ರೈತರ ಸಂಕಷ್ಟಕ್ಕೆ ಕೂಡಲೇ ಸರ್ಕಾರ ಸ್ಪಂದಿಸಲಿ : ರಾಜ್ಯ ಜೈವಿಕ ಇಂಧನ ಮಂಡಳಿ ಅಧ್ಯಕ್ಷ ಕೆ ಎಸ್ ಕಿರಣ್ ಕುಮಾರ್.

 ಚಿಕ್ಕನಾಯಕನಹಳ್ಳಿ : ರೈತರ ಸಂಕಷ್ಟಕ್ಕೆ ಸ್ಪಂದಿಸಿ ಕೇಂದ್ರ ಸರ್ಕಾರ ಘೋಷಿಸಿರುವ ಬೆಂಬಲ ಬೆಲೆ ಯೋಜನೆ ಅಡಿ, ಕೊಬ್ಬರಿ ಖರೀದಿ ಕೇಂದ್ರವನ್ನು ಶೀಘ್ರವಾಗಿ ತೆರೆಯುವಂತೆ ಸರ್ಕಾರಕ್ಕೆ ಒತ್ತಾಯಿಸಿದ ಮಾಜಿ ಶಾಸಕ, ರಾಜ್ಯ ಜೈವಿಕ ಇಂಧನ ಮಂಡಳಿ ಅಧ್ಯಕ್ಷ ಕೆ. ಎಸ್.ಕಿರಣ್ ಕುಮಾರ್.


ಪಟ್ಟಣದ ಜನಸಂಪರ್ಕ ಕಾರ್ಯಾಲಯದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

 ಕಲ್ಪತರ ನಾಡು ಎಂದೆ ಪ್ರಸಿದ್ಧವಾಗಿರುವ ನಮ್ಮ ತುಮಕೂರು ಜಿಲ್ಲೆಯ ರೈತರ ಆರ್ಥಿಕ ಬೆನ್ನೆಲುಬಾಗಿ ಪ್ರಧಾನ ಬೆಳೆಯಾಗಿರುವ ತೆಂಗು ಬೆಳೆಯನ್ನ ಅವಲಂಬಿಸಿರುವ ರೈತರು ತೆಂಗಿನ ಉತ್ಪನ್ನವಾದ ಒಣ ಕೊಬ್ಬರಿಯನ್ನಾಗಿಸಿ ಮಾರುವ ಪ್ರವೃತ್ತಿ ಯಾಗಿದೆ.


 ಆದರೆ ಇಂದು ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಕೊಬ್ಬರಿ ಬೆಲೆ 11300 ಇದ್ದು, ನಿರ್ದಿಷ್ಟ ಬೆಲೆ ಇಲ್ಲದೆ ಪಾತಾಳಕ್ಕೆ ಇಳಿದಿದ್ದು ರೈತರು ಆರ್ಥಿಕ ನಷ್ಟ ಅನುಭವಿಸುತ್ತಿದ್ದಾರೆ.


ಆದರೆ ರೈತರ ಹೋರಾಟ, ಬೇಡಿಕೆಗೆ ಸ್ಪಂದಿಸಿರುವ ಕೇಂದ್ರ ಸರ್ಕಾರದ ಉಂಡೆ ಒಣ ಕೊಬ್ಬರಿಗೆ ಪ್ರೋತ್ಸಾಹ ಧನವಾಗಿ 11,700 ರೂ ಬೆಂಬಲ ಬೆಲೆ ಘೋಷಿಸಿದ್ದು, ಸದರಿ ಬೆಲೆಗೆ ರಾಜ್ಯ ಸರ್ಕಾರ ಬೆಂಬಲ ಬೆಲೆ ಘೋಷಿಸಿ ಶೀಘ್ರವೇ ನೆಫೆಡ್ ಖರೀದಿ ಕೇಂದ್ರ ತೆರೆದು ರೈತರ ಸಂಕಷ್ಟಕ್ಕೆ ಸ್ಪಂದಿಸಬೇಕಿದೆ ಎಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.


 ಈ ಸಂಬಂಧ ಮಾನ್ಯ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಸಂಬಂಧಿಸಿದ ಸಚಿವರಿಗೆ ಸಹ ರೈತರ ಪರವಾಗಿ ಮನವಿಯನ್ನ ಶೀಘ್ರವೇ ಮಾಡುತ್ತೇನೆ.


 ರೈತರು ಗುಣಮಟ್ಟದ ಉತ್ಪನ್ನವನ್ನು ನಫೆಡ್ ಖರೀದಿ ಕೇಂದ್ರಕ್ಕೆ ತಂದು ಬಿಟ್ಟು ಉತ್ತಮ ಬೆಲೆಯನ್ನು ಪಡೆದುಕೊಳ್ಳಲು ರೈತರಿಗೆ ಸಲಹೆ ನೀಡಿದರು.


 ಈ ವೇಳೆ ತಾಲೂಕು ಬಿಜೆಪಿ ಮಾಜಿ ಅಧ್ಯಕ್ಷ ಎಂಎಂ ಜಗದೀಶ್, ಶ್ರೀನಿವಾಸ್ ಮೂರ್ತಿ, ಮತ್ತು ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರಾದ ಎಚ್.ಬಿ ಪಂಚಾಕ್ಷರಿ, ಬಿ.ಎನ್ ಶಿವಪ್ರಕಾಶ್, ಹುಳಿಯಾರ್ ರಾಮಣ್ಣ, ಅಣೆಕಟ್ಟೆ ಸಿದ್ದರಾಮಯ್ಯ, ಹಾಗೂ ಯುವ ಮುಖಂಡರಾದ ಹನುಮ ಜಯ, ಗೌತಮ್, ಶ್ರೀ ಹರ್ಷ, ಚೇತನ್ ಪ್ರಸಾದ್ ಭಾಗಿಯಾಗಿದ್ದರು.


ವರದಿ : ಚಿಕ್ಕನಾಯಕನಹಳ್ಳಿ ಚಂದ್ರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

Please Select Embedded Mode To Show The Comment System.*

ನವೀನ ಹಳೆಯದು