ಗುಬ್ಬಿ ಸುದ್ದಿ: ದೀಪಾವಳಿ ಹಬ್ಬವು ಆರಂಭವಾಗಿದ್ದು, ಗ್ರಾಹಕರಿಂದ ಹಸಿರು ಪಟಾಕಿ ಖರೀದಿಯು ಜೋರು
ಸುಪ್ರೀಂ ಕೋರ್ಟ್ ಆದೇಶದ ಹಿನ್ನೆಲೆ ಈ ಬಾರಿ ಹಸಿರು ಪಟಾಕಿಯನ್ನು ಹೊರತು ಪಡಿಸಿ ಬೇರೆ ಯಾವುದೇ ರೀತಿಯ ಮಾರಾಟಕ್ಕೆ ಅವಕಾಶವಿಲ್ಲ ಎಂದು ಆದೇಶದ ಹಿನ್ನೆಲೆ ತಾಲೂಕಿನಲ್ಲಿ ಹಸಿರು ಪಟಾಕಿ ಮಾರಾಟ ಜೋರಾಗಿತ್ತು.
ಪ್ರತಿ ವರ್ಷವೂ ದೀಪಾವಳಿ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲು ಪಟಾಕಿಗಳ ಕಾರಬಾರು ಜೋರಾಗಿದ್ದು, ಆದರೆ ಈ ಬಾರಿ ಸುಪ್ರೀಂ ಕೋರ್ಟ್ ಆದೇಶದ ಹಿನ್ನೆಲೆ ಹಸಿರು ಪಟಾಕಿಯನ್ನು ಖರೀದಿಸುವಂತೆ ಆದೇಶ ಹೊರಡಿಸಿರುವ ಹಿನ್ನೆಲೆ ಕಾಲಕ್ಕೆ ತಕ್ಕಂತೆ ಗ್ರಾಹಕರು ಹಾಗೂ ಮಾರಾಟಗಾರರು ಬದಲಾಗಬೇಕು. ಇದರ ತರುವಾಯ ಈ ಬಾರಿ ದೀಪಾವಳಿ ಹಬ್ಬಕ್ಕೂ ಮುನ್ನ ಪಟಾಕಿ ತಯಾರಕರು ಮತ್ತು ಮಾರಾಟಗಾರರ ಸಭೆಯನ್ನು ತಹಶೀಲ್ದಾರ್ ಆರತಿ ಬಿ. ಅಧ್ಯಕ್ಷತೆಯಲ್ಲಿ ಸಮಿತಿ ವತಿಯಿಂದ ನಡೆಸಿ ಸರ್ಕಾರದ ಸುತ್ತೋಲೆಯಂತೆ ಹಸಿರು ಪಟಾಕಿಯನ್ನು ಖರೀದಿಸಿ ಮಾರಾಟ ಮಾಡಲು ಹಾಗೂ ಅಂಗಡಿಯನ್ನು ಇಡಲು ಸೂಚನೆ ನೀಡಿದ್ದು, ಅದರ ತರುವಾಯ ಮಾರಾಟಗಾರರು ಸಹ ಗ್ರಾಹಕರಿಗೆ ತಿಳಿ ಹೇಳಿ ಹಸಿರು ಪಟಾಕಿಯನ್ನು ಖರೀದಿಸಿ ಎಂದು ತಿಳಿ ಹೇಳುವ ಕೆಲಸವನ್ನು ಮಾಡುವಂತೆ ಸಮಿತಿ ವತಿಯಿಂದ ಸೂಚಿಸಲಾಗಿತ್ತು.
ಪ್ರತಿನಿತ್ಯ ಪಟ್ಟಣದಲ್ಲಿ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಮಂಜುಳಾ ದೇವಿ ಹಾಗೂ ಹೆಲ್ತ್ ಇನ್ಸ್ಪೆಕ್ಟರ್ ವಿದ್ಯಾಶ್ರೀ ತಂಡವು ಪಟಾಕಿ ಮಳಿಗೆಗೆ ತೆರಳಿ ಪರಿಶೀಲಿಸಿ ಕೆಲವೊಂದು ನ್ಯೂನತೆಯನ್ನು ಪಾಲಿಸದೇ ಇದ್ದ ವೇಳೆ ಕೂಡಲೇ ಮಾರಾಟಗಾರರ ಮಾಲೀಕರಿಗೆ ತಿಳಿ ಹೇಳುವ ಕೆಲಸವನ್ನು ಮಾಡುತ್ತಾ ಇದ್ದ ದೃಶ್ಯವೂ ಕಂಡು ಬಂತು.
ಒಟ್ಟಿನಲ್ಲಿ ಈ ಬಾರಿಯ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಪಟಾಕಿಯನ್ನು ಹೊಡೆಯಲು ಸಮಯವನ್ನು ನಿಗದಿಗೊಳಿಸಿ ಮನ ಸಂತೋಷಕ್ಕೆ ಸ್ವಲ್ಪ ಮಟ್ಟಿಗೆ ಹಿರಿಸು ಮುರಿಸಾಗಿದೆ.
ಸಂಜಯ್ ಕೊಪ್ಪ ಗುಬ್ಬಿ