ಒಣ ಬೇಸಾಯಕ್ಕೆ ನೀರಾವರಿಯ ಶಕ್ತಿ ತುಂಬುವಂತೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಗೆ ಶಾಸಕ ಎಂ.ವಿ.ವೀರಭದ್ರಯ್ಯ ಮನವಿ ಮಾಡಿದರು.


ಮಧುಗಿರಿ : ಮಧುಗಿರಿ ಉಪವಿಭಾಗದ ಮಧುಗಿರಿ, ಕೊರಟಗೆರೆ, ಶಿರಾ ಹಾಗೂ ಪಾವಗಡದಲ್ಲಿ ಒಣ ಬೇಸಾಯ ಮಾಡುತ್ತಿದ್ದು, ಕೇವಲ ಹೈನುಗಾರಿಕೆ ನಂಬಿ ಬದುಕುತ್ತಿರುವ ಈ ಭಾಗದ ಜನತೆಯ ಒಣ ಬೇಸಾಯಕ್ಕೆ ನೀರಾವರಿಯ ಶಕ್ತಿ ತುಂಬುವಂತೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಗೆ ಶಾಸಕ ಎಂ.ವಿ.ವೀರಭದ್ರಯ್ಯ ಮನವಿ ಮಾಡಿದರು.



ಪಟ್ಟಣದ ಸಿಪಿಸಿ ಸಭಾ ಭವನದಲ್ಲಿ ನಡೆದ ಹೆಚ್ಡಿಕೆ ಜೊತೆಗಿನ ರೈತ ಸಂಕ್ರಾಂತಿ ವರ್ಚುವಲ್ ಸಭೆಯಲ್ಲಿ ಈ ಇಂಗಿತವನ್ನು ವ್ಯಕ್ತಪಡಿಸಿ ಮಾತನಾಡಿದರು.


ಹೇಳಿಕೇಳಿ ಮಧುಗಿರಿಯು ಬರ ಪೀಡಿತ ತಾಲೂಕಾಗಿದ್ದು ಈ ಭಾಗದಲ್ಲಿ ಶೇಂಗಾ, ಜೋಳ ಹಾಗೂ ಹೈನುಗಾರಿಕೆಯನ್ನು ನಂಬಿ ಬದುಕು ಸಾಗಿಸುತ್ತಿದ್ದಾರೆ. ಈ ಭಾಗಕ್ಕೆ ಯಾವುದೇ ಕೈಗಾರಿಕೆಗಳಿಲ್ಲದೆ ನಿರುದ್ಯೋಗ ಸಮಸ್ಯೆ ಹೆಚ್ಚಾಗಿದೆ. ಅದಕ್ಕಾಗಿ ಶಾಶ್ವತ ನೀರಾವರಿಯ ಅವಶ್ಯಕತೆ ಇದ್ದು ಈ ಭಾಗದ ರೈತರ ಆರ್ಥಿಕ ಶಕ್ತಿಯನ್ನು ಹೆಚ್ಚಿಸಲು ಮಧುಗಿರಿ ಉಪ ವಿಭಾಗವನ್ನ ಭದ್ರಾ ಮೇಲ್ದಂಡೆಗೆ ಸೇರಿಸಿ ಜಿಲ್ಲಾಕೇಂದ್ರ ಮಾಡಲು ಒತ್ತಾಯಿಸಲಾಯಿತು. 


ಪುರಸಭಾ ಸದಸ್ಯ ಎಂ.ಆರ್. ಜಗನ್ನಾಥ್ ಮಾತನಾಡಿ, ಈ ಭಾಗದ ರೈತರುಗಳು ಒಣ ಬೇಸಾಯವನ್ನು ನಂಬಿದ್ದು ಆರ್ಥಿಕ ಶಕ್ತಿ ಇಲ್ಲದೆ ಬಡವರಾಗಿದ್ದಾರೆ. ಉನ್ನತ ಶಿಕ್ಷಣ ಸಂಸ್ಥೆಗಳಿಲ್ಲದೆ ಕೈಗೆಟುಕದ ಶಿಕ್ಷಣದ ಅರಿವಿಲ್ಲದೆ ರೈತರ ಮಕ್ಕಳಿಗೆ ಉದ್ಯೋಗವಿಲ್ಲ. ಹಾಗೂ ಕಂಕಣ ಭಾಗ್ಯ ಕೂಡಿ ಬಂದರೂ ಹೆಣ್ಣನ್ನು ಕೊಡಲು ಹಿಂಜರಿಯುವಂತಹ ಕಾಲ ಬಂದಿದೆ. ಅದಕ್ಕಾಗಿ ರೈತರ ಮಕ್ಕಳಿಗೆ ಉಚಿತ ಶಿಕ್ಷಣ, ಉದ್ಯೋಗ ನೀಡುವುದರ ಮೂಲಕ ಶಾಶ್ವತ ನೀರಾವರಿಯ ಯೋಜನೆ ಜೊತೆಗೆ ಉದ್ಯೋಗವನ್ನು ಸೃಷ್ಟಿಸಲು ಕೈಗಾರಿಕಾ ವಲಯವನ್ನು ಶೀಘ್ರ ಆರಂಭಿಸಲು ಒತ್ತಾಯಿಸಿದರು.


 ಮುಖಂಡ ನಾಸಿರ್ ಮಾತನಾಡಿ, ರೈತರಿಂದ 25000 ಹಣ ಪಡೆದ ಬೆಸ್ಕಾಂ ಗಳು ಟಿಸಿ 

 ತಾರತಮ್ಯ ಮಾಡುತ್ತಿದೆ. ಕೊಳವೆಬಾವಿ ಕೊರೆಸಿದ ರೈತ ವಿದ್ಯುತ್ ಸಂಪರ್ಕ ಸಿಗದೆ ಹತಾಶರಾಗಿದ್ದು ಬೆಸ್ಕಾಂ ಹಾಗೂ ರೈತರ ನಡುವೆ ಯಾವುದೇ ಸಮಸ್ಯೆಗಳು ಬಾರದಂತೆ ಯೋಜನೆ ರೂಪಿಸಬೇಕು ಎಂದು ಹೆಚ್ಡಿಕೆ ಯವರಲ್ಲಿ ಮನವಿ ಮಾಡಿದರು. 


ಮುಖಂಡರುಗಳ ಸಲಹೆ ಹಾಗೂ ಸಮಸ್ಯೆಗಳನ್ನು ಆಲಿಸಿದ ಕುಮಾರಸ್ವಾಮಿ ಈಗಾಗಲೇ ರೈತ ಚೈತನ್ಯ ಯೋಜನೆ ಅಡಿಯಲ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸ್ಥಳೀಯ ರೈತರ ಉತ್ಪನ್ನಗಳನ್ನು ಸಂರಕ್ಷಿಸಿಡಲು ಒಂದೊಂದು ಶೀತಲೀಕರಣ ಘಟಕವನ್ನು ಸ್ಥಾಪಿಸಲಾಗುವುದು. ಉತ್ಪನ್ನ ಹಾಕಿದ ರೈತರಿಗೆ ಹಣದ ಅವಶ್ಯಕತೆ ಇದ್ದಲ್ಲಿ ಬೆಳೆಯ ಶೇ.50 ರಷ್ಟು ಹಣವನ್ನು ಮುಂಗಡವಾಗಿ ರೈತರಿಗೆ ನೀಡುವುದು, ಬಿತ್ತನೆ ಬೀಜಗಳ ಖರೀದಿಸಿ ಮುಂಗಾರು ವ್ಯವಸಾಯ ಕೈಗೊಳ್ಳಲು ಸರ್ಕಾರದಿಂದಲೇ ಎಕರೆಗೆ 10 ಸಾವಿರ ಹಣವನ್ನು ನೀಡಿ ಬೆಳೆದ ಬೆಳೆಗೆ ಸರ್ಕಾರವೇ ಮಾರುಕಟ್ಟೆಯನ್ನು ನಿರ್ಮಿಸಿ ಕೊಡಲಾಗುವುದು. ಜೊತೆಗೆ ಮಧುಗಿರಿಯ ಸಮಸ್ಯೆಗಳಾದ ಎತ್ತಿನಹೊಳೆ, ಏಕಶಿಲಾ ಬೆಟ್ಟಕ್ಕೆ ರೋಪ್ ವೇ, ಜಿಲ್ಲಾ ಕೇಂದ್ರ ಹಾಗೂ ಕೈಗಾರಿಕೆಗಳ ಸ್ಥಾಪನೆಗೆ ನಮ್ಮ ಸರ್ಕಾರ ಬಂದ ತಕ್ಷಣ ಕ್ರಮ ಕೈಗೊಂಡು ಈ ಭಾಗದ ಶಾಶ್ವತ ಸಮಸ್ಯೆಗಳನ್ನ ನಿವಾರಿಸಿ ಈ ಭಾಗದ ರೈತರಲ್ಲಿ, ಯುವಕರಲ್ಲಿ ನವ ಚೈತನ್ಯವನ್ನು ತುಂಬಲು ಮುಂದಾಗುತ್ತೇನೆ ಆದರೆ ಇವೆಲ್ಲ ಪೂರ್ನಗೊಳಿಸಲು ನನಗೆ ಈ ಬಾರಿ ಐದು ವರ್ಷಗಳ ಸಂಪೂರ್ಣ ಸರ್ಕಾರ ಬೇಕು. ಈ ಬಾರಿ ನನ್ನನ್ನು ಪರೀಕ್ಷೆ ಮಾಡಿ ನಿಮ್ಮೆಲ್ಲರ ಸಮಸ್ಯೆಗಳಿಗೆ ಪರಿಹಾರ ಒದಗಿಸಿಕೊಡುತ್ತೇನೆ ಎಂದು ಭರವಸೆ ನೀಡಿದರು.


ಈ ಸಂದರ್ಭದಲ್ಲಿ ಪುರಸಭೆ ಸದಸ್ಯ ಕೆ.ನಾರಾಯಣ್, ಮುಖಂಡರಾದ ತುಂಗೋಟಿ ರಾಮಣ್ಣ, ಶ್ರೀನಿವಾಸ್, ಸಿಡದರಗಲ್ಲು ಶ್ರೀನಿವಾಸ್, ನಾಸೀರ್, ಜೆಡಿಎಸ್ ಅಧ್ಯಕ್ಷ ಬಸವರಾಜ್, ಗುಂಡಗಲ್ಲು ಶಿವಣ್ಣ, ಹಾಗೂ ನೂರಾರು ರೈತರು ಜೊತೆಗಿದ್ದರು.


ವರದಿ : ಮಧುಗಿರಿ ಬಾಲು ಪಣಿಂದ್ರ.

ಕಾಮೆಂಟ್‌‌ ಪೋಸ್ಟ್‌ ಮಾಡಿ

Please Select Embedded Mode To Show The Comment System.*

ನವೀನ ಹಳೆಯದು