ಪಾವಗಡ: ಸಂಘಟನೆಯಿಂದ ಮಾತ್ರ ಸಮುದಾಯಗಳ ಅಭಿವೃದ್ಧಿ ಸಾಧ್ಯ ಎಂದು ವೈಷ್ಣವ ಸಂಘದ ಅಧ್ಯಕ್ಷ ಭೀಮನಕುಂಟೆ ಸಂಪತ್ ತಿಳಿಸಿದರು
ಪಟ್ಟಣದಲ್ಲಿ ಮಂಗಳವಾರ ವೈಷ್ಣವ ಸಂಘದ ಕ್ಯಾಲೆಂಡರ್ ಬಿಡುಗಡೆ ಮಾಡಿ ಮಾತನಾಡಿದ ಅವರು ತಾಲ್ಲೂಕಿನಲ್ಲಿ ವೈಷ್ಣವ ಮತಸ್ಥರು ಹಲವು ಕಡೆಗಳಲ್ಲಿ ವಾಸವಿದ್ದು ಅರ್ಚಕ ವೃತ್ತಿಯನ್ನೆ ನಂಬಿ ಬದುಕು ಸಾಗಿಸುತ್ತಿದ್ದಾರೆ, ಸಾಮಾಜಿಕವಾಗಿ , ಆರ್ಥಿಕವಾಗಿ ಹಿಂದುಳಿದವರಾಗಿದ್ದಾರೆ , ಸರ್ಕಾರಗಳು ಸಹ ವೈಷ್ಣವ ಸಮುದಾಯವನ್ನು ನಿರ್ಲಕ್ಷ್ಯ ಮಾಡಿದೆ ಆದ್ದರಿಂದ ವೈಷ್ಣವರು ಇನ್ನಷ್ಟೂ ಒಗ್ಗೂಡಿ ಸಂಘಟಿತರಾಗಬೇಕು ಎಂದು ತಿಳಿಸಿದರು
ಜಿಲ್ಲಾ ನಿರ್ದೇಶಕ ಪಾಂಡು ಮಾತನಾಡಿ ನಮ್ಮ ಸಮಾಜದ ಬಂಧುಗಳು ಬೇಧ- ಭಾವ - ಭಿನ್ನಾಭಿಪ್ರಾಯ ಮರೆತು ಎಲ್ಲರೂ ಒಂದಾಗಿ ಸಂಘಟನೆಯ ಮೂಲಕ ಸಮುದಾಯವನ್ನು ಮುನ್ನಲೆಗೆ ತರಬೇಕು ಎಂದು ತಿಳಿಸಿದರು
ಇದೇ ಸಂದರ್ಭದಲ್ಲಿ ತಾಲ್ಲೂಕು ವೈಷ್ಣವ ಸಂಘದ ಮೂಲಕ ಹೊರತಂದಿರುವ ವಾರ್ಷಿಕ ಕ್ಯಾಲೆಂಡರ್ ಬಿಡುಗಡೆ ಮಾಡಲಾಯಿತು
ಕಾಯ೯ಕ್ರಮದಲ್ಲಿ ಮಾಜಿ ಅಧ್ಯಕರಾದ ಪೆಮ್ಮನಹಳ್ಳಿ ಶ್ರೀನಾಥ್, ಗುಂಡಾರ್ಲಹಳ್ಳಿ ಶ್ರೀಧರ್ ಮೂರ್ತಿ, ಕೇಶವಮೂರ್ತಿ, ಕಾರ್ಯದರ್ಶಿ ಮದ್ದೆ ರಾಮು, ಖಜಾಂಚಿ ಅನ್ನಪೂರ್ಣಮ್ಮ, ರಾಜ್ ಕುಮಾರ್, ರವಿ, ನಾಗರಾಜಪ್ಪ ನಿರ್ದೇಕರುಗಳಾದ ದರ್ಶನ್, ನಾಗರಾಜು, ಶ್ರೀನಿವಾಸ್, ಮಾರುತಿ, ಲಕ್ಷ್ಮೀ ಪತಿ, ಆನಂದಪ್ಪ, ಕಲಾವತಿ, ಪುಷ್ಪಲತಾ, ಇನ್ನಿತರ ಮುಖಂಡರು ಹಾಜರಿದ್ದರು.
ವರದಿ : ಪಾವಗಡ ಶ್ರೀನಾಥ್.
