ಕೊಪ್ಪ ಕ್ಲಸ್ಟರ್ ವತಿಯಿಂದ ಹೊನ್ನ ಶೆಟ್ಟಿಹಳ್ಳಿ ಸರ್ಕಾರಿ ಶಾಲೆಯಲ್ಲಿ ಕಲಿಕಾ ಹಬ್ಬ ಆಚರಣೆ

 ಗುಬ್ಬಿ ಸುದ್ದಿ: ಕೊಪ್ಪ ಕ್ಲಸ್ಟರ್ ವತಿಯಿಂದ ಹೊನ್ನ ಶೆಟ್ಟಿಹಳ್ಳಿ ಸರ್ಕಾರಿ ಶಾಲೆಯಲ್ಲಿ ಕಲಿಕಾ ಹಬ್ಬ ಆಚರಣೆ.



 ತಾಲ್ಲೂಕಿನ ಕೊಪ್ಪ ಕ್ಲಸ್ಟರ್, ಹೊನ್ನ ಶೆಟ್ಟಿಹಳ್ಳಿ ಸರ್ಕಾರಿ ಶಾಲೆಯಲ್ಲಿ ಕ್ಲಸ್ಟರ್ ವ್ಯಾಪ್ತಿಯ 12 ಶಾಲೆಗಳ 120 ಮಕ್ಕಳು 60 ಗಂಡು ಮಕ್ಕಳು, 60 ಹೆಣ್ಣು ಮಕ್ಕಳು ಈ ಕಲಿಕಾ ಹಬ್ಬದಲ್ಲಿ ಭಾಗವಹಿಸಿದ್ದರು. 

 ಈ ಕಾರ್ಯಕ್ರಮದ ಉದ್ಘಾಟನೆಯನ್ನು ರಂಗಧಾಮಪ್ಪ ಡಿ ವೈ ಪಿ ಸಿ, ಡಿ ಡಿ ಪಿ ಐ ಕಚೇರಿ ತುಮಕೂರು. ನೆರವೇರಿಸಿ ಮಾತನಾಡಿದ ಅವರು ಕೋವಿಡ್ ಕಾರಣದಿಂದ ಎರಡು ವರ್ಷಗಳ ಶಾಲೆ ನಡೆಯದ ಕಾರಣ ಈ ವರ್ಷ ಮಕ್ಕಳ ಕಲಿಕಾ ಕೊರತೆಯನ್ನು ನೀಗಿಸುವ ಕಾರಣ ಕಲಿಕಾ ಚೇತರಿಕೆ ಕಾರ್ಯಕ್ರಮವನ್ನು ಜನವರಿ 30 ಮತ್ತು 31 ಎರಡು ದಿನಗಳನ್ನು ಕಲಿಕಾ ಹಬ್ಬವನ್ನಾಗಿ ಕರ್ನಾಟಕದ ಎಲ್ಲಾ ಸರ್ಕಾರಿ ಶಾಲೆಗಳಲ್ಲೂ ಆಚರಿಸುತ್ತೇವೆ ಎಂದ ಅವರು ಕಾರ್ಯಕ್ರಮದಲ್ಲಿ ಭಾಗವಹಿಸುವ ಮಕ್ಕಳು ಆಡು - ಹಾಡು, ಕಾಗದ - ಕತ್ತರಿ, ಊರು ತಿಳಿಯೋಣ, ಮಾಡು-ಹಾಡು, ಎಂಬ ಗುಂಪುಗಳಲ್ಲಿ ವಿನ್ಯಾಸಗೊಳಿಸಿ ಮಕ್ಕಳು ಖುಷಿಯಿಂದ ಪಾಲ್ಗೊಳ್ಳುವಂತೆ ಎಲ್ಲಾ ಚಟುವಟಿಕೆಗಳನ್ನು ರೂಪಿಸಲಾಗಿದೆ ಮಕ್ಕಳು ಹೊರ ಬದುಕಿನ ಅನುಭವಗಳು ಈ ಕಲಿಕಾ ಪ್ರಕ್ರಿಯೆಯಲ್ಲಿ ಬಳಕೆಯಾಗುತ್ತದೆ ವಿದ್ಯಾರ್ಥಿಗಳು ತಮ್ಮ ತಮ್ಮಲ್ಲಿ, ತಾರ್ಕಿಕವಾಗಿ ಆಲೋಚಿಸಿ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಮಾರ್ಗವನ್ನು ತಾವೇ ಕಂಡುಕೊಳ್ಳುವ ಕಾರ್ಯಕ್ರಮವೇ ಕಲಿಕಾ ಹಬ್ಬವಾಗಿದೆ.

 ಕಲಿಕಾ ಹಬ್ಬದಲ್ಲಿ ಕಲಿಕಾ ಹಾಳೆಗಳಲ್ಲಿ ಚಟುವಟಿಕೆಗಳನ್ನು ನಿರ್ಮಿಸಿ ಭಾಷೆ ವಿಜ್ಞಾನ ಗಣಿತವನ್ನು ಕಲಿಯುವುದಕ್ಕೆ ಸಹಕಾರಿಯಾಗುತ್ತದೆ ತುಮಕೂರು ಜಿಲ್ಲೆಯಲ್ಲಿ 170 ಕ್ಲಸ್ಟರ್ ಗಳಲ್ಲಿ ಈ ಕ್ಲಸ್ಟರ್ ಹಬ್ಬ ನಡೆಯುತ್ತದೆ ಮುಂದೆ ಜಿಲ್ಲಾ ಹಬ್ಬವನ್ನು ಮಾಡಿ 300 ಮಕ್ಕಳು ಭಾಗವಹಿಸುವಂತೆ ಮಾಡುತ್ತೇವೆ ಸುಮಾರು 25 ಸಾವಿರ ಮಕ್ಕಳು ಈ ಕಾರ್ಯಕ್ರಮದ ಮೂಲಕ ನೇರ ಪ್ರಯೋಜನನ್ನು ಪಡೆದು ಅವರವರ ಶಾಲೆಗಳಿಗೆ ಹೋಗಿ ಉಳಿದ ಮಕ್ಕಳಿಗೆ ಹೇಳಿಕೊಡುವಂತಹ ಚಟುವಟಿಕೆಯಾಗಿದೆ, ಇಲ್ಲಿ ಭಾಗವಹಿಸಿದ್ದ ಮಕ್ಕಳು ತರಬೇತಿ ಪಡೆದು ಇನ್ನುಳಿದ ಮಕ್ಕಳಿಗೆ ಹೇಳಿಕೊಡುವಂತಹ ಕಲಿಕಾ ಚೇತರಿಕೆ ತರಬೇತಿ ನೀಡುತ್ತೇವೆ. ಊರಿನ ಗ್ರಾಮಸ್ಥರ ಸಹಾಯದೊಂದಿಗೆ ದೊಡ್ಡ ಮೆರವಣಿಗೆಯನ್ನು ಮಾಡಿ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದ್ದಾರೆ ಈ ಕಲಿಕಾ ಹಬ್ಬದ ವಿಶೇಷವೇನೆಂದರೆ ಈ ಕಲಿಕೆಯಲ್ಲಿ ಯಾರೂ ಗೆಲ್ಲುವುದಿಲ್ಲ ಎಲ್ಲಾ ಮಕ್ಕಳು ಭಾಗವಹಿಸಿ ಅನುಭವ ಪಡೆದುಕೊಳ್ಳುತ್ತಾರೆ ಸ್ಪರ್ಧಾ ರಹಿತ ಕಾರ್ಯಕ್ರಮವಾಗಿದ್ದು ಸಂತೋಷವಾಗಿ ಸೃಜನ ಶೀಲ ಕಲಿಕಾ ಚೇತರಿಕೆ ಹಬ್ಬವಾಗಿದೆ ಎಂದು ತಿಳಿಸಿದರು.


 ಇದೇ ಸಂದರ್ಭದಲ್ಲಿ ಕೊಪ್ಪ ಕ್ಲಸ್ಟರ್ ಬಿ.ಆರ್.ಸಿ ಮಧುಸೂದನ್ ಕೆ ಎಸ್ ಮಾತನಾಡಿ ಕೊಪ್ಪ ಕ್ಲಸ್ಟರ್ನಲ್ಲಿ ಇಂದು ಕಲಿಕಾ ಹಬ್ಬ ಕಾರ್ಯಕ್ರಮ ನಡೆಯುತ್ತಿದೆ ಗುಬ್ಬಿ ತಾಲೂಕಿನಲ್ಲಿ 30 ಕ್ಲಸ್ಟರ್ ಗಳಿದ್ದು ಇಂದು 16 ಕ್ಲಸ್ಟರ್ ಗಳಲ್ಲಿ ಕಲಿಕಾ ಹಬ್ಬವನ್ನು ಆಚರಿಸುತ್ತಿದ್ದೇವೆ ಮಕ್ಕಳಲ್ಲಿ ವಿನೋತನವಾದ ಚಟುವಟಿಕೆಗಳನ್ನು ಆಯೋಜನೆ ಮಾಡುವುದರ ಮೂಲಕ ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣವನ್ನು ಕಾತರಿ ಮಾಡುವ ನಿಟ್ಟಿನಲ್ಲಿ ಈ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಕಲಿಕಾ ಹಬ್ಬವನ್ನು ಆಚರಣೆ ಮಾಡಿದ್ದೇವೆ, ಈ ಕಾರ್ಯಕ್ರಮದಲ್ಲಿ ಮಕ್ಕಳು ಸಕ್ರಿಯವಾಗಿ ಪಾಲ್ಗೊಂಡು ಅದನ್ನು ತಮ್ಮ ಶಾಲೆಗಳಿಗೆ ಕೊಂಡೊಯ್ದು ಇನ್ನುಳಿದ ಮಕ್ಕಳಿಗೆ ಪ್ರೇರೇಪಣೆ ನೀಡಲು ಈ ಕಲಿಕಾ ಹಬ್ಬವನ್ನು ಆಚರಿಸುತ್ತೇವೆ ಎಂದು ತಿಳಿಸಿದರು. ಎಂದು ತಿಳಿಸಿದರು


 ಈ ಕಾರ್ಯಕ್ರಮದಲ್ಲಿ ಗ್ರಾ, ಪಂ, ಅಧ್ಯಕ್ಷೆ ಚಂದ್ರಕಲಾ ಶಂಕರ್, ಶ್ರೀನಿವಾಸ್ ಕೆ.ವಿ ಸಿಆರ್‌ಪಿ, ಟಿ.ಎಲ್ ಸುಬ್ಬರಾಯ್ ಮು. ಶಿ. ಹೊನ್ನಶೆಟ್ಟಿಹಳ್ಳಿ, ಕೋಮಲ ವೈ.ಎನ್, ಶ್ರೀನಿವಾಸ್ ಮೂರ್ತಿ, ಸಂಪನ್ಮೂಲ ವ್ಯಕ್ತಿಗಳಾದ ನಳಿನ, ಅಂಬುಜಾಕ್ಷಮ್ಮ, ಪದ್ಮಾವತಿ, ಸಿಂಧು ಎಂ.ಜಿ, ಶೋಭಾ ಎಂ, ರೇಣುಕಾ ಜಿ.ಆರ್, ಎಲ್ಲಾ ಶಾಲೆಯ ಎಸ್. ಡಿ.ಎಂ.ಸಿ ಅಧ್ಯಕ್ಷರು, ಸದಸ್ಯರುಗಳು, ಊರಿನ ಮುಖಂಡರಾದ ಹರೀಶ್ ಹಾಗೂ ಗ್ರಾಮಸ್ಥರು ಹಾಜರಿದ್ದರು.


ವರದಿ : ಮಡೇನಹಳ್ಳಿ ಮಂಜು.

ಕಾಮೆಂಟ್‌‌ ಪೋಸ್ಟ್‌ ಮಾಡಿ

Please Select Embedded Mode To Show The Comment System.*

ನವೀನ ಹಳೆಯದು