ಗುಬ್ಬಿ : ಸಹಕಾರಿ ತತ್ವ ಸಿದ್ಧಾಂತ ಮೈ ಗೂಡಿಸಿ ಕೊಂಡಾಗ ಮಾತ್ರ ಸಹಕಾರಿ ಸಂಘಗಳು ಅಭಿವೃದ್ಧಿಯತ್ತ ಸಾಗುತ್ತವೆ ಎಂದು ವ್ಯವಸಾಯೋತ್ಪನ್ನ ಸೇವಾ ಸಹಕಾರ ಸಂಘದ ನೂತನ ಅಧ್ಯಕ್ಷ ನಲ್ಲೂರು ನಟರಾಜ್ ತಿಳಿಸಿದರು.
ಪಟ್ಟಣದ ಟಿಎಪಿಎಂಎಸ್ ಕಟ್ಟಡದಲ್ಲಿ ಸಂಘದ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಚುನಾವಣೆ ನಡೆಯಿತು ಹಿಂದೆ ಇದ್ದಂತಹ ಅಧ್ಯಕ್ಷ ರಮೇಶ್, ಉಪಾಧ್ಯಕ್ಷ ಶಿವರುದ್ರಯ್ಯ ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಚುನಾವಣೆ ಯಲ್ಲಿ ಅವಿರೋಧವಾಗಿ ಆಯ್ಕೆಯಾಗಿ ಮಾತನಾಡಿದ ಅವರು ಸುಮಾರು 20 ವರ್ಷದಿಂದಲೂ ಸಹಕಾರ ಸಂಘದಲ್ಲಿ ಕೆಲಸ ಮಾಡಿದ್ದು ರೈತರು ನೇರವಾಗಿ ಸಂಪರ್ಕದಲ್ಲಿದ್ದೇನೆ ಅವರ ಕಷ್ಟ ಸುಖಗಳು ಎಲ್ಲವೂ ತಿಳಿದಿದ್ದು ರೈತರಿಗೆ ನೀಡಬೇಕಾದಂತಹ ಮೂಲ ಭೂತ ಸೌಲಭ್ಯ ನೀಡುವುದರಲ್ಲಿ ಯಾವುದೇ ರಾಜಕೀಯ ಮಾಡದಂತೆ ಪ್ರತಿ ಯೂಬ್ಬರಿಗೂ ಅಗತ್ಯ ಸೌಲಭ್ಯ ಕಲ್ಪಿಸಲು ಬದ್ಧವಾಗಿದ್ದೇನೆ, ಸರಕಾರ ರೂಪಿಸುವಂತಹ ಎಲ್ಲ ಯೋಜನೆಗಳನ್ನು ನೇರವಾಗಿ ರೈತರಿಗೆ ನೀಡುವಂತಹ ಕೆಲಸವನ್ನು ಮಾಡುತ್ತೇವೆ ಎಂದು ತಿಳಿಸಿದರು.
ನೂತನ ಉಪಾಧ್ಯಕ್ಷರಾಗಿ ಆಯ್ಕೆಯಾದ ರೇಣುಕ ಪ್ರಸಾದ್ ಮಾತನಾಡಿ ವ್ಯವಸಾಯೋತ್ಪನ್ನ ಸೇವಾ ಸಹಕಾರ ಸಂಘದಲ್ಲಿ ವಿಶೇಷವಾಗಿ ಅಭಿವೃದ್ಧಿ ಮಾಡುವ ನಿಟ್ಟಿನಲ್ಲಿ ಹಲವು ಯೋಜನೆಗಳನ್ನು ಮಾಡಿಕೊಂಡಿದ್ದು ಮುಂದಿನ ದಿನದಲ್ಲಿ ಬೃಹತ್ ಮಟ್ಟದ ಎಲ್ಲಾ ರೀತಿಯ ಆಹಾರ ಸಾಮಗ್ರಿಗಳು ಒಂದೇ ಭಾಗದಲ್ಲಿ ಸಿಗುವಂತಹ ಮಳಿಗೆಯನ್ನು ಸಹ ಮಾಡಲಾಗುತ್ತಿದೆ ಎಂದು ತಿಳಿಸಿದರು
ಚುನಾವಣಾ ಅಧಿಕಾರಿಯಾಗಿ ಮಹಾಂತೇಶ್ ಸಿ ಡಿ ಒ ನಡೆಸಿ ಕೊಟ್ಟರು.
ಇದೇ ಸಂದರ್ಭದಲ್ಲಿ ಡಿ ಸಿ ಸಿ ಬ್ಯಾಂಕ್ ಜಿಲ್ಲಾ ನಿರ್ದೇಶಕ ಹಾರನಹಳ್ಳಿ ಪ್ರಭಕರ್, ನಿರ್ದೇಶಕರಾದ ಬಿಎಸ್ ರಮೇಶ್, ಶಿವರುದ್ರಯ್ಯ, ಪಿ ಎಸ್ ಕಿಡಿಗಣ್ಣಪ್ಪ, ರಾಮಚಂದ್ರ, ವೈ ಜಿ ಥ್ರಿನೇಶ್, ಎಸ್ ಆರ್ ಜಗದೀಶ್, ವಸಂತ, ಮಾಲಮ್ಮ, ಎಸ್ ಪಿ ಆಂಜುನಪ್ಪ, ಬಿಎಸ್ ಪಂಚಾಕ್ಷರಿ,ಸೇರಿದಂತೆ ಇನ್ನಿತರೇ ಅವರ ಅಭಿಮಾನಿಗಳು ಹಾಜರಿದ್ದರು.
