ಗುಬ್ಬಿ ಸುದ್ದಿ : ತಾಲ್ಲೂಕು ಆಡಳಿತದ ವಿರುದ್ಧ ಸವಿತಾ ಸಮಾಜ ಮುಖಂಡರ ಆಕ್ರೋಶ.
ಪಟ್ಟಣದ ಪಂಚಮುಖಿ ಆಂಜನೇಯ ದೇವಸ್ಥಾನದ ಆವರಣದಲ್ಲಿ ಆಯೋಜಿಸಿದ ಪತ್ರಿಕಾಗೋಷ್ಠಿಯಲ್ಲಿ ಸವಿತಾ ಸಮಾಜದ ತಾಲೂಕು ಅಧ್ಯಕ್ಷ ಜಿ.ಆರ್. ಪ್ರಕಾಶ್ ಮಾತನಾಡಿ ಸರ್ಕಾರದ ಆದೇಶವಿದ್ದರೂ ತಾಲ್ಲೂಕು ಆಡಳಿತ ಸಮಾಜದ ಮುಖಂಡರಿಗೆ ಪೂರ್ವಭಾವಿಯಾಗಿ ತಿಳಿಸದೆ ಸವಿತಾ ಮಹರ್ಷಿ ಜಯಂತಿಯನ್ನು ಆಚರಣೆ ಮಾಡಿ ಸಮುದಾಯವನ್ನು ಕಡೆಗಣಿಸಿದೆ ಹಾಗಾಗಿ ಮಂಗಳವಾರ ತಾಲ್ಲೂಕು ಕಚೇರಿ ಮುಂದೆ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಗೌರವಾಧ್ಯಕ್ಷ ಎಂ ಡಿ ಲಕ್ಷೀನಾರಾಯಣ ಮಾತನಾಡಿ ಪ್ರತಿ ವರ್ಷವೂ ಸಹ ತಾಲ್ಲೂಕು ಕಚೇರಿಯಿಂದ ಸಮಾಜದ ಮುಖಂಡರ ಗಮನಕ್ಕೆ ತಂದು ಆಚರಿಸಲು ಕ್ರಮ ವಹಿಸುತ್ತಿದ್ದರು ಆದರೆ ಈ ಬಾರಿ ನಿರ್ಲಕ್ಷ ಮಾಡಿರುವುದು ಸಮುದಾಯಕ್ಕೆ ಮಾಡಿದ ಅವಮಾನ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸವಿತಾ ಸಮಾಜ ಯುವ ಪಡೆಯ ಅಧ್ಯಕ್ಷ ಎನ್. ರಮೇಶ್ ಮಾತನಾಡಿ ಸವಿತಾ ಮಹರ್ಷಿಗಳು ನಮ್ಮ ಸಮಾಜದ ಮೂಲ ಪುರುಷರಾಗಿದ್ದು ಮಹನೀಯರ ಆಚರಣೆಯಲ್ಲಿ ತಾಲ್ಲೂಕು ಆಡಳಿತ ನಿರ್ಲಕ್ಷ ವಹಿಸಿರುವುದು ವಿಪರ್ಯಾಸವೆಂದು ಅಸಮಾಧಾನ ವ್ಯಕ್ತಪಡಿಸಿ, ಸವಿತಾ ಸಮುದಾಯವನ್ನು ನಿರ್ಲಕ್ಷಿಸಿದ ತಾಲ್ಲೂಕು ಆಡಳಿತದ ವಿರುದ್ಧ ಪ್ರತಿಭಟಿಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗುವುದು ಆದ್ದರಿಂದ ತಾಲೂಕಿನ ಎಲ್ಲಾ ಸವಿತಾ ಸಮಾಜದ ಎಲ್ಲಾ ಬಂಧುಗಳು ಮಂಗಳವಾರ
ಪ್ರತಿಭಟನೆಯಲ್ಲಿ ಪಾಲ್ಗೊಳ್ಳಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಸವಿತಾ ಸಮಾಜ ಯುವ ಪಡೆಯ ಅಧ್ಯಕ್ಷ ಎನ್. ರಮೇಶ್, ಪ್ರತಿನಿಧಿ ನಟರಾಜು ನರಸಿಂಹಮೂರ್ತಿ, ಅನಿಲ್, ಸುನಿಲ್, ಕಾರ್ತಿಕ್, ರಾಕೇಶ್, ಅಖಿಲೇಶ್, ಶ್ರೀನಿವಾಸ್, ಕುಮಾರ್, ರಮೇಶ್ ಹಾಗೂ ಇನ್ನಿತರರು ಹಾಜರಿದ್ದರು.
ವರದಿ : ಮದೇನಹಳ್ಳಿ, ಮಂಜು.
