ಒನಕೆ ಓಬವ್ವ ಶೌರ್ಯ, ಸಾಹಸದ ವೀರ ಮಹಿಳೆಯಾಗಿ ಇಡೀ ಸಮಸ್ಥ ಮಹಿಳಾ ಸಮುದಾಯಕ್ಕೆ ಮಾದರಿ:ತಹಶೀಲ್ದಾರ್ ಆರತಿ ಬಿ.

ಗುಬ್ಬಿ : ಹೈದರಲಿಯ ಸೈನ್ಯದ ವಿರುದ್ಧ ಹೋರಾಡಿ ಚಿತ್ರದುರ್ಗ ಮದಕರಿ ಸಾಮ್ರಾಜ್ಯವನ್ನು ರಕ್ಷಿಸಿದ ಒನಕೆ ಓಬವ್ವ ಶೌರ್ಯ, ಸಾಹಸದ ವೀರ ಮಹಿಳೆಯಾಗಿ ಇಡೀ ಸಮಸ್ಥ ಮಹಿಳಾ ಸಮುದಾಯಕ್ಕೆ ಮಾದರಿಯಾಗಿದ್ದಾರೆ ಎಂದು ತಹಶೀಲ್ದಾರ್ ಆರತಿ ಬಿ. ತಿಳಿಸಿದರು.
   ತಾಲೂಕು ಆಡಳಿತ ವತಿಯಿಂದ ತಾಲೂಕು ಕಚೇರಿಯ ಕಂದಾಯ ಭವನದಲ್ಲಿ ಒನಕೆ ಓಬವ್ವ ಅವರ ಜಯಂತಿ ಹಿನ್ನೆಲೆ ಪುಷ್ಪಾರ್ಜನೆ ನೆರವೇರಿಸಿ ಮಾತನಾಡಿದ ಅವರು ತನ್ನ ಯಜಮಾನಿಕೆಯ ಅಸ್ತಿತ್ವವನ್ನು ಉಳಿಸುವುದಕ್ಕಾಗಿ ಉಪ್ಪು ತಿಂದ ಮನೆಗೆ ದ್ರೋಹ ಬಗೆಯದೇ ಸ್ವಾಮಿನಿಷ್ಠೆಯನ್ನು ಮೆರೆಯುವ ಮೂಲಕ ದೇಶಕ್ಕೆ ನಾಡಿನ ಕೀರ್ತಿಯನ್ನು ಹೆಚ್ಚಿಸಿದ ಒಬವ್ವ ಮಾದರಿಯಾಗಿದ್ದಾರೆ. ಹೈದರಾಲಿಯು ಚಿತ್ರದುರ್ಗದ ಮೇಲೆ ಹಟಾತ್ತಾಗಿ ಆಕ್ರಮಣ ಮಾಡಿದಾಗ ಓಬವ್ವೆಯು ತನ್ನ ಒನಕೆಯನ್ನು ಅಸ್ತ್ರವಾಗಿ ಇಟ್ಟುಕೊಂಡು ಶತ್ರುಗಳನ್ನು ಎದುರಿಸಿದ್ದಳು. ನೂರಾರು ಶತ್ರು ಸೈನಿಕರನ್ನು ತನ್ನ ಒನಕೆಯಿಂದಲೇ ಕೊಂದು ಕೊನೆಯಲ್ಲಿ ಎದುರಾಳಿಯು ಬೆನ್ನಹಿಂದೆ ಬಂದದ್ದನ್ನು ಗಮನಿಸಲಾಗದೆ ಶತ್ರುವಿನ ಕತ್ತಿಗೆ ಬಲಿಯಾದರು. ಅಂದಿನಿಂದ ಅವರಿಗೆ ಒನಕೆ ಓಬವ್ವ ಎಂದು ಬಿರುದು ಸಿಕ್ಕಿತು ಎಂದು ತಿಳಿಸಿದರು.

 ಈ ಕಾರ್ಯಕ್ರಮದಲ್ಲಿ ಗ್ರೇಡ್ 02 ತಹಶೀಲ್ದಾರ್ ಶಶಿಕಲಾ, ಹೆಚ್ಚುವರಿ ಶಿರಸ್ತೇದಾರ್ ಶ್ರೀರಂಗ, ಖಾನ್, ಕಂದಾಯ ನಿರೀಕ್ಷಕರು, ಉಪ ತಹಶೀಲ್ದಾರ್ ಸೇರಿದಂತೆ ಕಂದಾಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.

ವರದಿ ಸಂಜಯ್ ಕೊಪ್ಪ ಗುಬ್ಬಿ.

ಕಾಮೆಂಟ್‌‌ ಪೋಸ್ಟ್‌ ಮಾಡಿ

Please Select Embedded Mode To Show The Comment System.*

ನವೀನ ಹಳೆಯದು