್ವಾತಂತ್ರ್ಯ ಕಳೆದುಕೊಂಡರೆ ಈ ಹಿಂದಿನ 10 ಪಟ್ಟು ಬೆಲೆ ತರಬೇಕಾಗುತ್ತದೆ. ದೇಶದ ಜವಾಬ್ದಾರಿ ಕೇವಲ ಯೋಧರದ್ದೇ ಅಲ್ಲ , ಸ್ವಾತಂತ್ರ್ಯವನ್ನು ಆಚರಿಸಿ, ಆನಂದಿಸಿ ಸ್ವತಂತ್ರವಾಗಿ ಜಿವಿಸುವಂತಾಗಬೇಕಿದೆ. ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹಾನೀಯರನ್ನು ಮರೆಯದೆ ಅವರನ್ನು ಸ್ಮರಿಸಿಕೊಂಡು ಉತ್ತಮ ದೇಶವನ್ನಾಗಿ ರೂಪಿಸಲು ಪ್ರತಿಜ್ಞಾ ವಿಧಿಯನ್ನು ಸ್ವೀಕರಿಸಬೇಕು, ನಾವು ನಮ್ಮ ನಡುವೆ ನೆರೆಹೊರೆಯ ರೊಂದಿಗೆ ಉತ್ತಮ ಬಾಂಧವ್ಯವನ್ನು ಹೊಂದಬೇಕು ರಾಷ್ಟ್ರ ಹಾಗೂ ಜನರ ಅಭಿವೃದ್ಧಿ ಕಲ್ಯಾಣದ ಜೊತೆಗೆ ಶಾಂತಿ ಸೌಹಾರ್ಥತೆಗೆ ಶ್ರಮಿಸಿದಾಗ ಮಾತ್ರ ಸ್ವಾತಂತ್ರ್ಯಕ್ಕಾಗಿ ಹೋರಾಡಿ ತ್ಯಾಗ ಬಲಿದಾನ ಮಾಡಿದವರಿಗೆ ಸಾಕಾರ ಸಿಕ್ಕಂತೆ ಆಗುತ್ತದೆ ಎಂದು ಆಶಯ ವ್ಯಕ್ತಪಡಿಸಿದರು.
ತಾಲೂಕು ಆಡಳಿತ ವತಿಯಿಂದ ತಾಲೂಕು ಕಚೇರಿಯಲ್ಲಿ ಧ್ವಜಾರೋಹಣದೊಂದಿಗೆ ತಹಶೀಲ್ದಾರ್ ಬಿ. ಆರತಿ ಅವರು 77ನೇ ಸ್ವಾತಂತ್ರ್ಯ ದಿನಾಚರಣೆಗೆ ಚಾಲನೆ ನೀಡಿದರು.
ಪಟ್ಟಣ ಪಂಚಾಯಿತಿ ವತಿಯಿಂದ 77ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಡಳಿತಾಧಿಕಾರಿ ಹಾಗೂ ತಹಶೀಲ್ದಾರ್ ಬಿ.ಆರತಿ ಅವರು ದ್ವಜರೋಹಣದೊಂದಿಗೆ ಚಾಲನೆ ನೀಡಿದರು.
ಪೌರ ಕಾರ್ಮಿಕರಿಗೆ, ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಅಭಿನಂದಿಸಲಾಯಿತು.
ಶಾಲಾ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳ ಆಕರ್ಷಣೀಯವಾಗಿ ಕಂಡುಬಂತು.
ಪೊಲೀಸ್, ನಿವೃತ್ತ ಸೈನಿಕರು, ಎನ್.ಸಿ.ಸಿ, ಸ್ಕೌಡ್ಸ್ ಗೈಡ್ಸ್ ಹಾಗೂ ವಿವಿಧ ಶಾಲಾ ಮಕ್ಕಳಿಂದ ಧ್ವಜ ವಂದನೆ ಸ್ವೀಕಾರ
ಈ ಕಾರ್ಯಕ್ರಮದಲ್ಲಿ ತಾ.ಪಂ ಇಓ ಪರಮೇಶ್ ಕುಮಾರ್, ಪ.ಪಂ ಮುಖ್ಯಾಧಿಕಾರಿ ಶಂಕರ್, ಸರ್ಕಲ್ ಇನ್ಸ್ಪೆಕ್ಟರ್ ಗೋಪಿನಾಥ್, ಪ.ಪಂ ಸದಸ್ಯರು, ತಾಲೂಕು ಮಟ್ಟದ ಅಧಿಕಾರಿಗಳು ಶಿಕ್ಷಕ ವೃಂದ ಹಾಗೂ ಶಾಲಾ ಮಕ್ಕಳು ಉಪಸ್ಥಿತರಿದ್ದರು.
ಸಂಜಯ್ ಕೊಪ್ಪ ಗುಬ್ಬಿ