ಗೌರಿಶಂಕರ ಮಹಾಸ್ವಾಮೀಜಿಗಳ 7ನೇ ವರ್ಷದ ಪುಣ್ಯ ಸ್ಮರಣೆಯ ಅಂಗವಾಗಿ ಉಚಿತ ಆರೋಗ್ಯ ಶಿಬಿರ.

 ಗುಬ್ಬಿ : ಸಾಮಾಜಿಕ ಸೇವೆ ಪರಮಾತ್ಮನ ಸೇವೆ ಎಂದು ಪ್ರತಿಯೊಬ್ಬರ ಬದುಕಿದಾಗ ಮಾತ್ರ ಸಮಾಜದಲ್ಲಿನ ಸಮಸ್ಯೆಗಳನ್ನು ಬಗೆಹರಿಸಬಹುದು ಎಂದು ತೊರೆಮಠದ ರಾಜಶೇಖರ ಸ್ವಾಮೀಜಿ ತಿಳಿಸಿದರು.


 ಪಟ್ಟಣದ ಎ ವಿ ಕೆ ಕಲ್ಯಾಣ ಮಂಟಪದಲ್ಲಿ ಗೌರಿಶಂಕರ ಮಹಾಸ್ವಾಮೀಜಿಗಳ 7ನೇ ವರ್ಷದ ಪುಣ್ಯ ಸ್ಮರಣೆಯ ಅಂಗವಾಗಿ ಉಚಿತ ಆರೋಗ್ಯ ಶಿಬಿರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ದೊಡ್ಡ ದೊಡ್ಡ ಆಸ್ಪತ್ರೆಗಳಿಂದ ಹಲವು ವೈದ್ಯರು ಆಗಮಿಸಿ ಚಿಕಿತ್ಸೆಯನ್ನು ನೀಡುತ್ತಿದ್ದಾರೆ ಇದರ ಸದುಪಯೋಗವನ್ನು ಎಲ್ಲರೂ ಪಡೆದುಕೊಳ್ಳಬೇಕು ಎಂದು ತಿಳಿಸಿದರು.


ಜಿಲ್ಲಾ ವೈದ್ಯಾಧಿಕಾರಿ ಡಾ. ಮಂಜುನಾಥ್ ಮಾತನಾಡಿ ಜಿಲ್ಲೆಯಲ್ಲಿ ಯಾವುದೇ ರೀತಿಯ ಕರೋನಾ ಸಂಖ್ಯೆ ಮುಂದುವರೆದಿಲ್ಲ ಅವಶ್ಯಕತೆ ಇರುವಂತಹ ಎಲ್ಲಾ ವ್ಯವಸ್ಥೆಯನ್ನು ಎಲ್ಲಾ ಆಸ್ಪತ್ರೆಗಳಲ್ಲೂ ಸಹ ಮಾಡಲಾಗಿದೆ ಇಂತಹ ಕಾರ್ಯಕ್ರಮಗಳು ಪ್ರತಿಯೊಂದು ತಾಲೂಕಿನಲ್ಲಿ ನಡೆದಾಗ ಗ್ರಾಮಾಂತರ ಭಾಗದ ಜನರಿಗೆ ಅನುಕೂಲವಾಗುತ್ತದೆ ವೈದ್ಯರು ಕೇವಲ ಆಸ್ಪತ್ರೆಯಲ್ಲಿ ಮಾತ್ರ ಚಿಕಿತ್ಸೆ ನೀಡುತ್ತಾರೆ ಎಂಬುದರ ಬದಲಿಗೆ ಹಳ್ಳಿಯಲ್ಲಿಯೂ ಬಂದು ಸೇವೆ ಮಾಡುತ್ತಾರೆ ಎಂಬುದು ಗೊತ್ತಾದಾಗ ಮಾತ್ರ ನಾವು ಓದಿರುವುದಕ್ಕೂ ಸಾರ್ಥಕವಾಗುತ್ತದೆ ಎಂದು ತಿಳಿಸಿದರು.

 ಮುಖಂಡ ಜಿಎಸ್ ಪ್ರಸನ್ನ ಕುಮಾರ್ ಮಾತನಾಡಿ ಇಂದು ಎಲ್ಲಾ ಕ್ಷೇತ್ರಗಳಲ್ಲಿಯೂ ಸಹ ಒಳಿತನ್ನು ಹುಡುಕುವಂತ ಸ್ಥಿತಿಗೆ ನಾವು ಬಂದಿದ್ದೇವೆ ವೈದ್ಯರು, ವಕೀಲರು, ಶಿಕ್ಷಕರು, ರಾಜಕಾರಣಿಗಳು ಸೇರಿದಂತೆ ಎಲ್ಲದರಲ್ಲಿಯೂ ಒಳಿತನ್ನು ಹುಡುಕಿದಾಗ ಮಾತ್ರ ಸಮಾಜದ ಬದಲಾವಣೆಗಳು ಸಾಧ್ಯವಾಗುತ್ತದೆ ಎಂದು ತಿಳಿಸಿದರು.

 ಡಾ. ಆದರ್ಶ್ ಮಾತನಾಡಿ ಗುಬ್ಬಿಯಲ್ಲಿ ಮಾಡಿರುವಂತಹ ಈ ಒಂದು ಶಿಬಿರವು ಬಹಳ ಯಶಸ್ವಿಯಾಗಿ ನಡೆದಿದ್ದು ಹುಬ್ಬಳ್ಳಿಯಿಂದ ಸುಮಾರು 30ಕ್ಕೂ ಹೆಚ್ಚು ವೈದ್ಯರುಗಳು ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿ ಮಾಡಿದ್ದಾರೆ ಸುಮಾರು ಸಾವಿರಕ್ಕೂ ಹೆಚ್ಚು ಸಾರ್ವಜನಿಕರು ಆಗಮಿಸಿ ಚಿಕಿತ್ಸೆಯನ್ನು ಪಡೆದಿದ್ದಾರೆ ಎಂದು ತಿಳಿಸಿದರು 


 ಇದೇ ಸಂದರ್ಭದಲ್ಲಿ ಹಲವು ಆಸ್ಪತ್ರೆಯ ವೈದ್ಯರುಗಳು, ಪಟ್ಟಣ ಪಂಚಾಯಿತಿ ಅಧ್ಯಕ್ಷ ಅಣ್ಣಪ್ಪ ಸ್ವಾಮಿ, ಸದಸ್ಯ ಶಿವಕುಮಾರ್, ಲಯನ್ಸ್ ಕ್ಲಬ್ ಮಾಜಿ ಅಧ್ಯಕ್ಷ ಹುಂಡೇ ರಾಮಣ್ಣ,ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಉಮೇಶ್, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಯತೀಶ್, ಬೆಳಕಲ್ಲ ಹಳ್ಳಿ ರಮೇಶ್, ಹೊಸಹಳ್ಳಿ ಗಿರೀಶ್ ಸರಿದಂತೆ ಇನ್ನಿತರರು ಹಾಜರಿದ್ದರು

ಕಾಮೆಂಟ್‌‌ ಪೋಸ್ಟ್‌ ಮಾಡಿ

Please Select Embedded Mode To Show The Comment System.*

ನವೀನ ಹಳೆಯದು