ತುಮಕೂರು ಗ್ರಾಮಾಂತರ ಗೂಳೂರು ನಾಡಕಚೇರಿಯಲ್ಲಿ 77ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಕಂದಾಯ ನಿರೀಕ್ಷಕ ಡಿ. ರಮೇಶ್ ಕುಮಾರ್ ಅವರು ಧ್ವಜಾರೋಹಣ ನೆರವೇರಿಸುವುದರೊಂದಿಗೆ ಆಚರಿಸಲಾಯಿತು.
ರಾಷ್ಟ್ರದೆಲ್ಲೇಡೆ ಸ್ವಾತಂತ್ರ್ಯ ದಿನಾಚರಣೆಯನ್ನು ಪ್ರತಿ ವರ್ಷವೂ ಆಚರಿಸುತ್ತಾ ಬಂದಿದ್ದು, ಕಳೆದ ವರ್ಷವಷ್ಟೇ ಸ್ವಾತಂತ್ರೋತ್ಸವದ ಅಮೃತ ಮಹೋತ್ಸವ ಆಚರಣೆಯನ್ನು ವಿಜೃಂಭಣೆಯಿಂದ ಆಚರಿಸುವುದು, ರಾಷ್ಟ್ರದ ಸ್ವಾತಂತ್ರ್ಯಕ್ಕಾಗಿ ಪ್ರಾಣ, ತ್ಯಾಗ, ಬಲಿದಾನ ಮಾಡಿದ ಮಹನೀಯರನ್ನು ಸ್ಮರಿಸುವ ಅವಶ್ಯಕತೆ ಇದೆ. ಜೊತೆಗೆ ಪ್ರತಿಯೊಬ್ಬ ಪ್ರಜೆಯೂ ರಾಷ್ಟ್ರ ರಕ್ಷಣೆಯನ್ನು ಮಾಡುವ ಪ್ರತಿಜ್ಞೆ ಸ್ವೀಕರಿಸಬೇಕಿದೆ, ದೇಶದ ಗಡಿ ಭಾಗದಲ್ಲಿರುವ ಸೈನಿಕರಿಗೆ ಮಾತ್ರ ಹೊಣೆಯಲ್ಲ ಪ್ರತಿಯೊಬ್ಬ ಯುವಕ ಯುವತಿಯರು,ರಾಷ್ಟ್ರ ಭಕ್ತರು ಆಗಿದೆ. ಹಾಗಾಗಿ ದೇಶವು ನಮಗೆ ಏನನ್ನು ಕೊಟ್ಟಿದೆ ಎಂಬುದಕ್ಕಿಂತ ರಾಷ್ಟ್ರಕ್ಕಾಗಿ ನಮ್ಮ ಕೊಡುಗೆ ಏನು ಎಂಬ ಪ್ರಶ್ನೆಯನ್ನು ಮನಸ್ಸಿಗೆ ಹಾಕಿಕೊಂಡಾಗ ಮಾತ್ರ ಸ್ವಾತಂತ್ರ್ಯ ದಿನಾಚರಣೆಯ ಮಹತ್ವ ತಿಳಿಯಲು ಸಾಧ್ಯ ಎಂದು ಉಪ ತಹಶೀಲ್ದಾರ್ ಭಾನುಪ್ರಕಾಶ್, ತಿಳಿಸಿದರು.
ಈ ಸಂದರ್ಭದಲ್ಲಿ ಕಂದಾಯ ನಿರೀಕ್ಷಕ ಡಿ. ರಮೇಶ್ ಕುಮಾರ್, ಗೂಳೂರು ಹೋಬಳಿಯ ಗ್ರಾಮ ಆಡಳಿತಾಧಿಕರಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.