ದಲಿತ ಕುಟುಂಬಕ್ಕೆ ದೇವಸ್ಥಾನದಲ್ಲಿ ಪೂಜೆ ಮಾಡದೇ ಬಹಿಷ್ಕಾರ.
ದಲಿತ ತಂದ ಪೂಜಾ ಪರಿಕರಗಳನ್ನ ವಾಪಸ್ ಕಳುಹಿಸಿದ ದೇವಸ್ಥಾನದ ಅರ್ಚಕ.
ನಿಟ್ಟೂರು ಗ್ರಾಮದ ಮುಳಕಟ್ಟಮ್ಮ ದೇವಾಲಯದಲ್ಲಿ ಘಟನೆ.
ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನ ನಿಟ್ಟೂರು.
ಗ್ರಾಮದ ಮುಳ್ಳಕಟ್ಟಮ್ಮ ದೇವಸ್ಥಾನದ ಪೂಜೆಗೆ ಬಂದಿದ್ದ ದಲಿತ ಕುಟುಂಬ.
ನಿಟ್ಟೂರು ಗ್ರಾಮದ ಅನಿಲ್ ರಾಜ್ ತಮ್ಮ ಕುಟುಂಬ ಸಮೇತ.
ದೇವಸ್ಥಾನಕ್ಕೆ ಪೂಜೆ ಸಲ್ಲಿಸಲು ಬಂದಿದ್ರು.
ಈ ವೇಳೆ ದಲಿತ ಎಂಬ ಕಾರಣಕ್ಕೆ ಪೂಜೆ ಸಲ್ಲಿಸದೇ ಅಪಮಾನ ಮಾಡಿದ ಅರ್ಚಕ.
ದೇವಸ್ಥಾನದ ಒಳಗೆ ಬರದಂತೆ ತಡೆದ ಅರ್ಚಕ.
ಪೂಜೆಯನ್ನು ಮಾಡುವುದಿಲ್ಲ ಎಂದು ವಾಗ್ವಾದ ನಡೆಸಿ, ಪೂಜೆ ಪರಿಕರಗಳನ್ನು ವಾಪಸ್ ಕಳುಹಿಸಿದ ಅರ್ಚಕ.
ಅರ್ಚಕ ಪೂಜೆ ಪರಿಕರಗಳನ್ನು ವಾಪಸ್ ಕಳುಹಿಸುವ ಘಟನೆ ಮೊಬೈಲ್‌ನಲ್ಲಿ ಸೆರೆ.