ಮಧುಗಿರಿ : ಧರ್ಮದ ಪರಿಪಾಲನೆಗಾಗಿ ಮತ್ತು ಲೋಕಕಲ್ಯಾಣಕ್ಕಾಗಿ ಸತತ 11ನೇ ವರ್ಷದ ಧರ್ಮಸ್ಥಳ ಕ್ಷೇತ್ರಕ್ಕೆ ಪಾದಯಾತ್ರೆ ನಡೆದಿದ್ದು ಶಿವರಾತ್ರಿಯಂದು ಪೂಜೆ ಸಲ್ಲಿಸಲಿದ್ದೇವೆ ಎಂದು ಪಾದಯಾತ್ರೆಯ ಮುಖ್ಯಸ್ಥ ಆನಂದ್ ತಿಳಿಸಿದರು.
ಪಟ್ಟಣದ ವೇಣುಗೋಪಾಲ ಸ್ವಾಮಿ ದೇಗುಲದಲ್ಲಿ ದಾನಿಗಳಿಂದ ಪ್ರಸಾದ ಸ್ವೀಕರಿಸಿ ಮಾತನಾಡಿದ ಅವರು, ಈ ಧರ್ಮಸ್ಥಳ ಯಾತ್ರೆಯು ಶ್ರೀ ಮಂಜುನಾಥ ಸ್ವಾಮಿ ಪಾದಯಾತ್ರೆ ಸಮಿತಿಯಿಂದ ಸತತ 11ನೇ ವರ್ಷಕ್ಕೆ ಕಾಲಿಟ್ಟಿದೆ 2 ತಂಡಗಳಾಗಿ ತಾಲೂಕಿನ ಕೋಡ್ಲಾಪುರ ಹಾಗೂ ಸುತ್ತಲಿನ ಹಳ್ಳಿಗಳಿಂದ ಯಾತ್ರಾರ್ಥಿಗಳು -É.10 ರಂದು ಪಾದಯಾತ್ರೆ ಆರಂಭಿಸಿ ಸತತ 7 ದಿನಗಳ ನಂತರ ಶ್ರೀ ಕ್ಷೇತ್ರ ಧರ್ಮಸ್ಥಳವನ್ನು ಸೇರಲಿದ್ದೇವೆ. ಪಾದಯಾತ್ರೆಯು ಮಧುಗಿರಿ, ಸಿರಾ, ಬುಕ್ಕಾಪಟ್ಟಣ, ಹುಳಿಯಾರು, ಬಾಣಾವರ, ಜಾವಗಲ್, ಹಳೇಬೀಡು,ಬೇಲೂರು, ಕೊಟ್ಟಿಗೆಹಾರ, ಉಜಿರೆ ಮೂಲಕ ಧರ್ಮಸ್ಥಳವನ್ನು ಸೇರಲಿದ್ದೇವೆ. ದಾರಿಯುದ್ದಕ್ಕೂ ದಾನಿಗಳ ಸಹಕಾರದಿಂದ ಯಾತ್ರೆ ಸಾಗಲಿದೆ ಎಂದರು.
ಧಾರ್ಮಿಕ ಮುಖಂಡ ಡಾ.ಎಂ.ಜಿ.ಶ್ರೀನಿವಾಸಮೂರ್ತಿ ಮಾತನಾಡಿ, ಈ ಯಾತ್ರೆ 2 ತಂಡವಾಗಿ ಪ್ರತಿ ವರ್ಷ ಪಾದಯಾತ್ರೆ ನಡೆಸಲಿದ್ದಾರೆ. ಈ ಯಾತ್ರೆಯು ಯಾವುದೇ ಸ್ವಾರ್ಥವಿಲ್ಲದೆ ಸಮಾಜ ಕಲ್ಯಾಣಕ್ಕಾಗಿ ನಡೆಸುತ್ತಿದ್ದು, ಎಲ್ಲರೂ ಏಕಾಗ್ರತೆಯಿಂದ
ಯಾತ್ರೆಯಲ್ಲಿ ಭಾಗವಹಿಸುತ್ತಾರೆ. ಪ್ರತಿ ಬೆಳಿಗ್ಗೆ, ಸಂಜೆ ಭಜನೆ ಕಾರ್ಯಕ್ರಮವಿದ್ದು, ದೇವಸ್ಥಾನಗಳಲ್ಲಿ ತಂಗುತ್ತಾರೆ. ಇಂತಹ ಕಾರ್ಯಕ್ಕೆ ಮುಂದಾದ ಈ ಭಕ್ತರಿಗೂ ಹಾಗೂ ಹಾಯ ಮಾಡಿದವರಿಗೆ ಮಂಜುನಾಥಸ್ವಾಮಿಯ ಅನುಗ್ರಹವಾಗಲಿ ಎಂದರು.
ಕೋಡ್ಲಾಪುರದ ಉದ್ಯಮಿ ಮಧು ಮಾತನಾಡಿ, ಯಾತ್ರೆ ಆರಂಭವಾದಾಗಿನಿಂದ ಅನ್ನ ಪ್ರಸಾದದ ವ್ಯವಸ್ಥೆಯನ್ನು ಮಾಡುತ್ತಿದ್ದು ಅದನ್ನು ಸದಾಕಾಲ ಮುಂದುವರೆಸುತ್ತೇವೆ. ಯಾತ್ರೆಯಲ್ಲಿ ಯಾವುದೇ ಸಮಸ್ಯೆಯಾಗದಂತೆ ದರ್ಶನ ಭಾಗ್ಯ ಸಿಗಲಿ ಎಂದರು.
ಈ ಸಂದರ್ಭದಲ್ಲಿ ಭಕ್ತರು ಹಾಗೂ ಸಹಪಾಠಿಗಳು ಇದ್ದರು.
ವರದಿ : ಮಧುಗಿರಿ ಬಾಲುಪಣಿಂದ್ರ.
