ಶಿರಾ: ತಾಲ್ಲೂಕಿನ ಗ್ರಾಮಕ್ಕೆ ಸಮೀಪದ ಸುಮಾರು ದೂರದ ಸಮೀಪದ ಜಮೀನೊಂದರಲ್ಲಿ ಕರಡಿ ಪ್ರತ್ಯಕ್ಷವಾಗಿದ್ದು ಈ ಭಾಗದ ಗ್ರಾಮಸ್ಥರಲ್ಲಿ, ರೈತರಲ್ಲಿ, ಆತಂಕ ಮೂಡಿದೆ.
ಶಿರಾ ತಾಲ್ಲೂಕಿನ ಬುಕ್ಕ ಪಟ್ಟಣ ಹೋಬಳಿಯ ಬೆಂಚೆಬಸವನಹಳ್ಳಿಯಲ್ಲಿ ಇಂದು ಸಂಜೆ ಸುಮಾರು ೫ ಗಂಟೆಯ ಸಮಯದಲ್ಲಿ ರಸ್ತೆಯ ಮೂಲಕ ಜಮೀನಿನ ಕಡೆ ಹಾದು ಹೋಗುವ ದೃಶ್ಯವನ್ನು ತಮ್ಮ ಮೊಬೈಲ್ ಫೋನ್ ನಲ್ಲಿ ಗ್ರಾಮಸ್ಥರು ಸೆರೆಹಿಡಿದಿದ್ದಾರೆ ದಿನನಿತ್ಯದಂತೆ ಹೊಲಕ್ಕೆ ಹೋದಾಗ ಹೊಲದ ಸಮೀಪದಲ್ಲೆ ಕರಡಿ ಕಾಣಿಸಿಕೊಂಡಿದೆ, ವಿಡಿಯೊ ಮಾಡಲು ಮುಂದಾದಾಗ ಇವರನ್ನ ಕಂಡ ತಾಯಿ ಮತ್ತು ಮರಿ ಕರಡಿ ಅಲ್ಲಿಂದ ಜಮೀನುಗಳ ಕಡೆ ಹೋಗಿದೆ. ಕರಡಿ ಕಂಡ ಇವರು ಭಯದಿಂದ ಹೊಲಕ್ಕೆ ಹೋಗದೆ ಅಲ್ಲಿಂದ ವಾಪಸ್ ಮನೆಕಡೆ ಹಿಂತಿರುಗಿದ್ದಾರೆ.
ಈ ಭಾಗದ ಬಹುತೇಕ ಹೋಲ ಮತ್ತು ತೋಟಗಳು, ಸಮೃದ್ಧವಾಗಿ ಬೆಳೆದು ನಿಂತಿವೆ ಇಲ್ಲಿನ ರೈತರ ಬೆಳೆ ದಿನನಿತ್ಯ ಶಾಲಾ ಕಾಲೇಜುಗೆ ಇದೇ ಮಾರ್ಗವಾಗಿ ಮಕ್ಕಳು ನಡಿಗೆಯಲ್ಲೆ ಸಂಚರಿಸಬೇಕು, ಸುತ್ತಮುತ್ತಲಿನ ಗ್ರಾಮಸ್ಥರು ದಿನನಿತ್ಯದ ಮನೆ ಬಳಕೆಯ ವಸ್ತು, ದಿನಸಿ ಸಾಮಾಗ್ರಿಗಳನ್ನು ತರಲು ರಸ್ತೆಯ ಮೂಲಕ ನಡಿಗೆಯಲ್ಲೆ ಸಂಚರಿಸುವ ಪ್ರಸಂಗವಿದೆ, ಸಾರ್ವಜನಿಕರು, ರೈತರು, ಜಾನುವಾರುಗಳು ದಿನನಿತ್ಯ ಓಡಾಡಲು ಇರುವುದು ಇದೇ ರಸ್ತೆ, ಈಗ ಈ ಮಾರ್ಗದಲ್ಲಿ ಕರಡಿ ಪ್ರತ್ಯಕ್ಷವಾದ ಸುದ್ಧಿ ತಿಳಿದು ಭಯದ ವಾತಾವರಣ ಸೃಷ್ಟಿಯಾಗಿದೆ.
ಹೊಲಗಳಿಗೆ ಹೋಗುವ ರಸ್ತೆಯ ಎರಡು ಬದಿಗಳಲ್ಲಿ ಗಿಡಗಂಟೆಗಳು ದಟ್ಟವಾಗಿ ಬೆಳೆದು ನಿಂತಿವೆ, ಹೊಲ ತೋಟಗಳಿಗೆ ಹೋಗಲು ಆತಂಕ ಎದುರಾಗಿದೆ ಎಂಬುದು ಇಲ್ಲಿನ ರೈತರ ಮಾತು.
ಯಾವುದೇ ಅನಾಹುತ ಆಗದ ಮುಂಚೆ ಸಂಬಂಧಪಟ್ಟ ಇಲಾಖೆಯವರು ಬೇಗನೆ ಕರಡಿಯನ್ನು ಹಿಡಿದು ಜನರಲ್ಲಿ ಮೂಡಿರುವ ಭಯವನ್ನು ದೂರ ಮಾಡಲು ಮುಂದಾಗಬೇಕು ಎಂದು ಬೆಂಚೆ .ಬಸವನ ಹಳ್ಳಿ ಹೊಸ ಬಿಜಿಂಮ್ ಬೆಳ್ಳ ಸುತ್ತಲಿನ ಗ್ರಾಮಸ್ಥರು, ರೈತರು, ಸಾರ್ವಜನಿಕರು ಒತ್ತಾಯಿಸಿದ್ದಾರೆ.
ವರದಿ : ಶಿರಾ ಶ್ರೀಮಂತ್.
