ಗುಬ್ಬಿ : ಕಾಡುಗೊಲ್ಲರನ್ನು ಎಸ್ ಟಿ ಸಮುದಾಯಕ್ಕೆ ಸೇರಿಸಲು ಎಲ್ಲಾ ರೀತಿಯ ಅವಕಾಶಗಳಿದ್ದರೂ ಸಹ ಬಿಜೆಪಿ ಸರ್ಕಾರ ಸೇರಿಸದೆ ನಮಗೆ ಅನ್ಯಾಯ ಮಾಡಿದೆ ಕಾನೂನು ಸಚಿವರು ನಮ್ಮ ಕಾಡುಗೊಲ್ಲ ಸಮುದಾಯಕ್ಕೆ ದ್ರೋಹ ಮಾಡಿದ್ದಾರೆ ಎಂದು ಆರೋಪಿಸಿ ಕಾಡುಗೊಲ್ಲ ಸಮುದಾಯದ ಜಿಲ್ಲಾ ಅಧ್ಯಕ್ಷ ಗಂಗಾಧರ್ ಆಕ್ರೋಶ ವ್ಯಕ್ತಪಡಿಸಿದರು.
ಪಟ್ಟಣದ ಕಾಡುಗೊಲ್ಲರ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಎಸ್ ಟಿ ಮೀಸಲಾತಿಗೆ ಸೇರಿಸಲು ಎಲ್ಲಾ ರೀತಿಯ ಅವಕಾಶವಿದೆ ಎಂದು ಸದನದಲ್ಲಿ ಮಾತನಾಡಿದ್ದು ನೀವೇ ಅದಕ್ಕೆ 224 ಶಾಸಕರು ಕೂಡ ಯಾವುದೇ ತಕರಾರು ಇಲ್ಲದೆ ಸುಮ್ಮನಿದ್ದರು. ಎರಡು ಸದನಗಳಲ್ಲಿಯೂ ಚರ್ಚಿಸಿದರು ಸಹ ಮೀಸಲಾತಿ ನೀಡುವಲ್ಲಿ ವಿಫಲವಾಗಿದ್ದು ಶಾಲಾ ದೃಢೀಕರಣ ಪತ್ರದಲ್ಲಿ ಕಾಡುಗೊಲ್ಲ ಎಂದು ನಮೂದಿಸಿದಾಗ ಮಾತ್ರ ಮೀಸಲಾತಿ ಪಡೆಯಬಹುದು ಎಂಬ ಮಾತನ್ನು ಈಗ ಹೇಳುತ್ತಿದ್ದೀರಾ ಇದೆಂಥ ಮಾತು ಎಂಬುದನ್ನು ನೀವೇ ಅರ್ಥಮಾಡಿಕೊಳ್ಳಬೇಕು ಈಗಾಗಲೇ ನ್ಯಾಯಾಲಯದಲ್ಲಿ ಅದರ ಬಗ್ಗೆ ಮಾಹಿತಿಯು ಇದ್ದು ಶಾಲಾ ದೃಢೀಕರಣ ಪತ್ರಕ್ಕೂ ಮೀಸಲಾತಿ ನೀಡುವುದಕ್ಕೂ ಸಂಬಂಧವಿಲ್ಲ ಎಂಬುದು ನಿಮಗೆ ಗೊತ್ತಿದೆ ಆದರೂ ಸಹ ಯಾಕೆ ಈ ರೀತಿಯ ಧೋರಣೆಯನ್ನು ತೆಗೆದುಕೊಂಡಿದ್ದೀರಿ ಎಂಬುದನ್ನು ತಿಳಿಸಬೇಕು ಮಾರ್ಚ್ 13ಕ್ಕೆ ದೊಡ್ಡ ಮಟ್ಟದಲ್ಲಿ ಪ್ರತಿಭಟನೆ ಹಾಗೂ ಸಮಾವೇಶವನ್ನು ಮಾಡಿ ನಮ್ಮ ಶಕ್ತಿ ಏನೆಂಬುದನ್ನು ತೋರಿಸುತ್ತೇವೆ ರಾಜ್ಯದ 40 ವಿಧಾನಸಭಾ ಕ್ಷೇತ್ರಗಳಲ್ಲಿ ನಮ್ಮ ಸಮುದಾಯವಿದೆ ಎಂಬುದನ್ನು ಬಿಜೆಪಿ ಸರ್ಕಾರ ಅರ್ಥ ಮಾಡಿಕೊಳ್ಳದಿದ್ದರೆ ಮುಂದಿನ ದಿನದಲ್ಲಿ ನಿಮ್ಮ ಪಕ್ಷಕ್ಕೆ ನಮ್ಮ ಯಾವುದೇ ಮತಗಳು ಬರುವುದಿಲ್ಲ ಎಂದು ಎಚ್ಚರಿಕೆಯನ್ನು ನೀಡಿದರು.
ಕಾಡು ಗೊಲ್ಲರ ಮುಖಂಡ ಬಸವರಾಜು ಮಾತನಾಡಿ ರಾಜ್ಯ ಮತ್ತು ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದು ರಾಜ್ಯದಿಂದ ಕಾಡುಗೊಲ್ಲ ಸಮುದಾಯವನ್ನು ಎಸ್ ಟಿ ಮೀಸಲಾತಿಗೆ ಸೇರಿಸಲು ನಿಯೋಗ ಕರೆದುಕೊಂಡು ಹೋಗುತ್ತೇವೆ ಎಂದು ಹೇಳಿ ಒಂದು ವರ್ಷ ಕಳೆದರೂ ಸಹ ಇದುವರೆಗೂ ಕರೆದುಕೊಂಡು ಹೋಗಿಲ್ಲ ಎಲ್ಲಾ ಸಭೆಗಳಲ್ಲೂ ಸಹ ಎಸ್ ಟಿ ಮೀಸಲಾತಿಗೆ ಸೇರಿಸುತ್ತೇವೆ ಎಂದು ಮೂಗಿಗೆ ತುಪ್ಪ ಸವರುತ್ತಿದ್ದೀರ ಬಿಟ್ಟರೆ ನಮಗೆ ನ್ಯಾಯ ಕೊಡಿಸುವಲ್ಲಿ ವಿಫಲರಾಗಿದ್ದೀರಿ ಎಂದು ಬಿಜೆಪಿ ಸರ್ಕಾರದ ವಿರುದ್ಧ ಗುಡುಗಿದರು.
ಮುಖಂಡ ಕೆ ಟಿ ಪ್ರಭು ಮಾತನಾಡಿ ಗೊಲ್ಲ ಸಮುದಾಯವೇ ಬೇರೆ ಬುಡಕಟ್ಟು ಕಾಡುಗೊಲ್ಲ ಸಮುದಾಯವೇ ಬೇರೆ ಹಾಗಾಗಿ ನಮ್ಮ ಹೋರಾಟ ರಾಜಕೀಯ ಹೊರತುಪಡಿಸಿ ನಮ್ಮ ಹಕ್ಕುಗಳನ್ನು ಪಡೆದುಕೊಳ್ಳಲು ಹಾಗಾಗಿ ನಾವೆಲ್ಲರೂ ಸಹ ಒಟ್ಟಾಗಿ ಹೋರಾಟ ಮಾಡುತ್ತಿದ್ದು ನಮ್ಮ ಜೊತೆಯಲ್ಲಿ ನಿಂತವರನ್ನು ನಾವು ಜೊತೆಗೆ ಕರೆದುಕೊಂಡು ಹೋಗುತ್ತೇವೆ ಎಂದು ತಿಳಿಸಿದರು
ಪತ್ರಿಕಾಗೋಷ್ಠಿಯಲ್ಲಿ ಕಾಡುಗೊಲ್ಲರ ತಾಲೂಕು ಸಂಘದ ಅಧ್ಯಕ್ಷ ಸಿದ್ದರಾಜು, ಜುoಜೇಗೌಡ,ಮಲ್ಲಿಕಾರ್ಜುನ, ಸ್ವಾಮಿ, ತೆಂಗು ಮತ್ತು ನಾರು ಅಭಿವೃದ್ಧಿ ಮಂಡಳಿ ಸದಸ್ಯ ಕೃಷ್ಣಮೂರ್ತಿ, ಗುರುಲಿಂಗಯ್ಯ, ಮಾಜಿ ಜಿಲ್ಲಾ ಪಂಚಾಯತಿ ಸದಸ್ಯ ಯಶೋದಮ್ಮ ಶಿವಣ್ಣ, ನಾಗರಾಜು, ಕಕ್ಕೆನಹಳ್ಳಿ ಮಂಜಣ್ಣ, ಶ್ರೀನಿವಾಸ್, ಸದಾಶಿವ, ಜಯಣ್ಣ, ಆಲೆಗೌಡ, ಚೇಳೂರು ಹಟ್ಟಿ ಶಿವಣ್ಣ ಗುಂಡಿರಯ್ಯ ಸೇರಿದಂತೆ ಇನ್ನಿತರರು ಹಾಜರಿದ್ದರು.
